ವಿಡಿಯೋ : ಕೃಷ್ಣ ಬೈರೇಗೌಡರಿಂದ ಭತ್ತದ ನಾಟಿ ಯಂತ್ರದ ಪ್ರಾತ್ಯಕ್ಷಿಕೆ

Posted By:
Subscribe to Oneindia Kannada

ಶಿವಮೊಗ್ಗ, ಆಗಸ್ಟ್ 05 : 'ರೈತರು ನಷ್ಟದಿಂದ ಪಾರಾಗಲು ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಉತ್ತಮ. ಲಾಭದಾಯಕವಾಗಿ ಕೃಷಿ ಮಾಡುವ ಮೂಲಕ ಯುವ ಸಮಯದಾಯವನ್ನು ಕೃಷಿಯತ್ತ ಆಕರ್ಷಿಸಬೇಕು' ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಕರೆ ನೀಡಿದರು.

ಶಿವಮೊಗ್ಗದಲ್ಲಿ ಗುರುವಾರ ಭತ್ತದ ನಾಟಿ ಯಂತ್ರ ಪ್ರಾತ್ಯಕ್ಷಿಕೆ ತೋರಿಸಿದ ನಂತರ ಮಾತನಾಡಿದ ಸಚಿವರು, 'ಕೂಲಿ ಕಾರ್ಮಿಕರ ಕೊರತೆ, ಸಮಯ ವ್ಯರ್ಥ, ಬೆಳಗಳಿಗೆ ಬರುವ ರೋಗ ತಪ್ಪಿಸಲು ಹಾಗೂ ಇಳುವರಿ ನಷ್ಟ ತಪ್ಪಿಸಲು ಭತ್ತ ನಾಟಿ ಯಂತ್ರ ಅನುಕೂಲವಾಗಿದೆ' ಎಂದರು.[ಟಿಲ್ಲರ್ ಏರಿ ಭತ್ತದ ಗದ್ದೆಗಿಳಿದ ಸಚಿವ ಕೃಷ್ಣ ಬೈರೇಗೌಡ]

krishna byre gowda

'ಕೃಷಿ ಲಾಭದಾಯಕವಾಗಬೇಕು, ಸರ್ಕಾರದಿಂದ ಬೆಂಬಲ ಬೆಲೆ ಸೇರಿದಂತೆ ಯಾವುದೇ ಉಚಿತ ಸೌಲಭ್ಯ ಕೊಟ್ಟರೂ ಅವು ತಾತ್ಕಾಲಿಕ. ಆದರೆ, ರೈತರು ವೈಜ್ಞಾನಿಕ ಕೃಷಿಗೆ ಒತ್ತು ನೀಡಬೇಕು. ಯಂತ್ರೋಪಕರಣ ಬಳಕೆ ಹೆಚ್ಚಿಸಿಕೊಳ್ಳಬೇಕು' ಎಂದು ಸಚಿವರು ಹೇಳಿದರು.[ಕಲಬುರಗಿ ರೈತರಿಗೆ ನೆಮ್ಮದಿ ತಂದ ಕೃಷಿಭಾಗ್ಯ!]

'ಕೃಷಿ ಯಂತ್ರಗಳನ್ನು ಎಲ್ಲಾ ರೈತರು ಖರೀದಿಸಲು ಕಷ್ಟ ಎಂಬ ಕಾರಣಕ್ಕೆ ಪ್ರತಿ ಹೋಬಳಿಯಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಿದ್ದು ಸುಮಾರು 75 ಲಕ್ಷ ರೂ. ಮೌಲ್ಯದ ಕೃಷಿ ಯಂತ್ರಗಳನ್ನು ಅಯಾ ಪ್ರದೇಶಗಳಿಗೆ ಅನುಗುಣವಾಗಿ ಖರೀದಿಸಿದ್ದು ಬಾಡಿಗೆ ಆಧಾರದಲ್ಲಿ ರೈತರಿಗೆ ನೀಡಲು ಅನುಕೂಲ ಕಲ್ಪಿಸಲಾಗಿದೆ' ಎಂದು ಸಚಿವರು ತಿಳಿಸಿದರು.[ರೈತರಿಗೆ ಶೇ 4ರ ಬಡ್ಡಿ ದರದಲ್ಲಿ ಕೃಷಿ ಸಾಲ]

'ರೈತರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೇಂದ್ರದ ಬೆಂಬಲ ಬೆಲೆಗಿಂತಲೂ ಹೆಚ್ಚು ಮೌಲ್ಯಕ್ಕೆ ರಾಜ್ಯದಲ್ಲಿ ಭತ್ತ ಖರೀದಿಸಲಾಗಿದೆ. ರೈತರಿಗೆ ಪೂರಕವಾಗಿ ಹಲವಾರು ಯೋಜನೆಗಳನ್ನು ಮಾಡಲಾಗಿದೆ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The rural population, which was once fully engaged in agriculture, is now migrating to cities in search of jobs. We all should strive hard to turn agriculture into a profit-making one said Agriculture Krishna Byre Gowda.
Please Wait while comments are loading...