ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೀರ್ಥಹಳ್ಳಿ: ತುಂಗಾ ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಕಾರಣ ಆ ಫೋಟೋ!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜುಲೈ.22: ಕ್ಷುಲ್ಲಕ ಕಾರಣಕ್ಕೆ ಕುರುವಳ್ಳಿ ಹುಡುಗರು ಮತ್ತು ತುಂಗಾ ಕಾಲೇಜಿನ ಕೆಲ ಹುಡುಗರ ನಡುವೆ ನಡೆದ ಜಗಳದಲ್ಲಿ ನಾಲ್ವರು ಹುಡುಗರ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆ ನಡೆಸಿದ ಕುರುವಳ್ಳಿಯ ಐವರು ಹುಡುಗರ ಮೇಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

ತೀರ್ಥಹಳ್ಳಿಯಲ್ಲಿ ಎರಡು ದಿನಗಳ ಹಿಂದೆ ಪಟ್ಟಣದ ಕೊಪ್ಪ ಸರ್ಕಲ್ ಬಳಿ, ತೀರ್ಥಹಳ್ಳಿ ಪೊಲೀಸರು ಐಎಂವಿ ಕೇಸು ಹಾಕುತ್ತಿದ್ದ ವೇಳೆ, ಕುರುವಳ್ಳಿ ಹುಡುಗರ ಬುಲೆಟ್ ಬೈಕ್ ತಡೆದು ಕೇಸ್ ಹಾಕಿದರು. ಇದನ್ನು ತುಂಗಾ ಕಾಲೇಜಿನ ಕೆಲ ಹುಡುಗರು ಫೋಟೋ ತೆಗೆದು ವಾಟ್ಸಾಪ್ ನ ಸ್ಟೇಟಸ್ ಗಳಲ್ಲಿ ಹಾಕಿದ್ದರು.

ಅಗ್ನಿವೇಶ್ ಹಲ್ಲೆ ಖಂಡಿಸಿ ಟ್ವೀಟ್: ರೈ ಮೇಲೆ ಮುಗಿಬಿದ್ದ ಟ್ವಿಟ್ಟಿಗರುಅಗ್ನಿವೇಶ್ ಹಲ್ಲೆ ಖಂಡಿಸಿ ಟ್ವೀಟ್: ರೈ ಮೇಲೆ ಮುಗಿಬಿದ್ದ ಟ್ವಿಟ್ಟಿಗರು

ತುಂಗಾ ಕಾಲೇಜಿನ ಬಿಕಾಂ ವಿದ್ಯಾರ್ಥಿಗಳಾದ ಅನಿಲ್ ಮತ್ತು ಕಾರ್ತಿಕ್ ವಾಟ್ಸಾಪ್ ನಲ್ಲಿ ಈ ಫೋಟೊಗಳನ್ನು ಶೇರ್ ಮಾಡಿ ವಾಟ್ಸಾಪ್ ನ ಡಿಪಿ, ಸ್ಟೇಟಸ್ ನಲ್ಲಿ ಹಾಕಿದ್ದರು ಎನ್ನಲಾಗಿದೆ.

Kuruvalli boys attacked on Tunga college students in Thirthahalli

ಈ ಕುರಿತು "ವಾಟ್ಸಾಪ್ ಗ್ರೂಪ್ ಗಳಲ್ಲಿ ಬೈಕ್ ಫೋಟೋ ಯಾಕೆ ಹಾಕಿದ್ದೀರಿ"?ಎಂದು ಕುರುವಳ್ಳಿ ಹುಡುಗರು ತುಂಗಾ ಕಾಲೇಜಿನ ಹುಡುಗರನ್ನು ವಿಚಾರಿಸಿದ್ದಾರೆ.

ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿದೆ. ಹೊರಗಿನ ಹುಡುಗರು ಕುರುವಳ್ಳಿ ಹುಡುಗರ ಜೊತೆ ಕೈ ಜೋಡಿಸಿದ್ದರ ಪರಿಣಾಮ ಕಾಲೇಜಿನ ವಿದ್ಯಾರ್ಥಿಗಳಾದ ಶಬರೀಶ್, ಅನಿಲ್, ಸೂರಜ್, ಅಭಿಲಾಶ್ ಮೇಲೆ ಹಲ್ಲೆ ಮಾಡಿದ್ದಾರೆ. ಇವರನ್ನು ಸರ್ಕಾರಿ ಜೆ.ಸಿ. ಆಸ್ಪತ್ರೆಗೆ ಸೇರಿಸಲಾಗಿದೆ.

ಆಸ್ಪತ್ರೆಗೆ ಸೇರಿದ್ದ ಈ ನಾಲ್ವರು ವಿದ್ಯಾರ್ಥಿಗಳು ಮೇಲಿನ ಕುರುವಳ್ಳಿ ಅಕ್ಷಯ್ ಶೆಟ್ಟಿ, ಭರತ್,ಸುರೇಶ, ಅನಿಲ್, ಮೇಘರಾಜ್ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದು, ತೀರ್ಥಹಳ್ಳಿ ಪೊಲೀಸರು ಹೇಳಿಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

English summary
Kuruvalli boys attacked on Tunga college students in Thirthahalli, Shivamogga district. A complaint was lodged at Thirthahalli police station on the five boys of Kuruvalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X