ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗನಮಕ್ಕಿ ಜಲಾಶಯ ಭರ್ತಿ, ಪ್ರವಾಹದ ಎಚ್ಚರಿಕೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜುಲೈ 24 : ರಾಜ್ಯದ ವಿದ್ಯುತ್ ಉತ್ಪಾದನೆಯ ಪ್ರಮುಖ ಜಲಾಶಯ ಲಿಂಗನಮಕ್ಕಿ ಶೀಘ್ರದಲ್ಲೇ ಭರ್ತಿಯಾಗಲಿದೆ. ಜಲಾಶಯದಲ್ಲಿ 1802 ಅಡಿ ನೀರು ಸಂಗ್ರಹವಾಗಿದ್ದು, ನದಿ ಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆ ಇಂದ ಇರುವಂತೆ ಸೂಚನೆ ನೀಡಲಾಗಿದೆ.

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಆದ್ದರಿಂದ, 1819 ಅಡಿ ಎತ್ತರದ ಡ್ಯಾಂಗೆ ಒಳ ಹರಿವು ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಲಿಂಗನಮಕ್ಕಿ ಡ್ಯಾಂ ಕೆಳದಂಡೆ ಹಾಗೂ ಶರಾವತಿ ನದಿ ಪಾತ್ರದ ನಿವಾಸಿಗಳಿಗೆ, ಪ್ರವಾಹದ ಮುನ್ಸೂಚನೆ ನೀಡಿದೆ.

ವರುಣನ ಅಬ್ಬರಕ್ಕೆ ತುಂಬಿತು ಲಿಂಗನಮಕ್ಕಿ ಜಲಾಶಯ ವರುಣನ ಅಬ್ಬರಕ್ಕೆ ತುಂಬಿತು ಲಿಂಗನಮಕ್ಕಿ ಜಲಾಶಯ

ನಿರಂತರ ಮಳೆಯಿಂದ ಲಿಂಗನಮಕ್ಕಿ ಡ್ಯಾಂಗೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿದೆ. ಜುಲೈ 23ರಂದು 1802.30 ಅಡಿ ನೀರಿನ ಸಂಗ್ರಹವಿದೆ. 28,799 ಕ್ಯುಸೆಕ್ ನೀರು ಹರಿದುಬರುತ್ತಿದೆ. ಇದೇ ರೀತಿ ಒಳಹರಿವು ಮುಂದುವರಿದರೆ, ಶೀಘ್ರದಲ್ಲಿಯೇ ಡ್ಯಾಂ ಗರಿಷ್ಠ ಮಟ್ಟ ತಲುಪಲಿದೆ.

Linganamakki dam full, KPCL alert about flood

'ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಡ್ಯಾಂನಿಂದ ಯಾವುದೇ ಸಮಯದಲ್ಲಿ ಬೇಕಾದರೂ ಹೊರಬಿಡಲಾಗುವುದು. ಆದ್ದರಿಂದ, ಕೆಳದಂಡೆ, ನದಿ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಜಾನುವಾರುಗಳನ್ನು ಬಿಡಬಾರದು' ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಕಾರ್ಯನಿರ್ವಾಹಕ ಅಭಿಯಂತರ ಆರ್.ಶಿವಕುಮಾರ್ ಹೇಳಿದ್ದಾರೆ.

45 ವರ್ಷದ ಬಳಿಕ ದಾಖಲೆ ಬರೆದ ಕಾವೇರಿ ಕಣಿವೆಯ 4 ಜಲಾಶಯಗಳು!45 ವರ್ಷದ ಬಳಿಕ ದಾಖಲೆ ಬರೆದ ಕಾವೇರಿ ಕಣಿವೆಯ 4 ಜಲಾಶಯಗಳು!

ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆ ಮುಂದುವರೆದಿದೆ. ಸೋಮವಾರದ ಮಾಹಿತಿಯಂತೆ ಶಿವಮೊಗ್ಗದಲ್ಲಿ 1.80 ಮಿ.ಮೀಟರ್, ಭದ್ರಾವತಿಯಲ್ಲಿ 1.60 ಮಿ.ಮೀ., ತೀರ್ಥಹಳ್ಳಿಯಲ್ಲಿ 24.20 ಮಿ.ಮೀ., ಸಾಗರದಲ್ಲಿ 9.20 ಮಿ.ಮೀ., ಶಿಕಾರಿಪುರದಲ್ಲಿ 1.80 ಮಿ.ಮೀ. ಸೊರಬದಲ್ಲಿ 6.50 ಮಿ.ಮೀ. ಮಳೆಯಾಗಿದೆ.

English summary
Inflow to Linganamakki dam increased after heavy rain in Shivamogga district. Water level in the dam reaches 1802 feet against 1819 feet. Karnataka Power Corporation Limited (KPCL) officials alert the people about flood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X