ಶಿವಮೊಗ್ಗದಲ್ಲಿ ಯೋಧ ಉಮೇಶ ಅಂತ್ಯ ಸಂಸ್ಕಾರ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ಜುಲೈ 20 : ಹಿಮಾಚಲ ಪ್ರದೇಶದಲ್ಲಿ ಮೃತಪಟ್ಟ ಯೋಧ ಕೆ.ಉಮೇಶ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವದಿಂದ ಸ್ವ ಗ್ರಾಮದಲ್ಲಿ ನಡೆಯಿತು. ಭಾನುವಾರ ಟ್ರಕ್‌ನಲ್ಲಿ ಹೋಗುವಾಗ ಗುಡ್ಡ ಕುಸಿದು ಬಿದ್ದು, ಉಮೇಶ ಸೇರಿದಂತೆ ಮೂವರು ಯೋಧರು ಸಾವನ್ನಪ್ಪಿದ್ದರು.

ಶಿವಮೊಗ್ಗ ತಾಲೂಕಿನ ಹಾರನಹಳ್ಳಿಯಲ್ಲಿ ಬುಧವಾರ ಕೆ.ಉಮೇಶ ಅವರ ಅಂತ್ಯ ಸಂಸ್ಕಾರ ನಡೆಯಿತು. ಉಮೇಶ ಸಾವಿನ ಸುದ್ದಿ ಕೇಳಿ ದುಖಃದಲ್ಲಿ ಮುಳುಗಿದ್ದ ಗ್ರಾಮದ ಜನರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.[ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದ ಭಾರತ]

soldier

ದ್ವಿತೀಯ ಪಿಯುಸಿ ತನಕ ವಿದ್ಯಾಭ್ಯಾಸ ಮಾಡಿದ್ದ ಉಮೇಶ ಅವರು, ದೂರ ಶಿಕ್ಷಣದ ಮೂಲಕ ಪದವಿ ಪಡೆದಿದ್ದರು. ಸುಮಾರು 15 ವರ್ಷದಿಂದ ಸೇನೆಯಲ್ಲಿದ್ದ ಅವರ ಸೇವೆಯನ್ನು ಎರಡು ವರ್ಷಗಳ ಕಾಲ ವಿಸ್ತರಣೆ ಮಾಡಲಾಗಿತ್ತು.[#NationSalutesArmy ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗ್ತಿರೋದು ಯಾಕೆ?]

ಶಿಕಾರಿಪುರ ಮೂಲದ ವೀಣಾ ಎಂಬುವವರನ್ನು ಉಮೇಶ ವಿವಾಹವಾಗಿದ್ದರು. ವೀಣಾ ಉಮೇಶ್ ದಂಪತಿಗೆ 4 ವರ್ಷದ ತನ್ಮಯ್ ಮತ್ತು 7 ತಿಂಗಳಿನ ಶ್ರೀರಕ್ಷಾ ಎಂಬ ಮಗುವಿದೆ.[ಅಕ್ರಮ ಬಯಲಿಗೆಳೆದ ಯೋಧ ಸೇವೆಯಿಂದ ವಜಾ]

K.Umesha

ಜೂನ್ ತಿಂಗಳಿನಲ್ಲಿ ಸಂಬಂಧಿಕರ ವಿವಾಹಕ್ಕಾಗಿ ತವರಿಗೆ ಬಂದಿದ್ದ ಉಮೇಶ ಅವರು, ಮಗಳು ಶ್ರೀರಕ್ಷಾ ನಾಮಕರಣ ಮಗಿಸಿ, ಕರ್ತವ್ಯಕ್ಕೆ ವಾಪಸ್ ಆಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The last rites of soldier K.Umesha were performed in Haranahalli, Shivamogga on July 20, 2016. K.Umesha died in Himachal Pradesh on Sunday.
Please Wait while comments are loading...