ಶಿವಮೊಗ್ಗದಲ್ಲಿ ಡಿ.27 ರಿಂದ ಪರಿವರ್ತನಾ ಯಾತ್ರೆ

Posted By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ಡಿಸೆಂಬರ್ 22 : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆ ಡಿ.27 ರಿಂದ ಜನವರಿ 3 ರವರೆಗೆ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಶಾಸಕ ಬಿ.ವೈ ರಾಘವೇಂದ್ರ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 2ರಂದು ಅಮಿತ್ ಷಾ ಅವರಿಂದ ಉದ್ಘಾಟನೆಗೊಂಡು ಬೆಂಗಳೂರಿನಿಂದ ಪ್ರಾರಂಭಗೊಂಡ ಪರಿವರ್ತನಾ ಯಾತ್ರೆ ಇಂದು 123 ವಿಧಾನ ಸಭಾ ಕ್ಷೇತ್ರದಲ್ಲಿ ಯಾತ್ರೆ ಮುಗಿಸಿದೆ.

ಬಿಜೆಪಿ ಬತ್ತಳಿಕೆಯಲ್ಲಿರುವ ಶಕ್ತಿಶಾಲಿ ಬಾಣ 'ಮಹಾದಾಯಿ!'

ಡಿ.27ರಂದು ಶಿಕಾರಿಪುರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಪಕ್ಷದ ಮುಖಂಡರಾದ ಕೇಂದ್ರ ಸಚಿವರಾದ ಸದಾನಂದ ಗೌಡ, ಅನಂತ ಕುಮಾರ್, ವಿದಾನ ಪರಿಷತ್ ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಶೋಭಾ ಕರದ್ಲಾಂಜೆ ಮೊದಲಾದ ನಾಯಕರು ಭಾಗವಹಿಸಲಿದ್ದಾರೆ ಎಂದರು.

Parivartana Yatra will be in Shivamogga from December 27

ನಮ್ಮ ಪಕ್ಷದ ಮುಖಂಡರಾದ ಯಡ್ಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ ರ ನೇತೃತ್ವ ಪರಿವರ್ತನೆ ನಡೆಯುತ್ತಿದೆ. ಬಹಳ ಯಶಸ್ವಿಯಾಗಿ ನಡೆಯುತ್ತಿರುವ 71 ದಿನಗಳ ಸುಧೀರ್ಘ ಯಾತ್ರೆಯಲ್ಲಿ ಯಡ್ಡಿಯೂರಪ್ಪ ಯಾವ ರಾಲಿಯಲ್ಲೂ ಗೈರಾಗದೆ ನಡೆಸುತ್ತಿದ್ದಾರೆ. ಇದು ನಮ್ಮ ಪಕ್ಷದ ಹೆಗ್ಗಳಿಕೆ ಎಂದರು.

ರಾಜ್ಯ ಸರ್ಕಾರ ಸರ್ಕಾರಿ ನೌಕರರನ್ನ ಬಳಿಸಿಕೊಂಡು ಸಮನ್ವಯ ಸಮಾವೇಶ ನಡೆಸುತ್ತಿದೆ ಇದು ರಾಜ್ಯ ಸರ್ಕಾರದ ಸಾಧನೆ ಎಂದು ಆರೋಪಿಸಿದ ರಾಘವೇಂದ್ರ ಪರಿವರ್ತನಾ ಮೆರವಣಿಗೆ ದಾವಣಗೆರೆ ಮೂಲಕ ಡಿ.27ರಂದು ಸಾಗರ, ಶಿಕಾರಿಪುರ,ಸೊರಬ ನಡೆಯಲಿದೆ,.

ಹುಬ್ಬಳ್ಳಿ ಸಮಾವೇಶ : ಹಿಂದುತ್ವ ಮತ್ತು ಮಹದಾಯಿ ವಿವಾದ

ಡಿ.28ರಂದು ಶಿವಮೊಗ್ಗ ಗ್ರಾಮಾಂತರ, ಶಿವಮೊಗ್ಗ ನಗರ ನಡೆಯಲಿದ್ದು, ಡಿ.29ರಂದು ತೀರ್ಥಹಳ್ಳಿ, ಹಾಗೂ ಜ.3ರಂದು ಭದ್ರಾವತಿ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇ ಗೌಡ, ಮುಖಂಡರಾದ ಡಿ.ಎಸ್.ಅರುಣ್, ಕೆ.ಜಿ.ಕುಮಾರ ಸ್ವಾಮಿ, ಚನ್ನಬಸಪ್ಪ, ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP'S parivartana yatra will be in Shivamogga from December 27 till Jan 03 2018. Will be there in shivamogga all constituency MLA B.Y Raghavendra said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ