ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುವೆಂಪು ಅವರ ಮನೆಯಲ್ಲಿ ಕಳ್ಳತನ ಮಾಡಿದವ ಸಿಕ್ಕಿಬಿದ್ದ

|
Google Oneindia Kannada News

ಶಿವಮೊಗ್ಗ, ನವೆಂಬರ್ 27 : ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಹಿಂದೆಯೂ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ದೇವಸ್ಥಾನಗಳಲ್ಲಿನ ಹುಂಡಿ ಹಣ ಕದಿಯುವುದನ್ನು ಕಾಯಕ ಮಾಡಿಕೊಂಡಿದ್ದ.

ಬಂಧಿತ ಆರೋಪಿಯನ್ನು ದಾವಣಗೆರೆ ತಾಲೂಕು ತುರ್ಚಘಟ್ಟದ ರೇವಣಸಿದ್ಧಪ್ಪ ಅಲಿಯಾಸ್ ಕಾಯಕದ ರೇವಣ್ಣ (45) ಎಂದು ಗುರುತಿಸಲಾಗಿದೆ. ಗುರುವಾರ ತಡರಾತ್ರಿ ದಾವಣಗೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. [ಕಳ್ಳರ ಪಾಲಾದ ರಾಷ್ಟ್ರಕವಿ ಕುವೆಂಪು ಅವರ 'ಜ್ಞಾನಪೀಠ']

kuppalli

ನವೆಂಬರ್ 23ರ ಸೋಮವಾರ ರಾತ್ರಿ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿರುವ ಕುವೆಂಪು ಅವರ ಮನೆಗೆ ನುಗ್ಗಿದ್ದ ರೇವಣ ಸಿದ್ಧಪ್ಪ, ಪದ್ಮವಿಭೂಷಣ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಕಳವು ಮಾಡಿದ್ದ. ಪೀಠೋಪಕರಣ, ಮತ್ತಿತರ ಸಾಮಗ್ರಿ ಧ್ವಂಸ ಮಾಡಿದ್ದ. [ರಾಜ್ಯೋತ್ಸವ ತಿಂಗಳಲ್ಲಿ 'ಬಾರಿಸು ಕನ್ನಡ ಡಿಂಡಿಮ' ಇರಲಿ]

ಮನೆಯಲ್ಲಿ ಅಳವಡಿಸಿದ್ದ ಸಿಸಿಟಿಯಲ್ಲಿ ರೇವಣ ಸಿದ್ಧಪ್ಪನ ಕೃತ್ಯ ಸೆರೆಯಾಗಿತ್ತು. ಈ ದೃಶ್ಯದ ಆಧಾರದ ಮೇಲೆ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಜ್ಞಾತ ಸ್ಥಳದಲ್ಲಿ ರೇವಣ ಸಿದ್ಧಪ್ಪ ವಿಚಾರಣೆ ನಡೆಯುತ್ತಿದ್ದು, ಶುಕ್ರವಾರ ಕೋರ್ಟ್‌ಗೆ ಹಾಜರುಪಡಿಸುವ ಸಾಧ್ಯತೆ ಇದೆ. [ಅರ್ಥಪೂರ್ಣ ತೀರ್ಥಹಳ್ಳಿಯ ಸಾರ್ಥಕ ಪ್ರವಾಸ]

ಕದಿಯುವುದೇ ಕಾಯಕ : ಬಂಧಿತ ಆರೋಪಿ ರೇವಣ ಸಿದ್ಧಪ್ಪ ಕದಿಯುವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದ. ದೇವಸ್ಥಾನದಲ್ಲಿನ ಹುಂಡಿಗಳ ಹಣ ಕದ್ದ ಬಗ್ಗೆ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಈತ, ಒಂದು ವರ್ಷದ ಹಿಂದೆ ಬಿಡುಗಡೆಗೊಂಡಿದ್ದ.

ದಾವಣಗೆರೆ ಜಿಲ್ಲೆಯ ಹದಡಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ರೇವಣ ಸಿದ್ಧಪ್ಪ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಕುವೆಂಪು ಅವರ ಮನೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅಲ್ಲಿ ಹೆಚ್ಚು ಹಣವಿರಬಹುದು ಎಂದು ಅಂದಾಜಿಸಿದ್ದ ಈತ, ಪ್ರವಾಸಿಗರ ಸೋಗಿನಲ್ಲಿ ಮನೆಗೆ ಬಂದು ಪರಿಶೀಲನೆ ನಡೆಸಿದ್ದ. ಸೋಮವಾರ ರಾತ್ರಿ ಮನೆಗೆ ನುಗ್ಗಿ, ಪ್ರಶಸ್ತಿಗಳನ್ನು ದೋಚಿದ್ದ.

English summary
Davanagere police arrested 45 year old Revana Siddappa in connection with the theft that took place at the memorial of Rashtrakavi Kuvempu at Kuppalli in Thirthahalli taluk, Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X