ಸೊರಬದಲ್ಲಿ 'ಕ್ಯಾಸನೂರು ಫಾರೆಸ್ಟ್ ಡಿಸೀಸ್'ಎಂಬ ವಿಚಿತ್ರ ಮಂಗನ ಕಾಯಿಲೆ

Posted By:
Subscribe to Oneindia Kannada

ಶಿವಮೊಗ್ಗ,ಮಾರ್ಚ್,19: ಸುಮಾರು ಐವತ್ತೈದು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ವಿಚಿತ್ರ ಮಂಗನ ಖಾಯಿಲೆ ಇದೀಗ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರಿನಲ್ಲಿ ಕಾಣಿಸಿಕೊಂಡಿದ್ದು ಜನರು ಆತಂಕ್ಕೆ ಒಳಗಾಗಿದ್ದಾರೆ.

'ಕ್ಯಾಸನೂರು ಫಾರೆಸ್ಟ್ ಡಿಸೀಸ್' ಎಂದು ಕರೆಯುವ ಈ ಖಾಯಿಲೆಯು ಮೃತ ಕರಿ ಮಂಗ ಮೇಲಿನ ಹುಳ ಮನುಷ್ಯರಿಗೆ ಕಚ್ಚುವುದರಿಂದ ಹರಡುತ್ತದೆ. ಇದು 10 ದಿನದೊಳಗೆ ತನ್ನ ಲಕ್ಷಣಗಳನ್ನು ತೋರಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.[ಝಿಕಾ ವೈರಸ್ ಎಂದರೇನು? ಹೇಗೆ ಹರಡುತ್ತದೆ?]

Kysanur Forest Disease spread to Soraba Taluk, Shivamogga

ಕ್ಯಾಸನೂರು ಫಾರೆಸ್ಟ್ ಡಿಸೀಸ್ ಎಂಬ ಈ ಕಾಯಿಲೆಯು ಈಗಾಗಲೇ ಚಿಕಲೆ, ಅಮೋಟೆ, ಕಪೋಲಿ, ಮುಡುಗೈ ಹೀಗೆ ನಾನಾ ಹಳ್ಳಿಗಳಲ್ಲಿ ಕಾಣಿಸಿಕೊಂಡಿದ್ದು ಜನರು ಕಂಗಾಲಾಗಿದ್ದಾರೆ. ಶನಿವಾರ ಸೊರಬ ತಾಲೂಕಿನ ಕ್ಯಾಸನೂರಿಗೆ ವೈದ್ಯರ ತಂಡ ಭೇಟಿ ನೀಡಿ ಈ ಕಾಯಿಲೆ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಲಿದ್ದಾರೆ.

ಕೆಲವು ದಿನಗಳ ಹಿಂದೆ ಕ್ಯಾಸನೂರು ಫಾರೆಸ್ಟ್ ಡಿಸೀಸ್ ಇದು 23 ಜನರಲ್ಲಿ ಕಾಣಿಸಿಕೊಂಡಿದ್ದು, ಗೋವಾದಲ್ಲಿ ಇಬ್ಬರು ಸಾವನ್ನಪ್ಪಿರಬಹುದೆಂಬ ಶಂಕೆ ವ್ಯಕ್ತವಾಗಿದೆ.[ಝಿಕಾ ವೈರಸ್ ಗೆ ಮದ್ದು ನಿಮ್ಮ ಮನೆಯ ಕೈದೋಟದಲ್ಲಿಯೇ ಇದೆ]

Kysanur Forest Disease spread to Soraba Taluk, Shivamogga

ಕ್ಯಾಸನೂರು ಫಾರೆಸ್ಟ್ ಡಿಸೀಸ್ ಕಾಯಿಲೆಯ ಲಕ್ಷಣಗಳೇನು?

* ಮೃತ ಕರಿಮಂಗ ಮೇಲಿನ ಹುಳ ಕಚ್ಚಿದಾಗ ಈ ರೋಗ ಹರಡುತ್ತದೆ.

* ಹುಳ ಕಚ್ಚಿದ ಹತ್ತು ದಿನದೊಳಗೆ ವ್ಯಕ್ತಿ ಈ ಕಾಯಿಲೆಗೆ ತುತ್ತಾಗುತ್ತಾನೆ.

* ಪ್ರಾರಂಭದಲ್ಲಿ ವಾಂತಿ, ಭೇದಿ, ಜ್ವರ ಕಾಣಿಸಿಕೊಳ್ಳುತ್ತದೆ.

* ಕೊನೆಯಲ್ಲಿ ಮೆದುಳು ಸ್ರಾವದಿಂದ ವ್ಯಕ್ತಿ ಸಾವನ್ನಪ್ಪುತ್ತಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kyasanur Forest Disease (KFD) has surfaced again after a gap of 50 years in Kyasanur forest near Soraba taluk, Shivamogga district. It is also known as Monkey disease or Monkey fever had caused havoc in 1957 killing several monkeys.
Please Wait while comments are loading...