ಪ್ರಜ್ವಲ್ ಸ್ಪರ್ಧಿಸುವ ಬಗ್ಗೆ ದೇವೇಗೌಡ್ರ ಮನೆಯಿಂದ ದಿನಕ್ಕೊಂದು ಮಾತು

Posted By:
Subscribe to Oneindia Kannada

ಶಿವಮೊಗ್ಗ, ನವೆಂಬರ್ 9: ಎಚ್​.ಡಿ ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಅವರು ಮುಂದಿನ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಸಬೇಕೋ ಬೇಡವೋ ಎನ್ನುವ ಬಗ್ಗೆ ಎಚ್​. ಡಿ ದೇವೆಗೌಡರ ಕುಟುಂಬದಲ್ಲಿ ಹಗ್ಗಜಗ್ಗಾಟ ಮುಂದುವರೆದಿದೆ.

ಪ್ರಜ್ವಲ್ ರೇವಣ್ಣ ಸ್ಪರ್ಧೆ ಖಚಿತಪಡಿಸಿದ ಭವಾನಿ ರೇವಣ್ಣ

ಪ್ರಜ್ವಲ್ ರೇವಣ್ಣ ಅವರು ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ದೊಡ್ಡ ಗೌಡ್ರ ಕುಟುಂಬದಲ್ಲಿ ದಿನಕ್ಕೊಂದು ಮಾತುಗಳು ಕೇಳಿ ಬರುತ್ತಿವೆ.ಪ್ರಜ್ವಲ್ ಚುನಾವಣೆಗೆ ಕಣಕ್ಕಿಳಿಯುವ ಬಗ್ಗೆ ಭವಾನಿ ರೇವಣ್ಣ, ಕುಮಾಸ್ವಾಮಿ ಮತ್ತು ದೇವೇಗೌಡ ಹೋದ ಬಂದಲೆಲ್ಲ ಮಾತನಾಡುತ್ತಿದ್ದರೆ. ಆದರೆ, ಎಚ್ ಡಿ ರೇವಣ್ಣ ಮಾತ್ರ ಪುತ್ರನ ಬಗ್ಗೆ ಇದುವರೆಗೆ ತುಟಿ ಬಿಚ್ಚಿಲ್ಲ.

ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಗ್ಗೆ ತೀರ್ಮಾನವಾಗಿಲ್ಲ: ದೇವೇಗೌಡ

ನನ್ನ ಮಗ ಪ್ರಜ್ವಲ್ ಮುಂದಿನ ಚುನಾವಣೆಯಲ್ಲಿ ಸರ್ಧೆ ಮಾಡುವುದು ಖಚಿತ ಎಂದು ಇತ್ತೀಚೆಗೆ ದೇವೇಗೌಡ ಅವರ ಸೊಸೆ ಭವಾನಿ ರೇವಣ್ಣ ಹೇಳಿದ್ದರು. ಭವಾನಿ ರೇವಣ್ಣ ಹೇಳಿಕೆ ನೀಡಿದ್ದ ಬೆನ್ನಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಪ್ರಿತಿಕ್ರಿಯಿಸಿ, 'ಪ್ರಜ್ವಲ್ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪಕ್ಷ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದರು.

ಇದೀಗ ಇದರ ಬಗ್ಗೆ ಕುಮಾರಸ್ವಾಮಿ ಅವರು ಸಹ ಹೇಳಿಕೆಯೊಂದನ್ನು ನೀಡಿದ್ದಾರೆ.ತಲೆಗೊದು ಮಾತುಗಳನ್ನು ಆಡುತ್ತಿರುವುದರಿಂದ ಪ್ರಜ್ವಲ್ ರೇವಣ್ಣ ಅವರು ಮುಂದಿನ ಚುನಾವಣೆಗೆ ಕಣಕ್ಕಿಳಿಯುವ ಬಗ್ಗೆ ಗೌಡ್ರ ಮನೆಯಲ್ಲಿ ತಲೆ ನೋವಾಗಿ ಪರಿಣಮಿಸಿದೆ.

ಕುಟುಂಬ ರಾಜಕಾರಣ ಹಣೆಪಟ್ಟಿಯಿಂದ ಹೊರಬರಬೇಕು

ಕುಟುಂಬ ರಾಜಕಾರಣ ಹಣೆಪಟ್ಟಿಯಿಂದ ಹೊರಬರಬೇಕು

ಜೆಡಿಎಸ್ ಒಂದು ಅಪ್ಪ ಮಕ್ಕಳ ಪಕ್ಷವೆಂದೇ ಈಗಗಲೇ ಜಗಜ್ಜಾಹೀರ್ ಆಗಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ರಾಜಕಾರಣದ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರಬರಬೇಕು ಎನ್ನುವ ಮನೋಭಾವದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ಇದ್ದಾರೆ. ಶಿವಮೊಗ್ಗ ತಾಲೂಕಿನ ಬುಳ್ಳಾಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕುಮಾರಸ್ವಾಮಿ, "ಜೆಡಿಎಸ್ ಕುಟುಂಬ ರಾಜಕಾರಣದ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರಬರಬೇಕು. ಹೀಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ ಎಂದು ಎಚ್ ಡಿಕೆ ಹೇಳಿದರು.

ಕುಟುಂಬದಿಂದ ಇಬ್ಬರು ಸ್ಪರ್ಧಿಸುವುದು ಖಚಿತ

ಕುಟುಂಬದಿಂದ ಇಬ್ಬರು ಸ್ಪರ್ಧಿಸುವುದು ಖಚಿತ

ಪಕ್ಷದ ಒಳಿತಿಗಾಗಿ ಸಾರ್ವಜನಿಕರ ಟೀಕೆ ಬರಬಾರದು. ತಮ್ಮ ಕುಟುಂಬದಿಂದ ಇಬ್ಬರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳಿದ್ದಾರೆ. ಈ ಹೇಳಿಕೆ ಎಲ್ಲೋ ಒಂದು ಕಡೆ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೈತಪ್ಪುವುದು ಸಾಧ್ಯತೆಗಳು ಹೆಚ್ಚಿವೆ.

ಕುಟುಂಬದಲ್ಲಾಗಲೀ ಪಕ್ಷದಲ್ಲಾಗಲೀ ಒಡಕು ಇಲ್ಲ

ಕುಟುಂಬದಲ್ಲಾಗಲೀ ಪಕ್ಷದಲ್ಲಾಗಲೀ ಒಡಕು ಇಲ್ಲ

ಪ್ರಜ್ವಲ್ ರೇವಣ್ಣ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ಧಾರೆ. ಒಟ್ಟಿಗೆ ಕುಳಿತು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಕುಟುಂಬದಲ್ಲಾಗಲೀ ಪಕ್ಷದಲ್ಲಾಗಲೀ ಯಾವುದೇ ಒಡಕು ಇಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅನಿತಾ ಕುಮಾರಸ್ವಾಮಿ ಹೇಳಿದ್ದೇನು?

ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅನಿತಾ ಕುಮಾರಸ್ವಾಮಿ ಹೇಳಿದ್ದೇನು?

2018ರ ವಿಧಾನಸಭೆ ಚುನಾವಣೆಗೆ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಜೆಡಿಎಸ್ ರಾಷ್ಟ್ರಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ನಿರ್ಧಾರ ಕೈಗೊಳ್ಳಲಿದ್ದಾರೆ. ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ' ಎಂದು ಅನಿತಾ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅನಿತಾ ಸ್ಪರ್ಧಿಸುವುದಕ್ಕೆ ಕುಮಾರಸ್ವಾಮಿ ಹಾಗೂ ದೇವೇಗೌಡ್ರು ನಿರಾಕರಿಸಿದ್ದಾರೆ.

ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ಸ್ಪರ್ಧೆ

ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ಸ್ಪರ್ಧೆ

ದೊಡ್ಡ ಗೌಡ್ರು ಪ್ರಜ್ವಲ್ ರೇವಣ್ಣಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡಿದ್ದು, ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ಗೆ ಟಿಕೆಟ್ ಎನ್ನುವ ಗುಮಾನಿ ಹಬ್ಬಿತ್ತು. ಈ ಸುದ್ದಿ ಒಂದು ಸುದ್ದಿ ವಾಹಿನಿಯಲ್ಲಿ ಸಹ ಪ್ರಸಾರವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JDS state president HD Kumaraswamy has ruled out a ticket to be given to his nephew Prajwal Revanna. HDK stated that only two members of the family will be handed tickets for 2018 assembly election.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ