ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಲೋಕಾಯುಕ್ತ ಕಂಟಕದಲ್ಲಿ ಯಡಿಯೂರಪ್ಪ, ಈಶ್ವರಪ್ಪ

|
Google Oneindia Kannada News

ಶಿವಮೊಗ್ಗ, ಜ.7 : ಬಿಜೆಪಿಗೆ ಮರಳಿ ಕೆಜೆಪಿ-ಬಿಜೆಪಿ ವಿಲೀನ ಪ್ರಕ್ರಿಯೆಯಲ್ಲಿ ತಲ್ಲೀನರಾಗಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಎರಡು ದೂರು ಸಲ್ಲಿಕೆಯಾಗಿದೆ. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿರುದ್ಧವೂ ಅಕ್ರಮ ಆಸ್ತಿಗಳಿಗೆ ದೂರು ದಾಖಲಾಗಿದೆ.

ಸೋಮವಾರ ವಕೀಲ ವಿನೋದ್ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಭದ್ರಾವತಿ ಹುಣಸಘಟ್ಟ ಬಳಿಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೈಗಾರಿಕಾ ಉದ್ದೇಶಕ್ಕೆ ಎಂದು ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ ಇತರರು 69 ಎಕರೆ ಜಮೀನು ಖರೀದಿಸಿದ್ದು, ಅಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

yeddyurappa, eshwarappa

ಈ ವಿಷಯಕ್ಕೆ ಸಂಬಂಧಿಸಿದಂತೆ ವಿನೋದ್‌ ಬೆಂಗಳೂರು ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಆದರೆ, ಇದು ಬೆಂಗಳೂರು ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿತ್ತು. ಆದ್ದರಿಂದ ಪುನಃ ಶಿವಮೊಗ್ಗ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಇದರ ಜೊತೆಗೆ ಪತ್ರಕರ್ತರ ಹೆಸರಿನಲ್ಲಿ 4 ಸೈಟು ಪಡೆದ ಆರೋಪ ಇದ್ದ ಯಡಿಯೂರಪ್ಪ ಪುತ್ರಿ ಅರುಣಾದೇವಿ ಬಗ್ಗೆ ಲೋಕಾಯುಕ್ತ ಸಲ್ಲಿಸಿದ್ದ 'ಬಿ' ರಿಪೋರ್ಟ್‌ ಪ್ರಶ್ನಿಸಿ ಮತ್ತೂಂದು ದೂರನ್ನು ವಿನೋದ್ ದಾಖಲಿಸಿದ್ದಾರೆ.

ಈಶ್ವರಪ್ಪ ವಿರುದ್ಧ ದೂರು : ವಕೀಲ ವಿನೋದ್ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ದೂರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ. ಹಿಂದೆ ಈ ವಿಷಯ ಕುರಿತು ವಿನೋದ್‌, ದೂರು ದಾಖಲಿಸಿದ್ದರು. ಆದರೆ, ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದ ಈಶ್ವರಪ್ಪ, ತಮ್ಮ ವಿರುದ್ಧದ ದೂರು ವಜಾಗೊಳಿಸುವಂತೆ ಮನವಿ ಮಾಡಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಕೆಎಸ್ ಈಶ್ವರಪ್ಪ ಉಪ ಮುಖ್ಯಮಂತ್ರಿಯಾಗಿದ್ದು, ಅವರ ವಿರುದ್ಧ ದೂರು ದಾಖಲಿಸಲು ರಾಜ್ಯಪಾಲರಿಂದ ಅನುಮತಿ ಪಡೆಯಬೇಕು. ಆದ್ದರಿಂದ ಪೂರ್ವಾನುಮತಿ ಪಡೆಯದೇ ದೂರು ದಾಖಲಿಸಲಾಗಿದೆ ಎಂದು ದೂರನ್ನು ರದ್ದು ಪಡಿಸಿತ್ತು. ಆದರೆ, ಎರಡು ದಿನಗಳ ಹಿಂದೆ ಸರ್ಕಾರ, ಈಶ್ವರಪ್ಪ ಈಗ ಜನಪ್ರತಿನಿಧಿಯಾಗದೆ ಇರುವುದರಿಂದ ಅವರ ಮೇಲೆ ದೂರು ದಾಖಲಿಸಲು ಅನುಮತಿ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಆದ್ದರಿಂದ ವಕೀಲ ವಿನೋದ್ ಕೆ.ಎಸ್.ಈಶ್ವರಪ್ಪ ವಿರುದ್ಧ ಮತ್ತೊಮ್ಮೆ ದೂರು ದಾಖಲಿಸಿದ್ದಾರೆ. ಈ ದೂರಿನ ವಿಚಾರಣೆ ಫೆ.4ಕ್ಕೆ ವಿಚಾರಣೆ ನಡೆಯಲಿದೆ. ಲೋಕಸಭೆ ಚುನಾವಣೆಗಾಗಿ ಉಭಯ ನಾಯಕರು ಸಿದ್ಧತೆ ಆರಂಭಿಸಿದ್ದರೆ, ವಕೀಲ ವಿನೋದ್ ಅವರ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದಾರೆ. ಇದರಿಂದ ಉಭಯ ನಾಯಕರಿಗೆ ಪುನಃ ಸಂಕಷ್ಟ ಎದುರಾಗಿದೆ

English summary
Advocate Vinod field private complaint against B.S.Yeddyurappa and KS Eshwarappa at Lokayukta Special Court Shimoga. KS Eshwarappa faces illegal assets charges and B.S.Yeddyurappa faces government land encroached allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X