'ದೇಶದ ಆಡಳಿತ ವ್ಯವಸ್ಥೆಯಲ್ಲಿ ಪೊಲೀಸರ ಪಾತ್ರ ಮಹತ್ವವಾದದ್ದು'

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 06 : ದೇಶದ ಆಡಳಿತ ವ್ಯವಸ್ಥೆಯಲ್ಲಿ ಪೊಲೀಸರ ಪಾತ್ರ ಮಹತ್ವವಾದದ್ದು, ಈ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಹೇಳಿದರು.

ಲೋಕಾಯುಕ್ತ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಒಂದು ದಿನದ ತರಬೇತಿ ಉದ್ಘಾಟಿಸಿ ಮಾತನಾಡಿದರು. ಪೊಲೀಸರಿಗೆಲೋಕಾಯುಕ್ತ ಕಚೇರಿಯಿಂದ ನೀಡುವ ಎರಡನೇ ತರಬೇತಿ ಇದಾಗಿದ್ದು, ಈ ತರಬೇತಿಯಿಂದ ಪೊಲೀಸರ ಬಲವರ್ಧನೆ ಸಾದ್ಯ. ಇದರಿಂದ ಅವರು ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಸಮಾಜದಲ್ಲಿ ಸುಧಾರಣೆ ತರಬಲ್ಲರು. ನ್ಯಾಯಯುತವಾಗಿ ಕೆಲಸ ಮಾಡಲು ಇಂತಹ ತರಬೇತಿಗಳು ಅವಶ್ಯಕತೆ ಇದೆ ಎಂದರು.

Lokayukta Justice Shetty applause police service

ಕಾರ್ಯಕ್ರಮದಲ್ಲಿ ಎಇಜಿಪಿ ಸಂಜಯ್ ಸಹಾಯ್ ಮಾತನಾಡಿ, ಇಲಾಖೆಗೆ ಹೊಸದಾಗಿ100 ಲೋಕಾಯುಕ್ತ ಪೊಲೀಸ್ ಕಾನ್ ಸ್ಟೆಬಲ್ ಗಳು ಸೇರಿದ್ದಾರೆ. ಈಗ ಇಲಾಖೆಯಲ್ಲಿ ಬಹಳಷ್ಟು ಸುಧಾರಣೆಯನ್ನು ತರಲಾಗಿದೆ. ಕಾನ್ ಸ್ಟೆಬಲ್ ಗಳಿಗೆ ಪ್ರಕರಣ ತನಿಖೆ ಮಾಡುವ ಅಧಿಕಾರ ಇಲ್ಲದಿದದ್ರೂ, ಹೇಗೆ ವೃತ್ತಿಪರತೆಯಿಂದ ಕೆಲಸ ನಿರ್ವಹಿಸಬೇಕೆಂಬುದರ ತರಬೇತಿ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಹೈಕೋರ್ಟ್ ನ್ಯಾ. ಎ.ವಿ. ಚಂದ್ರಶೇಖರ್, ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ.ಅಡಿ, ನ್ಯಾ. ಎನ್. ಆನಂದ್, ರಿಜಿಸ್ಟ್ರಾಟ್ ನಂಜುಂಡಸ್ವಾಮಿ ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lokayukta justice Vishwanath Shetty applauded police service in building the nation and strengthen the public administration in the country.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ