ಕುವೆಂಪು ವಿವಿಯ ವಿದ್ಯಾರ್ಥಿ ಮೊಬೈಲ್ ವಿಚಾರಕ್ಕೆ ಆತ್ಮಹತ್ಯೆ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ಮೇ 18: ಮೊಬೈಲ್ ಫೋನ್ ಪ್ರಾಣಕ್ಕೇ ಎರವಾದ ವರದಿಯಿದು. ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದಲ್ಲಿರುವ ಕುವೆಂಪು ವಿವಿಯ ಜ್ಞಾನ ಸಹ್ಯಾದ್ರಿ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿ ಶ್ರೀಧರ್ ಪಾಟೀಲ್ ಎಂಬಾತ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಎಂಬಿಎ ಮೊದಲ ವರ್ಷ ವ್ಯಾಸಂಗ ಮಾಡುತ್ತಿದ್ದ. ತರಗತಿಯಲ್ಲಿ ಮೊಬೈಲ್ ನೋಡುತ್ತಿದ್ದ ಎಂದು ಆತನನ್ನು ತರಗತಿಯಿಂದ ಉಪನ್ಯಾಸಕರು ಹೊರ ಕಳುಹಿಸಿದ್ದರು.

ಮಧ್ಯಾಹ್ನ ಆತ ಸಹಜವಾಗಿಯೇ ಇದ್ದನಂತೆ. ಊಟ ಮುಗಿಸಿದ ಉಳಿದ ವಿದ್ಯಾರ್ಥಿಗಳು ತರಗತಿಗೆ ತೆರಳಿದ್ದಾರೆ. ಆದರೆ ಈತ ಕೋಣೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಜೆ ಹೊತ್ತಿಗೆ ಸಹಪಾಠಿಗಳು ಹಾಸ್ಟೆಲ್ ಗೆ ಮರಳಿದ್ದಾರೆ. ಆಗ ಒಳಗಿನಿಂದ ಬಾಗಿಲು ಹಾಕಿರುವುದು ಕಂಡುಬಂದಿದೆ. ಎಷ್ಟು ಕೂಗಿದರೂ ಪ್ರತಿಕ್ರಿಯೆ ನೀಡದಿದ್ದಾಗ ಬಾಗಿಲು ಮುರಿದು ಒಳಪ್ರವೇಶಿಸಿದ್ದಾರೆ.[ಮೇ 2ರಿಂದ ಆಗುಂಬೆ ಮೂಲಕ ಶಿವಮೊಗ್ಗ-ಉಡುಪಿ ಬಸ್ ಸಂಚಾರ]

suicide

ಆಗ ಶ್ರೀಧರ್ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊಬೈಲ್ ಫೋನ್ ಬಳಸಿದ್ದಕ್ಕೆ ತರಗತಿಯಿಂದ ಉಪನ್ಯಾಸಕರು ವಿದ್ಯಾರ್ಥಿಯನ್ನು ಹೊರಗೆ ಕಳುಹಿಸಿದ್ದು ತಪ್ಪೆ? ಇಂಥ ವಿಚಾರಕ್ಕೆ ಬೇಸರ ಪಟ್ಟುಕೊಂಡು ಬದುಕನ್ನೇ ಮುಗಿಸಿಕೊಳ್ಳುವಂಥದ್ದು ಏನಿದೆ? ತಂದೆ-ತಾಯಿ ಹಾಗೂ ತನ್ನನ್ನು ಇಷ್ಟಪಡುವವರೆಲ್ಲರನ್ನೂ ದುಃಖಕ್ಕೆ ದೂಡಿ, ಹೀಗೆ ಮಾಡಿದ್ದು ಸರಿಯೆ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kuvempu VV student commits suicide in hostel, He sent out of class for using mobile phone. After that he commits suicide. Complaint registered in Bhadravati rural police station.
Please Wait while comments are loading...