ಶಿವಮೊಗ್ಗ : ಮಾವನಿಂದ ಹಲ್ಲೆ, ಕೋಮಾಗೆ ಜಾರಿದ ಅಳಿಯ

Posted By: Gururaj
Subscribe to Oneindia Kannada

ಶಿವಮೊಗ್ಗ, ಸೆಪ್ಟೆಂಬರ್ 29 : ಆರು ವರ್ಷಗಳ ಪ್ರೀತಿಸಿ ವಿವಾಹವಾದ ಯುವ ಜೋಡಿಯ ಬದುಕು 6 ತಿಂಗಳಿನಲ್ಲಿ ದುರಂತ ಅಂತ್ಯಕ್ಕೆ ಬಂದು ನಿಂತಿದೆ. ಮಾವನಿಂದ ಹಲ್ಲೆಗೊಳಗಾದ ಅಳಿಯ ಕೋಮಾ ಸ್ಥಿತಿಯಲ್ಲಿದ್ದರೆ, ಅಳಿಯನ ಮೇಲೆ ಹಲ್ಲೆ ಮಾಡಿದ ಮಾವ ಜೈಲು ಸೇರಿದ್ದಾರೆ.

ಶಿವಮೊಗ್ಗ ಮೂಲದ ರಜತ್ ಮತ್ತು ಶ್ವೇತಾ ವಾಲಿ ಆರು ತಿಂಗಳ ಹಿಂದೆ ಅದ್ದೂರಿಯಾಗಿ ವಿವಾಹವಾಗಿದ್ದರು. ಆದರೆ, ಕೆಲವು ದಿನಗಳ ಹಿಂದೆ ತವರಿಗೆ ವಾಪಸ್ ಆಗಿದ್ದರು. ಇದರಿಂದ ಕೋಪಗೊಂಡ ಶ್ವೇತಾ ತಂದೆ ಆನಂದ ವಾಲಿ, ರಜತ್ ಮೇಲೆ ಹಲ್ಲೆ ಮಾಡಿದ್ದಾರೆ.

Man arrested for assaulting son-in-law

ಆನಂದ ಅವರು ಹಲ್ಲೆ ಮಾಡಿದ್ದರಿಂದ ರಜತ್ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಬೆಂಗಳೂರಿನ ಅಪೋಪೋ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಜತ್ ಮೇಲೆ ಹಲ್ಲೆ ಮಾಡಿದ ಆನಂದ ವಾಲಿ ಅವರು ಕೊಲೆಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.

ಆನಂದ ವಾಲಿ ಮತ್ತು ಅವರ ಪುತ್ರ ಸಂದೀಪ್ ವಾಲಿ ಇಬ್ಬರು ರಜತ್ ಮೇಲೆ ಹಲ್ಲೆ ನಡೆಸಿದ್ದಾರೆ. ಕೊಲೆ ಯತ್ನ ಪ್ರಕರಣದಲ್ಲಿ ಇಬ್ಬರು ಜೈಲು ಸೇರಿದ್ದು, ಆನಂದ ವಾಲಿ ಪತ್ನಿ ಜಯಂತಿ ಮತ್ತು ರಜತ್ ಪತ್ನಿ ಶ್ವೇತಾ ನಾಪತ್ತೆಯಾಗಿದ್ದಾರೆ.

anandvali

ಆನಂದ ವಾಲಿ ಅವರು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರಾಗಿದ್ದಾರೆ. ಶಿವಮೊಗ್ಗದ ವಿನೋಬ ನಗರದ ಮೂಲದ ರಜತ್ ಜೊತೆ ಶ್ವೇತಾ ವಿವಾಹ ಫೆಬ್ರವರಿಯಲ್ಲಿ ನಡೆದಿತ್ತು. ರಜತ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲವ ಮಾಡುತ್ತಿದ್ದಾರೆ.

ಎರಡು ದಿನಗಳ ಹಿಂದೆ ರಜತ್ ಮನೆಗೆ ಆನಂದ ವಾಲಿ ಮತ್ತು ಸಂದೀಪ್ ಆಗಮಿಸಿದ್ದರು. ಮಗಳು-ಅಳಿಯನ ಜೊತೆ ಮಾತನಾಡಿ ಜಗಳ ಬಿಡಿಸಲು ಬಂದಿದ್ದ ಇಬ್ಬರ ರಜತ್ ಮೇಲೆ ಹಲ್ಲೆ ಮಾಡಿದ್ದು, ಅವರು ಕೋಮಾಕ್ಕೆ ಜಾರಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shivamoga based Anandwali arrested for assaulting son-in-law. Anandwali's daughter Shwetha and Rajath married six months ago. After assaulting form Anandwali Rajath critically injured and he is now in coma.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ