ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಗೆ ಈಶ್ವರಪ್ಪ ಗೈರು!

Posted By:
Subscribe to Oneindia Kannada

ಶಿವಮೊಗ್ಗ, ಅಕ್ಟೋಬರ್ 07: ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನೆಯಲ್ಲಿ ಗುರುವಾರದ ಉಪಹಾರ ಯಾಕೋ ಮಾಜಿ ಡಿಸಿಎಂ ಈಶ್ವರಪ್ಪ ಅವರಿಗೆ ರುಚಿಸಿಲ್ಲ. ತುಮಕೂರಿಗೆ ಭೇಟಿ ನೀಡಬೇಕಿದ್ದ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಗೆ ಗೈರು ಹಾಜರಾಗಿದ್ದಾರೆ. ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.

ಶಿವಮೊಗ್ಗದಲ್ಲಿ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ತುಮಕೂರಿನಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜಿಲ್ಲಾ ಸಭೆ, ನಾನು ಹೋಗಲ್ಲ. ರಾಷ್ಟ್ರೀಯ ನಾಯಕರ ಆದೇಶದ ಮೇರೆಗೆ ಸಭೆಗೆ ಹಾಜರಾಗುತ್ತಿಲ್ಲ ಎಂದಿದ್ದಾರೆ.

KS Eshwarappa on Sangolli Rayanna Brigade Tumakuru Meet

ಆದರೆ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ಯಾವುದೇ ಕಾರಣಕ್ಕೂ ನಿಲ್ಲೋದಿಲ್ಲ ಬ್ರಿಗೇಡ್ ನಿಂದ ಬಿಜೆಪಿಗೆ 30ರಿಂದ 40 ಸೀಟು ಹೆಚ್ಚು ಸಿಗಲಿದೆ. ರಾಯಣ್ಣ ಬ್ರಿಗೇಡ್ ಬಗ್ಗೆ ಯಡಿಯೂರಪ್ಪಗೆ ಮನವರಿಕೆ ಮಾಡುತ್ತೇನೆ. ಇನ್ನೊಂದು ಸುತ್ತಿನ ಮಾತುಕತೆ ನಡೆಸುತ್ತೇನೆ ಎಂದಿದ್ದಾರೆ.

ಯಡಿಯೂರಪ್ಪರನ್ನು ಸಿಎಂ ಮಾಡುವ ನಿಟ್ಟಿನಲ್ಲಿ ಮುಂದೆ ಕೆಲಸ ರಾಯಣ್ಣ ಬ್ರಿಗೇಡ್ ಗೆ ಹೋಗದಂತೆ ಬಿಎಸ್‌ವೈ ಪದೇಪದೇ ಹೇಳುತ್ತಿದ್ದಾರೆ. ಈ ಬಗ್ಗೆ ಮುಂದೆ ಇಬ್ಬರೂ ಕುಳಿತು ಚರ್ಚೆ ಮಾಡುತ್ತೇವೆ ಎಂದು ಕೆ.ಎಸ್. ಈಶ್ವರಪ್ಪ ಮತ್ತೊಮ್ಮೆ ಸ್ಪಷ್ಟನೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
KS Eshwarappa not attending the Sangolli Rayanna Brigade Tumakuru Meet. The Sangolli Rayanna Brigade meeting will be held as per the scheduled in Tumakuru on October 8.
Please Wait while comments are loading...