ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದ ಯಾವ ಮುಖ್ಯಮಂತ್ರಿಗಳು ಅವಧಿ ಪೂರ್ಣಗೊಳಿಸಿಲ್ಲ!

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ಶಿವಮೊಗ್ಗದಿಂದ ಬಂದ ಯಾವ ಸಿ ಎಂ ಕೂಡ ತಮ್ಮ ಅವಧಿಯನ್ನ ಪೂರ್ಣ ಮಾಡಿಲ್ಲ | Oneindia Kannada

ಶಿವಮೊಗ್ಗ, ಮೇ 21 : ಬಹುಮತ ಸಾಬೀತು ಮಾಡಲಾಗದೇ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಶಿವಮೊಗ್ಗದ 4 ಜನರು ಇಲ್ಲಿಯ ತನಕ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಇಲ್ಲಿಯ ತನಕ ಯಾರೂ ಅವಧಿಯನ್ನು ಪೂರ್ಣಗೊಳಿಸಿಲ್ಲ!.

ಬಿ.ಎಸ್.ಯಡಿಯೂರಪ್ಪ ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಇಲ್ಲಿಯ ತನಕ ಅವರು ಅವಧಿ ಪೂರ್ಣಗೊಳಿಸಿಲ್ಲ. ಮೇ 17ರಂದು 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅವರು ಮೂರೇ ದಿನಕ್ಕೆ ರಾಜೀನಾಮೆ ನೀಡಿದರು. ಇದರಿಂದಾಗಿ ರಾಜ್ಯದ ಬಿಜೆಪಿ ಸರ್ಕಾರ ಪತನಗೊಂಡಿತು.

ನಿಮಗಾಗಿ ಬದುಕುವುದೇ ನನ್ನ ಬದುಕು!: ಯಡಿಯೂರಪ್ಪ ಪತ್ರನಿಮಗಾಗಿ ಬದುಕುವುದೇ ನನ್ನ ಬದುಕು!: ಯಡಿಯೂರಪ್ಪ ಪತ್ರ

ಕಡಿದಾಳ್ ಮಂಜಪ್ಪ, ಎಸ್.ನಿಜಲಿಂಗಪ್ಪ, ಜೆ.ಎಚ್.ಪಟೇಲ್, ಎಸ್.ಬಂಗಾರಪ್ಪ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಯಿಂದ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯಕ್ಕೆ ಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದ ಕೊಡುಗೆಯೇ ಶಿವಮೊಗ್ಗದ ಹೆಸರಿನಲ್ಲಿದೆ. ಆದರೆ, ಯಾರೂ ಅವಧಿ ಪೂರ್ಣಗೊಳಿಸಿಲ್ಲ.

ಕರ್ನಾಟಕ ವಿಧಾನಸಭೆ ಇತಿಹಾಸ ನಿಮಗೆಷ್ಟು ಗೊತ್ತು? ಮುಖ್ಯಮಂತ್ರಿಗಳು ಯಾರ್ಯಾರು?ಕರ್ನಾಟಕ ವಿಧಾನಸಭೆ ಇತಿಹಾಸ ನಿಮಗೆಷ್ಟು ಗೊತ್ತು? ಮುಖ್ಯಮಂತ್ರಿಗಳು ಯಾರ್ಯಾರು?

ಬಿ.ಎಸ್.ಯಡಿಯೂರಪ್ಪ ಅವರು ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಎಂದೂ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿಲ್ಲ. ಜಿಲ್ಲೆಯಿಂದ ಯಾರು ಮುಖ್ಯಮಂತ್ರಿಯಾದರು ಎಂದು ನೋಡೋಣ ಬನ್ನಿ......

ಕಡಿದಾಳ್ ಮಂಜಪ್ಪ

ಕಡಿದಾಳ್ ಮಂಜಪ್ಪ

ಶಿವಮೊಗ್ಗ ಜಿಲ್ಲೆಯವರಾದ ಕಡಿದಾಳ್ ಮಂಜಪ್ಪ ಅವರು 75 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಆಗಸ್ಟ್ 19,1956ರಿಂದ ಅಕ್ಟೋಬರ್ 31, 1956ರ ತನಕ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಎಸ್.ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾದರು.

ಎಸ್.ಬಂಗಾರಪ್ಪ

ಎಸ್.ಬಂಗಾರಪ್ಪ

ಶಿವಮೊಗ್ಗ ಜಿಲ್ಲೆಯ 2ನೇ ಮುಖ್ಯಮಂತ್ರಿ ಎಸ್.ಬಂಗಾರಪ್ಪ. 756 ದಿನಗಳ ಕಾಲ ಅವರು ಮುಖ್ಯಮಂತ್ರಿಯಾಗಿದ್ದರು. ಅಕ್ಟೋಬರ್ 17, 1990 ರಿಂದ ನವೆಂಬರ್ 19, 1992ರ ತನಕ ಕಾರ್ಯ ನಿರ್ವಹಿಸಿದರು.

ರಾಜೀವ್ ಗಾಂಧಿ ಅವರು ವಿರೇಂದ್ರ ಪಾಟೀಲರನ್ನು ಕೆಳಗಿಳಿಸಿದ ಬಳಿಕ ಬಂಗಾರಪ್ಪ ಮುಖ್ಯಮಂತ್ರಿಯಾದರು. ರಾಜೀವ್ ಗಾಂಧಿ ಅವರ ಮರಣದ ಬಳಿಕ ಸೀತಾರಾಮ್ ಕೇಸರಿ ಅವರು ಬಂಗಾರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು.

ಜೆ.ಎಚ್.ಪಟೇಲ್

ಜೆ.ಎಚ್.ಪಟೇಲ್

ಜೆ.ಎಚ್.ಪಟೇಲ್ ಅವರು ಶಿವಮೊಗ್ಗದ ಮುಂದಿನ ಮುಖ್ಯಮಂತ್ರಿ. 1225 ದಿನಗಳ ಕಾಲ ಅವರು ಮುಖ್ಯಮಂತ್ರಿಯಾಗಿದ್ದರು. ಮೇ 31 ರಿಂದ 1996 ರಿಂದ ಅಕ್ಟೋಬರ್ 17, 1999. ಎಚ್.ಡಿ.ದೇವೇಗೌಡ ಅವರು ಪ್ರಧಾನಿಯಾದ ಬಳಿಕ ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾದರು.

ಬಿ.ಎಸ್.ಯಡಿಯೂರಪ್ಪ

ಬಿ.ಎಸ್.ಯಡಿಯೂರಪ್ಪ

ಬಿ.ಎಸ್.ಯಡಿಯೂರಪ್ಪ ಅವರು ಮೂರು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಒಂದು ಬಾರಿಯೂ ಅವರು ಅವಧಿ ಪೂರ್ಣಗೊಳಿಸಿಲ್ಲ.

* ನವೆಂಬರ್ 12, 2007ರಿಂದ ನವೆಂಬರ್ 19, 2007 ತನಕ 7 ದಿನ ಸಿಎಂ ಆಗಿದ್ದರು
* ಮೇ 30, 2008ರಿಂದ ನವೆಂಬರ್ 19, 2011ರ ತನಕ 1,269ದಿನ ಸಿಎಂ ಆಗಿದ್ದರು
* ಮೇ 17, 2018 ರಿಂದ ಮೇ 19, 2018ರ ತನಕ ಅವರು ಮುಖ್ಯಮಂತ್ರಿಯಾಗಿದ್ದರು

English summary
There have been four Chief Ministers that Shivamogga has produced. Ironically none of them have completed their term. This has been a trend with CM candidates from Shivamogga, the home town of B.S.Yeddyurappa since 1956.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X