ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಸರ್ಕಾರಿ ನಗರ ಸಾರಿಗೆ ಸಂಚಾರ ಆರಂಭ

|
Google Oneindia Kannada News

ಶಿವಮೊಗ್ಗ, ಆಗಸ್ಟ್ 30 : ಶಿವಮೊಗ್ಗ ನಗರದಲ್ಲಿ ಸರ್ಕಾರಿ ನಗರ ಬಸ್ ಸಾರಿಗೆ ಸಂಚಾರ ಆರಂಭಗೊಂಡಿದೆ. ಜೆ ಎನ್ ನರ್ಮ್ ಯೋಜನೆಯಡಿ ನಗರಕ್ಕೆ ಒಟ್ಟು 65 ಬಸ್ಸುಗಳು ಮಂಜೂರಾಗಿದ್ದು, 20 ಬಸ್ಸುಗಳು ಆಗಮಿಸಿವೆ.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ಸೋಮವಾರ ಸರ್ಕಾರಿ ನಗರ ಸಾರಿಗೆ ಬಸ್ಸುಗಳಿಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರಿ ನಗರ ಬಸ್ ಸಂಚಾರ ಆರಂಭಿಸುವಂತೆ ಜನರು ಮುಂದಿಟ್ಟಿದ್ದ ಬೇಡಿಕೆ ಈಡೇರಿದೆ.[ರಾಮನಗರ-ಚನ್ನಪಟ್ಟಣ ನಗರ ಸಾರಿಗೆ ಬಸ್ಸಿಗೆ ಚಾಲನೆ]

KSRTC city bus service begins, Shivamogga

ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ಪುನರುತ್ಥಾನ (ಜೆ ಎನ್ ನರ್ಮ್) ಯೋಜನೆಯಡಿ ಶಿವಮೊಗ್ಗ ನಗರಕ್ಕೆ 65 ಬಸ್ಸುಗಳನ್ನು ನೀಡಲಾಗಿದೆ. ಇವುಗಳ ಪೈಕಿ 20 ಬಸ್ಸುಗಳು ಬಂದಿದ್ದು, ಶೀಘ್ರದಲ್ಲೇ ಉಳಿದ ಬಸ್ಸುಗಳು ನಗರಕ್ಕೆ ಬಂದು ಸೇರಲಿವೆ.[ಹೊಸ 241 ಟಾಟಾ ಬಸ್ ಗಳಿಗೆ ಸಿದ್ದರಾಮಯ್ಯರಿಂದ ಚಾಲನೆ]

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಅವರು, 'ಸರ್ಕಾರಿ ನಗರ ಸಾರಿಗೆ ಬಸ್ ಸಂಚಾರ ಆರಂಭಿಸುವಂತೆ ಜನರು ಒತ್ತಾಯಿಸುತ್ತಿದ್ದರು. ಇಂದಿನಿಂದ ನಗರದ ಹಲವು ಬಡಾವಣೆಗಳಿಗೆ ನಗರ ಸಾರಿಗೆ ಬಸ್ ಸೌಲಭ್ಯ ದೊರೆಯಲಿದೆ. ಜನರು ಇದರ ಉಪಯೋಗ ಪಡೆದುಕೊಳ್ಳಬೇಕು' ಎಂದು ಮನವಿ ಮಾಡಿದರು.[ಜೆ ನರ್ಮ್: ಮಂಗಳೂರು, ಉಡುಪಿಗೆ 65 ಅತ್ಯಾಧುನಿಕ ಬಸ್]

KSRTC city bus service begins, Shivamogga

ಸುಸಜ್ಜಿತ ಬಸ್ಸುಗಳು : ಕೆಎಸ್ಆರ್‌ಟಿಸಿಯ ನಗರ ಸಾರಿಗೆ ಬಸ್ಸುಗಳು ಸುಸಜ್ಜಿತ ವ್ಯವಸ್ಥೆಯನ್ನು ಹೊಂದಿವೆ. ಪ್ರಯಾಣಿಕರ ಸುರಕ್ಷತೆಗಾಗಿ ಬಸ್ಸಿನಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ವಿಶೇಷ ಚೇತನರು ಹತ್ತಲು, ಇಳಿಯಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

English summary
KSRTC has started city bus service in Shivamogga. District in-charge minister Kagodu Timmappa inaugurated bus service on August 29, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X