ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ : ಭತ್ತ ಖರೀದಿಯಲ್ಲಿ ಮಧ್ಯವರ್ತಿಗಳಿಗೆ ಕಡಿವಾಣ ಹಾಕಿದ ಡಿಸಿ

|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 04 : ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಖರೀದಿಗೆ ಶಿವಮೊಗ್ಗ ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲಾಡಳಿತದ ಕ್ರಮದಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

'ಭತ್ತ ಖರೀದಿಗೆ ನೋಂದಣಿ ಕಾರ್ಯ ಜಿಲ್ಲೆಯ 7 ಎಪಿಎಂಸಿಗಳಲ್ಲಿ ಡಿಸೆಂಬರ್ 5ರಿಂದ 15ರವರೆಗೆ ನಡೆಯಲಿದೆ' ಎಂದು ಜಿಲ್ಲಾಧಿಕಾರಿ ಕೆ.ಎ.ದಯಾಂದ ಅವರು ಹೇಳಿದ್ದಾರೆ. ಶಿವಮೊಗ್ಗ, ಭದ್ರಾವತಿ, ಸಾಗರ, ಸೊರಬ, ಶಿಕಾರಿಪುರ, ಹೊಸನಗರ ಮತ್ತು ತೀರ್ಥಹಳ್ಳಿ ಎಪಿಎಂಸಿಗಳಲ್ಲಿ ನೋಂದಣಿ ಕಾರ್ಯ ನಡೆಯಲಿದೆ.

ಕಲಬುರಗಿ : ತೊಗರಿಗೆ ಬೆಂಬಲ ಬೆಲೆ ಘೋಷಿಸಿದ ಕೇಂದ್ರ ಸರ್ಕಾರಕಲಬುರಗಿ : ತೊಗರಿಗೆ ಬೆಂಬಲ ಬೆಲೆ ಘೋಷಿಸಿದ ಕೇಂದ್ರ ಸರ್ಕಾರ

ಸಾಮಾನ್ಯ ಭತ್ತಕ್ಕೆ 1,750 ರೂ. ಹಾಗೂ ಎ ಗ್ರೇಡ್ ಭತ್ತಕ್ಕೆ 1,770 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಈ ಬಾರಿ ಬೆಂಬಲ ಬೆಲೆಯಡಿ ಭತ್ತ ಖರೀದಿ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದ್ದು, ರೈತರು ನೋಂದಣಿ ಸಂದರ್ಭದಲ್ಲಿ ಅರ್ಧದಿಂದ ಒಂದು ಕೆ.ಜಿ.ವರೆಗೆ ಭತ್ತದ ಸ್ಯಾಂಪಲ್ ನೀಡಬೇಕು. ಸದರಿ ಸ್ಯಾಂಪಲ್ ಆಧರಿಸಿ ಗುಣಮಟ್ಟ ನಿರ್ಣಯಿಸಿದ ನಂತರ ಅದೇ ಗುಣಮಟ್ಟದ ಭತ್ತವನ್ನು ರೈತರು ಅಕ್ಕಿ ಗಿರಣಿಗಳಿಗೆ ನೇರವಾಗಿ ನೀಡಬೇಕು.

ಡಿಸೆಂಬರ್ 10ರಂದು ಬೃಹತ್ ರೈತ ಸಮಾವೇಶ : ಬಿಜೆಪಿಡಿಸೆಂಬರ್ 10ರಂದು ಬೃಹತ್ ರೈತ ಸಮಾವೇಶ : ಬಿಜೆಪಿ

Paddy buying : New rule helps farmers free from middlemen

ದಾಖಲೆಗಳ ಸಲ್ಲಿಕೆ : ರೈತರು ನೋಂದಣಿ ಸಂದರ್ಭದಲ್ಲಿ ಆರ್‌ಟಿಸಿ, ಸಣ್ಣ ಮತ್ತು ಅತಿ ಸಣ್ಣ ರೈತರ ಹಿಡುವಳಿ ಪ್ರಮಾಣ ಮತ್ತು ಭತ್ತದ ಸ್ಯಾಂಪಲ್ ಒದಗಿಸಬೇಕು. ಹಿಡುವಳಿ ಪ್ರಮಾಣ ಪತ್ರವನ್ನು ಅಟಲ್ ಜಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ.

ಬಂಡೀಪುರ ಕಾಡಂಚಿನ ರೈತರ ನಿದ್ದೆಗೆಡಿಸಿದ ಕಾಡಾನೆಗಳು!ಬಂಡೀಪುರ ಕಾಡಂಚಿನ ರೈತರ ನಿದ್ದೆಗೆಡಿಸಿದ ಕಾಡಾನೆಗಳು!

ಅಕ್ಕಿ ಗಿರಣಿ ಮಾಲೀಕರು ರೈತರಿಂದ ಸ್ವೀಕರಿಸಿದ ಭತ್ತದ ಮಾದರಿಯನ್ನು ಸಂಗ್ರಹಣ ಏಜೆನ್ಸಿಗಳಿಂದ ನೇಮಕವಾಗುವ ಗುಣಮಟ್ಟ ಪರಿಶೀಲನಾ ಅಧಿಕಾರಿಯ ಮೂಲಕ ಗುಣಮಟ್ಟದ ದೃಢೀಕರಣ ಪಡೆದ ನಂತರವೇ ಭತ್ತವನ್ನು ಖರೀದಿಸಿ ಸಂಗ್ರಹಣೆ ಮಾಡಬೇಕು.

ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಗರಿಷ್ಟ 40 ಕ್ವಿಂಟಾಲ್ ಸಾಮಾನ್ಯ ಭತ್ತವನ್ನು ಖರೀದಿಸಲಾಗುತ್ತದೆ. ರೈತರಿಂದ ಭತ್ತವನ್ನು ಪಡೆದ ಬಳಿಕ ಅಕ್ಕಿ ಗಿರಣಿ ಮಾಲೀಕರು ಸದರಿ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ನಮೂದಿಸಬೇಕು. ಇದರೊಂದಿಗೆ ಗುಣಮಟ್ಟ ಪರಿಶೀಲನಾ ಅಧಿಕಾರಿ ನೀಡುವ ಒಪ್ಪಿಗೆ ಪತ್ರವನ್ನು ಆನ್‍ಲೈನ್‍ನಲ್ಲಿ ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಬೇಕು.

ಬೇರೆ ಜಿಲ್ಲೆಗಳ ರೈತರಿಂದ ಭತ್ತವನ್ನು ಖರೀದಿಸುವುದನ್ನು ನಿಷೇಧಿಸಲಾಗಿದೆ. ರೈತರು ತಮ್ಮ ಚೀಲಗಳಲ್ಲಿ ಭತ್ತವನ್ನು ತಂದು ಅಕ್ಕಿ ಗಿರಣಿಗೆ ಸಲ್ಲಿಸಿದಾಗ ಪ್ರತಿ ಕ್ವಿಂಟಾಲ್‍ಗೆ ಖಾಲಿ ಚೀಲದ ಮೊತ್ತ ರೂ. 6ರಂತೆ ಖರೀದಿ ಏಜೆನ್ಸಿಯವರು ಹಣ ಪಾವತಿಸಬೇಕು.

ಭತ್ತವನ್ನು ಸರಬರಾಜು ಮಾಡಿದ ರೈತರಿಗೆ ಮೂರು ದಿನಗಳ ಒಳಗಾಗಿ ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಬೇಕು. ಈ ನಿಯಮದಿಂದಾಗಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದೆ.

ಅಕ್ರಮ ಎಸಗಿದರೆ ಕಠಿಣ ಕ್ರಮ : ಯಾವುದೇ ಅಕ್ರಮ ವಹಿವಾಟಿನಲ್ಲಿ ತೊಡಗುವ ಅಧಿಕಾರಿ/ರೈತರು/ಮಧ್ಯವರ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ರೈತರ ಹೆಸರಿನಲ್ಲಿ ಯಾವುದೇ ಅಕ್ಕಿ ಗಿರಣಿಯವರು ಸುಳ್ಳು ಮಾಹಿತಿ ನೀಡಿ ಮಾರಾಟ ಮತ್ತು ಖರೀದಿ ಮಾಡಿದ್ದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

English summary
Shivamogga Deputy Commissioner K.A.Dayanand introduce new rule to buy Paddy from farmers. New rule will help farmers free from middlemen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X