ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುವೆಂಪು ಅವರ ಪದ್ಮವಿಭೂಷಣ ಫಲಕ ಇನ್ನೂ ಸಿಕ್ಕಿಲ್ಲ

|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 02 : ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿಯ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆದರೆ, ಆತ ಕದ್ದ ಪದ್ಮವಿಭೂಷಣ ಫ‌ಲಕ ಇನ್ನೂ ಪತ್ತೆಯಾಗಿಲ್ಲ. ಫಲಕ ಹುಡುಕಿಕೊಟ್ಟವರಿಗೆ 10 ಸಾವಿರ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದಾರೆ.

ಕುವೆಂಪು ಅವರ ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ತಾಲೂಕು ತುರ್ಚಘಟ್ಟದ ರೇವಣಸಿದ್ಧಪ್ಪ ಅಲಿಯಾಸ್ ಕಾಯಕದ ರೇವಣ್ಣ (45)ನನ್ನು ಪೊಲೀಸರು ನವೆಂಬರ್ 26ರಂದು ಬಂಧಿಸಿದ್ದಾರೆ. ಆದರೆ, ಕಳುವು ಮಾಡಿದ್ದ ಪದ್ಮವಿಭೂಷಣ ಫಲಕ ಮಾತ್ರ ಸಿಕ್ಕಿಲ್ಲ. [ಕುವೆಂಪು ಮನೆಯಲ್ಲಿ ಕಳ್ಳತನ ಮಾಡಿದ ಸಿಕ್ಕಿದ]

kuppalli

ಮನೆಯಿಂದ ಕಳವು ಮಾಡಿ ಪರಾರಿಯಾಗುವಾಗ ಪದ್ಮವಿಭೂಷಣ ಫಲಕವನ್ನು ರೇವಣಸಿದ್ಧಪ್ಪ ಎಲ್ಲೋ ಬೀಳಿಸಿಕೊಂಡಿದ್ದಾನೆ. ಈ ಕುರಿತು ಪೊಲೀಸರಿಗೆ ವಿಚಾರಣೆ ವೇಳೆ ಆತ ಹೇಳಿಕೊಂಡಿದ್ದಾನೆ. ಫಲಕ ಬಿದ್ದ ಜಾಗ ಕಾಡಿನ ಪ್ರದೇಶವಾದ ಕಾರಣ ಅದನ್ನು ಹುಡುಕುವುದು ಕಷ್ಟವಾಗುತ್ತಿದೆ. [ಕುವೆಂಪು ಅವರ ಮನೆಯಲ್ಲಿ ಕಳ್ಳತನ]

1988ರಲ್ಲಿ ಕುವೆಂಪು ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಿಕ್ಕಿತ್ತು. ಪ್ರಶಸ್ತಿ ಜೊತೆಗೆ 4.4 ಸೆಂ.ಮೀ. ಸುತ್ತಳತೆ ಹಾಗೂ 0.6 ಸೆಂ.ಮೀ. ದಪ್ಪದ ಫಲಕ ನೀಡಲಾಗಿತ್ತು. ಚಿಕ್ಕ ಫಲಕವನ್ನು ಕಾಡಿನ ನಡುವೆ ಹುಡುಕುವುದು ಪೊಲೀಸರಿಗೆ ಸವಾಲಾಗಿದೆ. [ಅರ್ಥಪೂರ್ಣ ತೀರ್ಥಹಳ್ಳಿಯ ಸಾರ್ಥಕ ಪ್ರವಾಸ]

ಕಾಡಿನಲ್ಲಿ ಗಿಡಗಳ ಎಲೆಗಳು ಉದುರಿ ಬೀಳುತ್ತಿವೆ. ಉದುರಿ ಬಿದ್ದ ಒಣಎಲೆಗಳ ಅಡಿ ಚಿಕ್ಕ ಗಾತ್ರದ ಪದ್ಮವಿಭೂಷಣ ಫ‌ಲಕ ಹುಡುಕುವುದು ಕಷ್ಟವಾಗುತ್ತಿದೆ. ಆದ್ದರಿಂದ ಪೊಲೀಸರು ಜನರ ಸಹಾಯ ಕೇಳಿದ್ದಾರೆ. ಫಲಕವನ್ನು ಪತ್ತೆ ಹಚ್ಚಿ ನೀಡಿದರೆ 10 ಸಾವಿರ ರೂ. ಬಹುಮಾನ ನೀಡುವುದಾಗಿ ಹೇಳಿದ್ದಾರೆ.

English summary
Police arrested Revana Siddappa in connection with the theft that took place at the memorial of Rashtrakavi Kuvempu at Kuppalli in Thirthahalli taluk, Shivamogga. But, Padma Vibhushan award not found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X