ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಂದ್ರಶೇಖರ್ ಬಿಜೆಪಿ ತೊರೆಯೋದು ಬಿಎಸ್ ವೈಗೆ ಮೊದಲೇ ಗೊತ್ತಿತ್ತಾ?!

|
Google Oneindia Kannada News

Recommended Video

Ramanagara By-elections 2018 :ಎಲ್ ಚಂದ್ರಶೇಖರ್ ಕಾಂಗ್ರೆಸ್ ಸೇರುವುದರ ಬಗ್ಗೆ ಬಿ ಎಸ್ ವೈ ಗೆ ಮೊದಲೇ ಗೊತ್ತಿತ್ತಾ?

ಶಿವಮೊಗ್ಗ, ನವೆಂಬರ್ 01: ರಾಮನಗರ ವಿಧಾನಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಅವರು ಬಿಜೆಪಿ ತೊರೆಯುವುದು ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಗೆ ಮೊದಲೇ ಗೊತ್ತಿತ್ತಾ?

ಚಂದ್ರಶೇಖರ್ ಅವರ ಅನಿರೀಕ್ಷಿತ ನಡೆಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಿ ಎಸ್ ಯಡಿಯೂರಪ್ಪ, 'ತಮಗೆ ಚಂದ್ರಶೇಖರ್ ಅವರು ಪಕ್ಷ ತೊರೆಯುವ ಬಗ್ಗೆ ಒಂದು ವಾರದ ಹಿಂದೆಯೇ ಅನುಮಾನವಿತ್ತು' ಎಂದಿದ್ದಾರೆ.

ಬಿಜೆಪಿಗೆ ಕೈಕೊಟ್ಟ ಚಂದ್ರಶೇಖರ್ ನಡೆಯ ಬಗ್ಗೆ ಯಾರು, ಏನಂದರು?ಬಿಜೆಪಿಗೆ ಕೈಕೊಟ್ಟ ಚಂದ್ರಶೇಖರ್ ನಡೆಯ ಬಗ್ಗೆ ಯಾರು, ಏನಂದರು?

ಚುನಾವಣೆಗೆ ಎರಡೇ ದಿನ(ನ.3) ಬಾಕಿ ಇರುವಾಗ ಬಿಜೆಪಿ ನಾಯಕರ ವರ್ತನೆಯಿಂದ ಬೇಸತ್ತು ಬಿಜೆಪಿ ತೊರೆದು ಮರಳಿ ಮಾತೃಪಕ್ಷಕ್ಕೆ ಸೇರಿದ ಚಂದ್ರಶೇಖರ್ ಅವರ ನಡೆ ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ. ಇದರೊಟ್ಟಿಗೆ ಅವರು ಪಕ್ಷ ತೊರೆಯುವ ಸೂಚನೆ ಮೊದಲೇ ಸಿಕ್ಕಿತ್ತು ಎನ್ನುವ ಮೂಲಕ ಯಡಿಯೂರಪ್ಪ ಅವರು ಸಹ ಹೊಸ ಬಾಂಬ್ ಸಿಡಿಸಿದ್ದಾರೆ!

ಒಂದು ವಾರದ ಮೊದಲೇ ಸೂಚನೆ ಇತ್ತು!

ಒಂದು ವಾರದ ಮೊದಲೇ ಸೂಚನೆ ಇತ್ತು!

'ಒಂದು ವಾರಗಳ ಹಿಂದಿನಿಂದಲೂ ಈ ಬೆಳವಡಿಗೆ ಸಂಭವಿಸಬಹುದು ಎಂಬ ಸೂಚನೆ ಇತ್ತು. ಮುಖ್ಯಮಂತ್ರಿಯವರ ಪತ್ನಿಯೇ ಈ ಕ್ಷೇತ್ರದಲ್ಲಿ ಕಣಕ್ಕಿಳಿದಿರುವುದರಿದ ಅವರನ್ನು ಗೆಲ್ಲಿಸಲು ಈ ಕುತಂತ್ರ ನಡೆದಿದೆ. ಚಂದ್ರಶೇಖರ್ ಅವರು ಕೊನೆಯ ಕ್ಷಣದಲ್ಲಿ ಹೀಗೆ ಪಕ್ಷ ತೊರೆಯುತ್ತಾರೆ ಎಂದು ಮೊದಲು ನಿರೀಕ್ಷಿಸಿರಲಿಲ್ಲ. ಆದರೆ ಇತ್ತೀಚೆಗೆ ಒಂದು ವಾರದಿಂದ ಯಾಕೋ ಅನುಮಾನ ಆರಂಭವಾಗಿತ್ತು'- ಬಿ ಎಸ್ ಯಡಿಯೂರಪ್ಪ

ಅದಕ್ಕೇ ಪ್ರಚಾರಕ್ಕೆ ಹೋಗಿರಲಿಲ್ಲ!

ಅದಕ್ಕೇ ಪ್ರಚಾರಕ್ಕೆ ಹೋಗಿರಲಿಲ್ಲ!

ಚಂದ್ರಶೇಖರ್ ಅವರು ಬಿಜೆಪಿಗೆ ಕೈಕೊಡುವ ಸೂಚನೆ ಸಿಕ್ಕಿದ್ದರಿಂದಲೇ ರಾಮನಗರಕ್ಕೆ ಅವರ ಪರ ಪ್ರಚಾರಕ್ಕೆ ಹೋಗಿರಲಿಲ್ಲ ಎಂದು ಸಹ ಯಡಿಯೂರಪ್ಪ ಹೇಳಿದರು. ಆದರೆ ಯಡಿಯೂರಪ್ಪ ಅವರು ಕೇವಲ ತಮ್ಮ ಪುತ್ರನ ಕ್ಷೇತ್ರವಾದ ಶಿವಮೊಗ್ಗದ ಬಗ್ಗೆ ಮಾತ್ರವೇ ಗಮನ ಹರಿಸಿದ್ದರಿಂದ ನನಗೆ ಬೇಸರವಾಗಿತ್ತು. ಬಿಜೆಪಿ ನಾಯಕರ್ಯಾರೂ ಇಲ್ಲಿಗೆ ಪ್ರಚಾರಕ್ಕೆ ಬಂದಿರಲಿಲ್ಲ. ಆದ್ದರಿಂದಲೇ ನಾನು ಪಕ್ಷ ತೊರೆಯುವ ನಿರ್ಧಾರ ಮಾಡಿದೆ ಎಂದು ಚಂದ್ರಶೇಖರ್ ಹೇಳಿದ್ದರು.

ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಲು ಚಂದ್ರಶೇಖರ್ ನೀಡಿದ 4 ಕಾರಣಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಲು ಚಂದ್ರಶೇಖರ್ ನೀಡಿದ 4 ಕಾರಣ

ಚಂದ್ರಶೇಖರ್ ಬಿಜೆಪಿ ತೊರೆದಿದ್ದೇಕೆ?

ಚಂದ್ರಶೇಖರ್ ಬಿಜೆಪಿ ತೊರೆದಿದ್ದೇಕೆ?

ಬಿಜೆಪಿ ನಾಯಕರ ನಿರ್ಲಕ್ಷ್ಯ ಮತ್ತು ಚುನಾವಣೆಯ ಹೊತ್ತಲ್ಲಿ ನಾಯಕರು ಪ್ರಚಾರಕ್ಕೆ ಬಾರದ ಕಾರಣ ಬೇಸರಗೊಂಡು ನಾನು ರಾಜೀನಾಮೆ ನೀಡಿದ್ದಾಗಿ ಚಂದ್ರಶೇಖರ್ ಹೇಳಿಕೊಂಡಿದ್ದಾರೆ.

ನ.3 ರಂದು ಉಪಚುನಾವಣೆ

ನ.3 ರಂದು ಉಪಚುನಾವಣೆ

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಮತ್ತು ರಾಮನಗರ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಜಯಗಳಿಸಿದ್ದರು. ನಂತರ ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡಿದ್ದರಿಂದ ರಾಮನಗರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ನ.3 ರಂದು ಚುನಾವಣೆ ನಡೆಯಲಿದ್ದು, ನ.6 ರಂದು ಫಲಿತಾಂಶ ಬಿಡುಗಡೆಯಾಗಲಿದೆ.

ಬಿಜೆಪಿ ತೊರೆದು ಮರಳಿ ಕಾಂಗ್ರೆಸ್‌ಗೆ ಬಂದ ಮಗನ ಬಗ್ಗೆ ಸಿಎಂ ಲಿಂಗಪ್ಪ ಹೇಳಿದ್ದೇನು?ಬಿಜೆಪಿ ತೊರೆದು ಮರಳಿ ಕಾಂಗ್ರೆಸ್‌ಗೆ ಬಂದ ಮಗನ ಬಗ್ಗೆ ಸಿಎಂ ಲಿಂಗಪ್ಪ ಹೇಳಿದ್ದೇನು?

English summary
Karnataka BJP president BS Yeddyurappa told, "he has a doubt that L Chandrashekhar who is a BJP candidate of Ramanagar byelections may join Congress"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X