ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಹೊಸ ಜೈಲಿನಲ್ಲಿ ವಿಚಾರಣಾಧೀನ ಖೈದಿ ಸಾವು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮಾರ್ಚ್ 01 : ಕೆಲವು ದಿನಗಳ ಹಿಂದೆ ಉದ್ಘಾಟನೆಗೊಂಡಿರುವ ಶಿವಮೊಗ್ಗದ ನೂತನ ಕಾರಾಗೃಹದಲ್ಲಿ ಖೈದಿಯೊಬ್ಬ ಮೃತಪಟ್ಟಿದ್ದಾನೆ. ಮೃತಪಟ್ಟ ವಿಚಾರಣಾಧೀನ ಖೈದಿ ಭದ್ರಾವತಿ ಮೂಲದವರು.

ಶಿವಮೊಗ್ಗ ನಗರದ ಹೊರವಲಯದ ಸೊಗಾನೆಯಲ್ಲಿರುವ ನೂತನ ಕಾರಾಗೃಹದಲ್ಲಿ ಅಸ್ವಸ್ಥಗೊಂಡಿದ್ದ ವಿಚಾರಣಾಧೀನ ಖೈದಿ ಮೂಡಲಗಿರಿಯಪ್ಪ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಖೈದಿ ಭದ್ರಾವತಿ ತಾಲೂಕು ಹೊಸನಂಜಾಪುರ ಮೂಲದವರಾಗಿದ್ದಾರೆ.

ಪರಪ್ಪನ ಅಗ್ರಹಾರದ 400 ಕೈದಿಗಳು ಡಿಗ್ರಿ ಪ್ರವೇಶಕ್ಕೆ ಸಿದ್ಧ!ಪರಪ್ಪನ ಅಗ್ರಹಾರದ 400 ಕೈದಿಗಳು ಡಿಗ್ರಿ ಪ್ರವೇಶಕ್ಕೆ ಸಿದ್ಧ!

ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಲಗಿರಿಯಪ್ಪ ಅವರನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು. ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

Shivamogga

ಎರಡು ದಿನದಿಂದ ಅಸ್ವಸ್ಥಗೊಂಡಿದ್ದ ಮೂಡಲಗಿರಿಯಪ್ಪ ಅವರಿಗೆ ಪ್ರತಿದಿನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಗುರುವಾರ ಬೆಳಗ್ಗೆ ಸಹ ಮೂಡಲಗಿರಿಯಪ್ಪ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಮಧ್ಯಾಹ್ನ 2 ಗಂಟೆಗೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಪೊಲೀಸರು ಥಳಿಸಿದ್ದೇ ಮೂಡಲಗಿರಿಯಪ್ಪ ಸಾವಿಗೆ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಜನವರಿ ತಿಂಗಳಿನಲ್ಲಿ ಶಿವಮೊಗ್ಗದ ನೂತನ ಜೈಲು ಉದ್ಘಾಟನೆಗೊಂಡಿತ್ತು. ಕಳೆದ ವಾರದಿಂದ ಹೊಸ ಕಾರಾಗೃಹಕ್ಕೆ ಖೈದಿಗಳನ್ನು ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಸರಣಿ ಹಂತಕ, ಸೈಕೋ ಜೈಶಂಕರ್ ಒಂದು ಕರಾಳ ನೆನಪು!ಸರಣಿ ಹಂತಕ, ಸೈಕೋ ಜೈಶಂಕರ್ ಒಂದು ಕರಾಳ ನೆನಪು!

English summary
Bhadravathi based Mudalagiriyappa died in Shivamogga new jail. Mudalagiriyappa arrested by Bhadravathi Rural police and in judicial custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X