ಭದ್ರಾವತಿಯ ವಿಐಎಸ್‌ಎಲ್‌ಗೆ ಗಣಿ ಮಂಜೂರು

Posted By: Gururaj
Subscribe to Oneindia Kannada

ಭದ್ರಾವತಿ, ಆಗಸ್ಟ್. 28 : ಭದ್ರಾವತಿಯ ವಿಐಎಸ್‌ಎಲ್ ಕಾರ್ಖನೆಯ ಬೇಡಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಬಳ್ಳಾರಿಯಲ್ಲಿ ಕಾರ್ಖನೆಗಾಗಿ 150 ಎಕರೆ ಗಣಿಯನ್ನು ಗುತ್ತಿಗೆಗೆ ನೀಡಲು ಸರ್ಕಾರ ಅನುಮೋದನೆ ನೀಡಿದೆ.

ಭದ್ರಾವತಿಯ ವಿಐಎಸ್‌ಎಲ್‌ಗೆ ಮುಚ್ಚುವ ಭೀತಿ ಇಲ್ಲ

ಸ್ವಂತ ಗಣಿ ಇಲ್ಲದ ಕಾರಣ ಹಲವು ವರ್ಷಗಳಿಂದ ವಿಐಎಸ್‌ಎಲ್ ನಷ್ಟ ಅನುಭವಿಸುತ್ತಿತ್ತು. ಕಾರ್ಖನೆಗೆ ಗಣಿಯನ್ನು ಗುತ್ತಿಗೆ ನೀಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಡಲಾಗಿತ್ತು. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಗಣಿ ಗುತ್ತಿಗೆ ನೀಡುವುದದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ.

Relief for VISP : Govt decides to reserves land for mining

ಗಣಿ ಮತ್ತು ಖನಿಜ ನೀತಿಯ ಅಡಿ ವಿಐಎಸ್‌ಎಲ್ ಕಾರ್ಖನೆಗೆ ಗಣಿ ಗುತ್ತಿಗೆ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪತ್ರ ವ್ಯವಹಾರಗಳು ಮುಗಿದ ಬಳಿಕ ಭಾರತೀಯ ಉಕ್ಕು ಪ್ರಾಧಿಕಾರದ ಅಧೀನದಲ್ಲಿರುವ ಕಾರ್ಖನೆಗೆ ಭೂಮಿಯನ್ನು ಹಸ್ತಾಂತರ ಮಾಡಲಾಗುತ್ತದೆ.

ಸರಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ ವಿಐಎಸ್ಎಲ್ ನ ಕಾರ್ಮಿಕರು

ಕಾರ್ಖನೆಗೆ ಗಣಿ ಮಂಜೂರು ಮಾಡಬೇಕು ಎಂಬುದು ಬಹಳ ಹಿಂದಿನ ಬೇಡಿಕೆಯಾಗಿತ್ತು. ವಿಐಎಸ್‌ಎಲ್ ಕೆಮ್ಮಣ್ಣುಗುಂಡಿಯಲ್ಲಿ ಮೊದಲು ಗಣಿ ಹೊಂದಿತ್ತು. ಆದರೆ, 2004ರಲ್ಲಿ ಪರವಾನಿಗೆ ಅವಧಿ ಮುಗಿದ ಬಳಿಕ ಅಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲಾಗಿತ್ತು.

2015ರಲ್ಲಿ ಕೇಂದ್ರ ಉಕ್ಕು ಮತ್ತು ಗಣಿ ಖಾತೆ ಸಚಿವರಾಗಿದ್ದ ನರೇಂದ್ರ ಸಿಂಗ್ ತೋಮರ್ ವಿಐಎಸ್‌ಎಲ್‌ಗೆ ಭೇಟಿ ನೀಡಿದ್ದರು. ಆಗ. ಕರ್ನಾಟಕ ಸರ್ಕಾರ ಗಣಿ ಮಂಜೂರು ಮಾಡಿದರೆ ಕಾರ್ಖನೆ ಪುನಶ್ಚೇತನಕ್ಕೆ 868 ಕೋಟಿ ರೂ.ಗಳ ಪ್ಯಾಕೇಜ್ ನೀಡುವುದಾಗಿ ಘೋಷಿಸಿದ್ದರು.

ಮೇ ತಿಂಗಳಿನಲ್ಲಿ ಕಾರ್ಖನೆಯ ನೌಕರರು ಗಣಿ ಮಂಜೂರು ಮಾಡಬೇಕು ಮತ್ತು ಖಾಸಗಿ ಅವರಿಗೆ ಕಾರ್ಖನೆ ಹಸ್ತಾಂತರ ಮಾಡುವ ನಿರ್ಧಾರ ಕೈಬಿಡಬೇಕು ಎಂದು ಬೃಹತ್ ಪ್ರತಿಭಟನೆ ನಡೆಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government decided to reserve 150 acres land in Sandur taluk, Ballari district for the Visvesvaraya Iron and Steel Plant (VISP) Bhadravati. Allotment of captive mine for iron ore has come as a major relief for the firm that has been incurring loss for the past few years.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ