ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಿ.ಬಂಗಾರಪ್ಪ ಪುತ್ರಿಗೆ ಇದೆಂಥಾ ಸೋಲು

|
Google Oneindia Kannada News

ಬೆಂಗಳೂರು, ಮೇ 16 : ಬಿ.ಎಸ್.ಯಡಿಯೂರಪ್ಪ ಮತ್ತು ದಿ.ಎಸ್.ಬಂಗಾರಪ್ಪ ಕುಟುಂಬದ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರಿಗೆ ಗೆಲುವು ದೊರಕಿದೆ. ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಶುಕ್ರವಾರ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡು ಬಂದ ಬಿ.ಎಸ್.ಯಡಿಯೂರಪ್ಪ ಅಂತಿಮಗಾಗಿ ಗೆಲುವಿನ ನಗೆ ಬೀರಿದರು. ಮೊದಲ ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಏ.17ರಂದು ನಡೆದ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಶೇ 72.32ರಷ್ಟು ಮತದಾನವಾಗಿತ್ತು.

BS Yeddyurappa

2009ರ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ ಜಯಗಳಿಸಿದ್ದರು. 2014ರ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಕ್ಷೇತ್ರದಲ್ಲಿ ವಿಜಯ ಸಾಧಿಸುವ ಮೂಲಕ ಶಿವಮೊಗ್ಗ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಯಡಿಯೂರಪ್ಪ ಅವರು 3,63,305 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. [ಕರ್ನಾಟಕದ ತಾಜಾ ಫಲಿತಾಂಶ ಇಲ್ಲಿ ಲಭ್ಯ]

ಯಡಿಯೂರಪ್ಪ ಪ್ರತಿಕ್ರಿಯೆ : ಶಿವಮೊಗ್ಗದ ತಮ್ಮ ನಿವಾಸದಲ್ಲಿ ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿದ ಬಿ.ಎಸ್.ಯಡಿಯೂರಪ್ಪ, ದೇಶದ ಜನರು ಸಂಪೂರ್ಣವಾಗಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್ ದುಷ್ಟ ಆಡಳಿತವನ್ನು ತೊಗಲಗಿಸಲು ಸಹಕರಿಸಿದ್ದಾರೆ. ನಾನು 1 ಲಕ್ಷ ಮತಗಳ ಅಂತರದಲ್ಲಿ ಜಯಗಳಿಸುತ್ತೇನೆ ಎಂದು ಹೇಳಿದ್ದೆ, ಅದಕ್ಕಿಂತಲೂ ಹೆಚ್ಚುಗಳಿಸಿದ್ದೇನೆ ಎಂದರು.

ಶಿವಮೊಗ್ಗ ಪಡೆದ ಸ್ಥಾನ ಪಕ್ಷ ಪಡೆದ ಮತಗಳು
ಬಿ.ಎಸ್.ಯಡಿಯೂರಪ್ಪ 1
ಬಿಜೆಪಿ 60,62,216
ಮಂಜುನಾಥ ಭಂಡಾರಿ
2
ಕಾಂಗ್ರೆಸ್ 2,42,911
ಗೀತಾ ಶಿವರಾಜ್ ಕುಮಾರ್
3
ಜೆಡಿಎಸ್ 2,40,636
ಶ್ರೀಧರ ಕಲ್ಲಹಳ್ಳ
4
ಎಎಪಿ
7,542
English summary
Lok Sabha Election results 2014, Karnataka : Former Chief Minister BS Yeddyurappa ( BJP) Wins in Shimoga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X