ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಸ್ವೈ, ಈಶ್ವರಪ್ಪಗೆ ಸಿಹಿ ಸುದ್ದಿ ನೀಡಿದ ಲೋಕಾಯುಕ್ತ

|
Google Oneindia Kannada News

ಶಿವಮೊಗ್ಗ, ಫೆ.21 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಾಗಲೇ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ಅವರಿಗೆ ಶಿವಮೊಗ್ಗ ಲೋಕಾಯುಕ್ತ ವಿಶೇಷ ಕೋರ್ಟ್ ಬಿಗ್ ರಿಲೀಫ್ ನೀಡಿದೆ. ಉಭಯ ನಾಯಕರ ವಿರುದ್ಧದ ಎರಡು ಪ್ರಕರಣಗಳನ್ನು ವಿಚಾರಣೆ ಹಂತದಲ್ಲಿಯೇ ಕೋರ್ಟ್ ವಜಾಗೊಳಿಸಿ ಗುರುವಾರ ಆದೇಶ ಹೊರಡಿಸಿದೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸಲ್ಲಿಸಲಾಗಿದ್ದ ಹುಣಸೆಕಟ್ಟೆ ಅರಣ್ಯ ಭೂಮಿ ಒತ್ತುವರಿ ಪ್ರಕರಣ ಮತ್ತು ಕೆ.ಎಸ್. ಈಶ್ವರಪ್ಪ ವಿರುದ್ಧ ಸಲ್ಲಿಸಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಗುರುವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಚಾರಣೆ ಹಂತದಲ್ಲಿ ವಜಾಗೊಳಿಸಿದೆ. [ಯಡಿಯೂರಪ್ಪ, ಈಶ್ವರಪ್ಪಗೆ ಲೋಕಾಯುಕ್ತ ಸಂಕಟ]

Lokayukta

ಯಡಿಯೂರಪ್ಪ ವಿರುದ್ಧ ಎರಡು ಮತ್ತು ಈಶ್ವರಪ್ಪ ವಿರುದ್ದ ಎರಡು ದೂರನ್ನು ವಕೀಲ ವಿನೋದ್ ಕುಮಾರ್ ಸಲ್ಲಿಸಿದ್ದರು. ಈಗ ನಾಲ್ಕು ಪ್ರಕರಣಗಳನ್ನು ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ. ಯಡಿಯೂರಪ್ಪ ವಿರುದ್ಧದ ಪ್ರಕರಣದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಆರೋಪಿಯನ್ನಾಗಿಸಲಾಗಿತ್ತು. [ಯಡಿಯೂರಪ್ಪ ವಿರುದ್ಧ ಪ್ರಕರಣವೇನು]

ಮೊದಲು ಈ ಪ್ರಕರಣದ ಕುರಿತು ವಿನೋದ್ ಕುಮಾರ್ ಬೆಂಗಳೂರು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಆದರೆ, ದೂರಿನ ವಿಚಾರಣೆ ನಡೆಸಿದ್ದ ನ್ಯಾ. ಸುಧೀಂದ್ರರಾವ್ ಪ್ರಕರಣಕ್ಕೆ ಸಂಬಂಧಿಸಿದ ಸ್ಥಳದ ವ್ಯಾಪ್ತಿಯಲ್ಲಿರುವ ಶಿವಮೊಗ್ಗ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತೆ ಸೂಚಿಸಿ ಹಿಂತಿರುಗಿಸಿದ್ದರು. ಸದ್ಯ ಅಲ್ಲಿಯೂ ಪ್ರಕರಣ ವಜಾಗೊಂಡಿದೆ.

ಈಶ್ವರಪ್ಪಗೂ ರಿಲೀಫ್ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿರುದ್ಧ ಅಕ್ರಮ ಆಸ್ತಿಗಳಿಕೆ ದೂರು ಸಲ್ಲಿಸುವ ಮುನ್ನ ಪ್ರಾಸಿಕ್ಯೂಷನ್‌ಗೆ ಅನುಮತಿ ಪಡೆದಿಲ್ಲ ಎಂದು ಮೊದಲು ದೂರು ವಜಾಗೊಂಡಿತ್ತು. ಈಶ್ವರಪ್ಪ ಅವರು ವಿಧಾನಸಭೆಯಲ್ಲಿ ಸೋತ ನಂತರ ವಿನೋದ್ ಕುಮಾರ್ ಪುನಃ ದೂರು ಸಲ್ಲಿಸಿದ್ದರು. ಇದನ್ನು ಸಹ ವಜಾಗೊಳಿಸಿ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಮೂರ್ತಿ ಶರಶ್ಚಂದ್ರ ಬಿ.ಅಂಗಡಿ ಆದೇಶ ಹೊರಡಿಸಿದ್ದಾರೆ. [ಈಶ್ವರಪ್ಪ ಅಕ್ರಮ ಆಸ್ತಿ ಲೆಕ್ಕ]

ಯಡಿಯೂರಪ್ಪ ಪುತ್ರಿಗೂ ಸಂತಸ : ಬಿ.ಎಸ್.ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ ಅವರು ಪತ್ರಕರ್ತರ ಕೋಟಾದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಅಕ್ರಮ ನಿವೇಶನ ಪಡೆದ ಪ್ರಕರಣ, ಮಂಡಗದ್ದೆ ಸಮೀಪದ ಕುಳುಂಡೆ ಗ್ರಾಮದಲ್ಲಿ ಅರಣ್ಯ ಕಡಿತಲೆ ಮಾಡಿದ ಪ್ರಕರಣಗಳನ್ನು ಕೋರ್ಟ್ ವಜಾಗೊಳಿಸಿದೆ.

English summary
The Shimoga Special Lokayukta Court quashes 2 cases against B.S.Yeddyurappa, K.S.Eshwarappa. Eshwarappa's illegal asset charges and B.S. Yeddyurappas forest land encroachment case quashes by the court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X