ಶಿವಮೊಗ್ಗ: ಕೊಲೆ ಪ್ರಕರಣದಲ್ಲಿ ಏಳು ಮಂದಿ ಬಂಧನ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ಆಕ್ಟೋಬರ್ 12: ಈಚೆಗೆ ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಮನೆಯೊಳಗೆ ನುಗ್ಗಿ ಮಣಿ ಎಂಬಾತನನ್ನು ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಪ್ರಕರಣಲ್ಲಿ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೊಮ್ಮನಕಟ್ಟೆಯ ಮುನಿಯಾ, ಅನಂತ, ಕುಮಾರ, ಸಂತೋಷ್ ನಾಯ್ಕ, ಕಲ್ಲಳ್ಳಿ ಶಿವಪ್ಪ ನಾಯಕ, ಬಡಾವಣೆ ನಿವಾಸಿಗಳಾದ ವಾಸು, ರಾಕೇಶ್, ಹಾವ್ ಮಧು, ಬಂಧಿತ ಆರೋಪಿಗಳು. ಏಳೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.[ಮೋನಿಕಾ ಹತ್ಯೆಗೆ ಮುನ್ನ ಅಶ್ಲೀಲ ವಿಡಿಯೋ ತೋರಿಸಿದ್ದ ರಾಜ್]

Murder: 7 accused arrested in Shimoga

ಕಾರಿಗೆ ಡಿಕ್ಕಿ: ಮದ್ಯ ಸೇವಿಸಿ ವಾಹನ ಚಲಾಯಿಸಿದ ಕಾರು ಚಾಲಕ ನಗರದ ಖಾಸಗಿ ಬಸ್ ನಿಲ್ದಾಣ ಸಮೀಪ ನಿಂತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಮೇಲಧಿಕಾರಿಗಳು ಬಂದಾಗ ಉಪಯೋಗಕ್ಕೆ ಮೀಸಲಿಟ್ಟಿದ್ದ ಕಾರು ಇದಾಗಿತ್ತು. ಅರಣ್ಯ ಇಲಾಖೆ ಕಾರ್ಯದರ್ಶಿ ಬರುವ ಹಿನ್ನೆಲೆಯಲ್ಲಿ ಸಿದ್ಧತೆಗಾಗಿ ವಾಹನ ಬಳಸಿಕೊಳ್ಳಲು ತಿಳಿಸಲಾಗಿತ್ತು. ಈ ಸಂದರ್ಭದಲ್ಲಿ ಚಾಲಕ ಮೋಹನ್ ಮದ್ಯ ಸೇವಿಸಿ ವಾಹನ ಓಡಿಸಿದ್ದ. ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.[ಏರ್ ಫೋರ್ಸ್ ನಲ್ಲಿ ತರಬೇತಿ ಸೀಟು: ಯುವತಿಗೆ ವಂಚಿಸಿ ನಾಪತ್ತೆ]

ನೀನಾಸಂ ನಾಟಕೋತ್ಸವ: ನಮ್ ಟೀಮ್ ರಂಗತಂಡವು ಅಕ್ಟೋಬರ್ 12, 13ರಂದು ಸಂಜೆ 6.45ಕ್ಕೆ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನೀನಾಸಂ ನಾಟಕೋತ್ಸವ ಆಯೋಜಿಸಿದೆ. 12ನೇ ತಾರೀಕು ಎಚ್.ಎಸ್.ಶಿವಪ್ರಕಾಶ್ ರಚನೆಯ, ಬಿ.ಆರ್.ವೆಂಕಟರಮಣ ಐತಾಳ ನಿರ್ದೇಶನದ 'ಕಾಲಂದುಗೆಯ ಕಥೆ' ನಾಟಕ ಪ್ರದರ್ಶನವಿದೆ.

ಅಕ್ಟೋಬರ್ 13 ರಂದು ಹೈಸ್ನಾಮ್ ತೋಂಬಾ ನಿರ್ದೇಶನದ 'ಅತ್ತ ದರಿ ಇತ್ತ ಪುಲಿ' ನಾಟಕ ಪ್ರದರ್ಶನವಿದೆ. ಪ್ರವೇಶ ದರ ₹ 50 ನಿಗದಿಪಡಿಸಿದ್ದು, ಮನೋವೈದ್ಯ ಡಾ.ಕೆ.ಎ.ಅಶೋಕ್ ಪೈ ಸ್ಮರಣೆ ಅಂಗವಾಗಿ ನಾಟಕೋತ್ಸವ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Seven arrested in murder case in Shimoga. Mani, recently murdered in Shimoga city Bommanakatte Ashraya layout. Muniya, Anantha, Kumara, Santhosh Naik others arrested by police.
Please Wait while comments are loading...