ಯಡಿಯೂರಪ್ಪ ಮತ್ತು ನಾನು ರಾಮ-ಲಕ್ಷಮಣರಿದ್ದಂತೆ : ಈಶ್ವರಪ್ಪ ಹೊಸ ರಾಗ

Subscribe to Oneindia Kannada

ಶಿವಮೊಗ್ಗ, ಆಗಸ್ಟ್ 16: "ನಾನು ಮತ್ತು ಯಡಿಯೂರಪ್ಪ ಅಣ್ಣ-ತಮ್ಮಂದಿರಿದ್ದಂತೆ. ನಮ್ಮದು ರಾಮ ಲಕ್ಷ್ಮಣರ ಸಂಬಂಧ," ಹೀಗಂಥ ಹೇಳಿದವರು ಮತ್ಯಾರೂ ಅಲ್ಲ, ವಿರೋಧ ಪಕ್ಷದ ನಾಯಕ, ಯಡಿಯೂರಪ್ಪನವರ ಪ್ರತಿ ನಿರ್ಧಾರಗಳಿಗೂ ತೊಡರುಗಾಲಾಗುತ್ತಿರುವ ಕೆ.ಎಸ್. ಈಶ್ವರಪ್ಪ. ಇದು ಅಮಿತ್ ಶಾ ಭೇಟಿಯ ಪರಿಣಾಮವೋ ಏನೋ ಗೊತ್ತಿಲ್ಲ.

ರಾಜ್ಯ ಬಿಜೆಪಿಯಲ್ಲಿ ಹೊಗೆಯಾಡುತ್ತಲೇ ಇದೆ ಭಿನ್ನಮತೀಯ ಕಿಚ್ಚು!

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದ ಈಶ್ವರಪ್ಪ, "ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. 2018ರ ಚುನಾವಣೆಯನ್ನು ಒಟ್ಟಾಗಿಯೇ ಎದುರಿಸುತ್ತೇವೆ," ಎಂದು ಹೇಳಿದರು.

Me and Yeddyurappa are just like Ram-Laxman : KS Eshwarappa

ಇನ್ನು, "ಟಿಕೆಟ್ ನೀಡಿದರೆ ಮುಂಬರುವ ಚುನಾವಣೆಯಲ್ಲಿ ಶಿವಮೊಗ್ಗದಿಂದಲೇ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಒಬ್ಬ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ," ಎಂದು ತಮ್ಮ ಚರ್ವಿತ ಚರ್ವಣ ಭಾಷಣ ಬಿಗಿದರು.

ಬಿಜೆಪಿ ಕಾರ್ಯಕಾರಿಣಿ: ಗುಡುಗಿದ ಯಡಿಯೂರಪ್ಪ, ಮಿಂಚದ ಈಶ್ವರಪ್ಪ!

ಇದೇ ಸಂದರ್ಭದಲ್ಲಿ ಅವರು, "ಇಂದಿರಾ ಕ್ಯಾಂಟೀನ್ ಒಳ್ಳೆಯ ಯೋಜನೆ. ಈ ಸೌಲಭ್ಯ ಎಲ್ಲ ಬಡವರಿಗೂ ಸಿಗಬೇಕು," ಎಂದು ಆಗ್ರಹಿಸಿದರು. "ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟದಿಂದ ಡಿ.ಕೆ. ಶಿವಕುಮಾರ್ ರನ್ನು ವಜಾ ಮಾಡಬೇಕು' ಎಂದೂ ಅವರು ಒತ್ತಾಯಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Me and Yeddyurappa are just like brothers. Our relationship is like Ram and Laxman," said KS Eshwarappa in Shimoga.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X