ಏಷಿಯಾ ಫೆಸಿಪಿಕ್ ಪುಸ್ತಕ ಸೇರಿದ ಕೊಡಕ್ಕಲ್ ಶಿವಪ್ರಸಾದ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ಮಾರ್ಚ್ 23 : ಶಿವಮೊಗ್ಗದ ಕೆನರಾ ಬ್ಯಾಂಕ್ ಅಧಿಕಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಕೊಡಕ್ಕಲ್ ಶಿವಪ್ರಸಾದ ಅವರು ಏಷಿಯಾ ಫೆಸಿಪಿಕ್ ಪುಸ್ತಕದಲ್ಲಿ ಸೇರ್ಪಡೆಗೊಂಡಿದ್ದಾರೆ. ಇದೇ ಸಂಸ್ಥೆಯ 5ನೇ ಆವೃತ್ತಿಯ ಜೀವನ ಚರಿತ್ರೆ ಪುಸ್ತಕದಲ್ಲಿಯೂ ಶಿವಪ್ರಸಾದ ಅವರು ಸೇರ್ಪಡೆಗೊಂಡಿದ್ದರು.

ಕೊಡಕ್ಕಲ್ ಶಿವಪ್ರಸಾದ ಅವರು ತಮ್ಮ ವಿವಿಧ ಕಾರ್ಯ ಚಟುವಟಿಕೆಗಳ ಛಾಪನ್ನು ಜೀವನ ಚರಿತ್ರೆ ಪುಸ್ತಕದಲ್ಲಿ ನಿರಂತರವಾಗಿ ಕಾಯ್ದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯದಲ್ಲೇ ಬಿಡುಗಡೆಗೊಳ್ಳಲಿರುವ ಏಷಿಯಾ ಫೆಸಿಪಿಕ್ ಹೂ ಇಸ್ ಹೂ ಪುಸ್ತಕದ 14ನೇ ಆವೃತ್ತಿಯಲ್ಲಿ ಪ್ರಕಟಣೆಗೆ ಆಯ್ಕೆಗೊಂಡಿದ್ದಾರೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. [ಅಂಗವಿಕಲರ ಮಾರ್ಗದರ್ಶಿ ಕೊಡಕ್ಕಲ್ ಶಿವಪ್ರಸಾದ್]

kodakkal shivaprasad
Photo Credit:

ಇದೇ ಸಂಸ್ಥೆಯ 5ನೇ ಆವೃತ್ತಿಯ ಜೀವನ ಚರಿತ್ರೆ ಪುಸ್ತಕದಲ್ಲಿಯೂ ಕೊಡಕ್ಕಲ್ ಶಿವಪ್ರಸಾದ ಅವರು ಸೇರ್ಪಡೆಗೊಂಡಿದ್ದರು. ಸಾಮಾಜಿಕ ಕಾರ್ಯಗಳಿಗೆ ವಿವಿಧ ಪ್ರಶಸ್ತಿಗಳನ್ನು ಪಡೆದಿರುವ ಇವರ ಜೀವನ ಚರಿತ್ರೆಯು ಈಗಾಗಲೇ ಇಂಗ್ಲೆಂಡಿನ ಅಂತರಾಷ್ಟ್ರೀಯ ಜೀವನ ಚರಿತ್ರೆ ಹಾಗೂ ಅಮೆರಿಕದ ಅಮೇರಿಕನ್ ಬಯೋಗ್ರಫಿ ಸಂಸ್ಥೆಗಳ ಪುಸ್ತಕದಲ್ಲಿ ಪ್ರಕಟಗೊಂಡಿದೆ. [ಕೈಕಟ್ಟಿ ಕೂಡದ ಕೊಡಕ್ಕಲ್ ಶಿವಪ್ರಸಾದ್]

ಕೆಲವು ದಿನಗಳ ಹಿಂದೆ ಕೋಲ್ಕತ್ತಾದ ಭಾರತೀಯ ಪುರಾತತ್ವ ಸಂಸ್ಥೆಯವರು ತಮ್ಮ 39ನೇ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಕೊಡಕ್ಕಲ್ ಶಿವಪ್ರಸಾದ ಅವರಿಗೆ 'ಏಷಿಯಾ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Veteran leader of persons with disability and Canara Bank officer Kodakkal Shivaprasad jut get success in entering his note at the New Delhi based leading publisher's biographical note ASIA PACIFIC Who's who.
Please Wait while comments are loading...