ನೀನಾಸಂ ರಂಗ ಶಿಕ್ಷಣ ಕೇಂದ್ರದಿಂದ ಬೇಸಿಗೆ ರಂಗ ಶಿಬಿರ

Posted By: Nayana
Subscribe to Oneindia Kannada

ಶಿವಮೊಗ್ಗ ಏಪ್ರಿಲ್ 11: ಸಾಗರ ತಾಲೂಕು ಹೆಗ್ಗೋಡಿನ ನೀನಾಸಂ ರಂಗಶಿಕ್ಷನ ಕೇಂದ್ರವು ಮೇ 15ರಿಂದ ಜೂನ್ 4ರ ವರೆಗೆ ರಂಗತರಬೇತಿ ಶಿಬಿರ ಆಯೋಜಿಸಿದೆ.

18ರಿಂದ 35 ವರ್ಷದ ಒಳಗಿನ ಎಸ್‌ಎಸ್‌ಎಲ್‌ಸಿ ವರೆಗೆ ಓದಿದ ಯಾವುದೇ ವ್ಯಕ್ತಿ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಶಿಬಿರ ಶುಲ್ಕ ಇರುವುದಿಲ್ಲ. ಆದರೆ, ಊಟ, ವಸತಿ ವ್ಯವಸ್ಥೆಗೆ ತಲಾ 6 ಸಾವಿರ ರೂ. ಪಾವತಿಸಬೇಕು. ಸೀಮಿತ ಶಿಬಿರಾರ್ಥಿಗಳಿಗೆ ಪ್ರವೇಶ ಅವಕಾಶವಿರುತ್ತದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ರಂಗವಸಂತ ವಿಶೇಷ ರಂಗೋತ್ಸವ

ಶಿಬಿರದಲ್ಲಿ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು ತರಬೇತಿ ನಡೆಸಿಕೊಡುತ್ತಾರೆ. ರಂಗಮಾಧ್ಯಮದ ಬಗ್ಗೆ ಮಾಹಿತಿಗಳನ್ನು ನೀಡುವ ಜತೆಗೆ ಶಿಬಿರಾರ್ಥಿಗಳಿಗೆ ನುರಿತ ನಿರ್ದೇಶಕರಿಂದ ರಂಗನಾಟಕ ಪ್ರಯೋಗಗಳನ್ನು ಮಾಡಿಸಲಾಗುತ್ತದೆ.

Neenasam camp in Heggodu from May 15

ಆಸಕ್ತ ಅಭ್ಯರ್ಥಿಗಳು ನೀನಾಸಂನಿಂದ ಪ್ರವೇಶಪತ್ರ ತರಿಸಿಕೊಂಡು ಅದನ್ನು ತುಂಬಿ ಏ.20ರೊಳಗೆ ತಲುಪುವಂತೆ ಅರ್ಜಿ ಸಲ್ಲಿಸಬಹುದು. ಅಥವಾ ಅಂತರ್ಜಾಲ- www.ninasam.org ನಲ್ಲಿ ಕೂಡ ಅರ್ಜಿ ಸಲ್ಲಿಬಹುದು. ಅರ್ಜಿಯ ಆಧಾರದ ಮೇಲೆ ಆಯ್ಕೆಯಾದವರಿಗೆ ಏ.30ರೊಳಗೆ ತಿಳಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Neenasam theater education training center will organise theater training camp from May 15 to June 4 at Heggodu in Sagar taluk of Shimoga district. Youths of age between 18 to 35 can participate in the camp.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ