ಶಿವಮೊಗ್ಗ : ತ್ಯಾವರೆಕೊಪ್ಪಗೆ ಹೊಸ ಅತಿಥಿಗಳ ಆಗಮನ

Posted By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ನವೆಂಬರ್ 16 : ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಇಬ್ಬರು ಹೊಸ ಅತಿಥಿಗಳು ಆಗಮಿಸಿದ್ದಾರೆ. ಬನ್ನೇರುಘಟ್ಟದಿಂದ ಎರಡು ಸಿಂಹಗಳನ್ನು ತರಲಾಗಿದೆ.

ತ್ಯಾವರೆಕೊಪ್ಪದಿಂದ ಗುಜರಾತ್‌ಗೆ ಹೊರಟ 6 ಚಿರತೆಗಳು

ಸಿಂಹಧಾಮದಲ್ಲಿ ಒಟ್ಟು 7 ಸಿಂಹಗಳಿದ್ದವು. ಆದರೆ, ಈಗ ಅವುಗಳ ಸಂಖ್ಯೆ 2ಕ್ಕೆ ಇಳಿಕೆಯಾಗಿತ್ತು ಹಾಗೂ ಇರುವ ಸಿಂಹಕ್ಕೆ ವಯಸ್ಸಾಗಿತ್ತು. ಆದ್ದರಿಂದ, ಬನ್ನೇರು ಘಟ್ಟದಿಂದ ಎರಡು ಸಿಂಹಗಳನ್ನು ಕರೆತರಲಾಗಿದೆ.

New guests arrive at Tyavarekoppa Lion and Tiger Safari

ಸರ್ವೇಶ್ (5) ಗಂಡು ಮತ್ತು ಸುಶ್ಮಿತ (5) ಎಂಬ ಹೆಣ್ಣು ಸಿಂಹಗಳು ಶಿವಮೊಗ್ಗಕ್ಕೆ ಆಗಮಿಸಿವೆ. ಸಿಂಹಧಾಮದಲ್ಲಿ ಈಗಿರುವ ಆರ್ಯ (13) ಗಂಡು, ಮತ್ತು ಮಾನ್ಯ (5) ಹೆಣ್ಣು ಸಿಂಹಗಳಿವೆ. ಆರ್ಯ ಸಿಂಹಕ್ಕೆ ವಯಸ್ಸಾಗಿದೆ.

ಸಕ್ರೆಬೈಲಿನಿಂದ ಉತ್ತರ ಪ್ರದೇಶಕ್ಕೆ ಹೊರಟು ನಿಂತ ಆನೆಗಳು!

'ಸಿಂಹಕ್ಕೆ ವಯಸ್ಸಾಗಿದೆ, ಸಂತಾನೋತ್ಪತ್ತಿ ಶಕ್ತಿಯಿಲ್ಲದ ಕಾರಣ ಈ ಎರಡು ಸಿಂಹಗಳನ್ನು ಕರೆತರುವುದು ಅನಿವಾರ್ಯವಾಗಿತ್ತು' ಎಂದು ಡಿಎಫ್ಒ ಚಲುವರಾಜ್ ಹೇಳಿದ್ದಾರೆ.

New guests arrive at Tyavarekoppa Lion and Tiger Safari

ಆರಂಭದಲ್ಲಿ ಏಳು ಸಿಂಹಗಳಿದ್ದು, ರೋಗಗಳಿಂದ ಸಾವನ್ನಪ್ಪಿ ಎರಡು ಸಂತತಿ ಮಾತ್ರ ಉಳಿದುಕೊಂಡಿದೆ. ಇವುಗಳು ಆಫ್ರಿಕಾ ಮತ್ತು ಏಷಿಯಾಟಿಕ್ ತಳಿಯಾಗಿದ್ದು ಬನ್ನೇರುಘಟ್ಟ ದಿಂದ ಬಂದ ಸರ್ವೇಶ್ ಮತ್ತು ಸುಶ್ಮಿತ ಏಷಿಯಾಟಿಕ್ ತಳಿಯಾಗಿವೆ.

'ಮಾನ್ಯ ಮತ್ತು ಸರ್ವೇಶ್ ಸಿಂಹಗಳನ್ನು ಸಂತಾನೋತ್ಪತ್ತಿಗೆ ಮೊದಲು ಬಿಡಲಾಗುವುದು. ನಂತರ ಸರ್ವೇಶ್ ಮತ್ತು ಸುಶ್ಮಿತಾಳನ್ನು ಜೊತೆ ಯಾಗಿಸಲಾಗುವುದು' ಎಂದು ಚೆಲುವರಾಜ್ ತಿಳಿಸಿದರು.

ನವಂಬರ್ ಮತ್ತು ಡಿಸೆಂಬರ್ ತಿಂಗಳು ಸಂತಾನೋತ್ಪತ್ತಿಗೆ ಪೂರಕವಾಗಿದೆ. ಆದ್ದರಿಂದ, ನವೆಂಬರ್ 9ರಂದು ಸಿಂಹಗಳನ್ನು ಕರೆತರಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A pair of Lion arrived to Tyavarekoppa Lion and Tiger Safari, Shivamogga from Bannerghatta National Park, Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ