ಪದವೀಧರರ ಸಮಸ್ಯೆಗಳಿಗೆ ದನಿಯಾಗುವೆ: ಆಯನೂರು ಮಂಜುನಾಥ

By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ನವೆಂಬರ್ 20: 'ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಯಾಗಿ ನನ್ನನ್ನು ಆಯ್ಕೆಮಾಡಿದ ಬಿಜೆಪಿ ರಾಜ್ಯಾದ್ಯಕ್ಷ ಪಕ್ಷದ ಅಖಿಲ ಭಾರತ ಸಮಿತಿಗೆ ಧನ್ಯವಾದಗಳು' ಎಂದು ಬಿಜೆಪಿ ಮುಖಂಡ ಹಾಗೂ ಪದವೀಧರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ್ ತಿಳಿಸಿದರು.

ವಿಧಾನಪರಿಷತ್ ಚುನಾವಣೆ: ಬಿಜೆಪಿಯಿಂದ ಆಯನೂರು ಮಂಜುನಾಥ್ ಕಣಕ್ಕೆ

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪದವೀಧರ ಕ್ಷೇತ್ರದಿಂದ ಆಯ್ಕೆಯಲ್ಲಿ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.

ಇದರಲ್ಲಿ ಮೂವರು ವರ್ಗದ ಪದವೀಧರರು ಇದ್ದಾರೆ. ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಕ್ಷೇತ್ರದ ಪದವೀಧರರು, ಸ್ವ ಉದ್ಯೋಗಸ್ಥ ಪದವೀದರ, ನಿರುದ್ಯೋಗ ಪದವೀಧರರು ಇದ್ದಾರೆ. ಇವರ ಸಮಸ್ಯೆಯನ್ನ ವಿಧಾನ ಮಂಡಲದಲ್ಲಿ ಭಾಗವಹಿಸಿ ಮಾತನಾಡುವ ಅನುಭವವಿದೆ, ಈ ಕುರಿತು ನಾನು ಚರ್ಚೆ ಮಾಡಬಲ್ಲೆ ಎಂದರು.

MLC Polls : Ayanur Manjunath says thanks South-West Graduates' Constituency

ಪದವೀಧರ ಹಾಗೂ ಕಾರ್ಮಿಕರ ಗಂಭೀರ ಸಮಸ್ಯೆ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಕೇಳಿಬಂದಿಲ್ಲ, ಕಾರ್ಮಿಕ ಹೋರಾಟದಿಂದಲೇ ಬಂದ ನಾನು ಪದವೀಧರ ಸಮಸ್ಯೆಗಳಿಗೆ ಸಮರ್ಥದ್ವನಿ ಕೊಡಬಲ್ಲೆ ಎಂದರು.

ನಿರ್ಮಾಪಕ ಕಮ್ ಶಾಸಕ ಮನೋಹರ್ ಗೆ ಅನರ್ಹತೆ ಭೀತಿ!

25 ಸಾವಿರ ಪದವೀಧರ ನೌಕರರು ಉದ್ಯೋಗದಲ್ಲಿರುವವರಿಗೆ ಸ್ಪಂದಿಸಬಲ್ಲೆ, ಸ್ವಯಂ ಉದ್ಯೋಗಸ್ಥರ ಹಾಗೂ ನಿರುದ್ಯೋಗಿಗಳ ಸಮಸ್ಯೆಗೆ ಸದನದಲ್ಲಿ ಚರ್ಚೆ ಮಾಡಬಲ್ಲೆ ನಾನು ಎಂದು ಹೇಳಿದರು.

ಮುಂದಿನ ಬಾರಿ ವಿಧಾನ ಸಭೆ ಚುನಾವಣೆಗೆ ನಮ್ಮ ಪಕ್ಷ ಅಧಿಕಾರಕ್ಕೆ ಬರತ್ತದೆ ಎಂಬ ಆತ್ಮವಿಶ್ವಾಸವಿದೆ. ಹಾಗಾಗಿ ನಾನು ಆಯ್ಕೆಯಾಗಿ ಬಂದಲ್ಲಿ ಉತ್ತಮ ಸೇವೆ ನೀಡಲು ಬದ್ದವಾಗಿದ್ದೇನೆ ಎಂದ ಅವರು ಪದವೀಧರ ಕ್ಷೇತ್ರಕ್ಕೆ ಹೆಸರು ನೋಂದಾಯಿಸದವರು ನೋಂದಾಯಿಸಿಕೊಳ್ಳಲು ಕರೆ ನೀಡಿದರು.

ಆಯನೂರು ಮಂಜುನಾಥ್‌ಗೆ ಟಿಕೆಟ್, ಶಿವಮೊಗ್ಗ ಬಿಜೆಪಿಯಲ್ಲಿ ಅಸಮಾಧಾನ

1/07/17ರಿಂದ ಸರ್ಕಾರಿ ನೌಕರರಿಗೆ ಆರನೇ ವೇತನ ನೀಡಬೇಕಿತ್ತು. ಆದರೆ ಇದುವರೆಗೆ ಆಯೋಗದ ವರದಿ ಜಾರಿಗೊಳಿಸಿಲ್ಲ. ಯಾವುದೇ ತಿದ್ದುಪಡಿಯಾಗದೆ ಡಿಸೆಂಬರ್ ಒಳಗೆ ಸದನದಲ್ಲಿ ಮಂಡನೆಗೊಂಡು ಜಾರಿಯಾಗಬೇಕು, ಎಂದ ಅವರು ಇದುವರೆಗೂ ಆರನೇ ವೇತನ ಜಾರಿಯಾಗದೆ ಇರುವುದಕ್ಕೆ ಸರ್ಕಾರ ಮದ್ಯಂತರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಚಿವ ಅನಂತ್ ಕುಮಾರ್, ಪಿಎಗೆ ಸಂಬಳ ಆಗಿಲ್ವಂತೆ

ಇಂದಿರಾ ಕ್ಯಾಂಟೀನ್ ಸರ್ಕಾರವೇ ನಿರ್ವಹಿಸಲಿ: ನಿರ್ಮಾಣಕ್ಕೆ ಕಾರ್ಮಿಕರ ಇಲಾಖೆ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಂಬತ್ತು ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತಿದೆ, ಈ ರೀತಿ ಮಾಡುವ ಬದಲು ಸರ್ಕಾರವೇ ನಿರ್ವಹಣೆ ಮಾಡಬೇಕೆಂದು ಒತ್ತಾಯಿಸಿದರು.

ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ

ಪಕ್ಷದಲ್ಲಿ ಪದವೀಧರ ಕ್ಷೇತ್ರಕ್ಕೆ ತಮ್ಮ ಆಯ್ಕೆಯಾಗಿರುವ ಬಗ್ಗೆ ಪಕ್ಷದಲ್ಲಿ ಅಸಮಾಧಾನವಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಗೊಂದಲವಿಲ್ಲ, ಆಕಾಂಕ್ಷಿಗಳಾಗಿ ಹಲವಾರು ಜನ ಸ್ಪರ್ಧಿಸಲು ಇಷ್ಟಪಟ್ಟಿದ್ದರು, ಗಿರೀಶ್ ಪಾಟೀಲ್, ಮಂಜುಳಾ, ಅರುಣ್, ದೇವದಾಸ್ ನಾಯ್ಕ್ ಇವರುಗಳು ಇದ್ದರು, ಆದರೆ ಪಕ್ಷದ ಒಮ್ಮತವಾಗಿ ನನ್ನನ್ನ ಆಯ್ಕೆ ಮಾಡಿದೆ. ಅಸಮಾಧಾನವನ್ನ ಇದ್ದರೆ ಕುಳಿತು ಬಗೆಹರಿಸಿಕೊಳ್ಳಲಾಗುವುದು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
MLC Polls : Former Rajyasabha Member Ayanur Manjunath said thanks to Party high command and leader upon his selection as candidate for South-West Graduates' Constituency

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ