ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ 200 ಜನರಿಕ್ ಔಷಧ ಮಳಿಗೆಗಳು ಪ್ರಾರಂಭ

By Mahesh
|
Google Oneindia Kannada News

ಶಿವಮೊಗ್ಗ, ಸೆ. 11: ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಔಷಧ ದೊರಕಬೇಕು ಎಂಬ ಸದುದ್ದೇಶದಿಂದ ಜನರಿಕ್ ಔಷಧ ಮಳಿಗೆಗಳನ್ನು ಆರಂಭಿಸಲಾಗಿದ್ದು, ಇನ್ನೂ 200 ಇಂಥ ಮಳಿಗೆಗಳನ್ನು ರಾಜ್ಯದೆಲ್ಲೆಡೆ ವಿಸ್ತರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಅವರು ಹೇಳಿದರು.

ಜನ ಸಂಜೀವಿನಿಯಲ್ಲಿ ಶೇ.50ರಷ್ಟು ರಿಯಾಯಿತಿಯಲ್ಲಿ ಔಷಧಿಗಳು ಲಭ್ಯ ಜನ ಸಂಜೀವಿನಿಯಲ್ಲಿ ಶೇ.50ರಷ್ಟು ರಿಯಾಯಿತಿಯಲ್ಲಿ ಔಷಧಿಗಳು ಲಭ್ಯ

ಸೋಮವಾರದಂದು ಶಿವಮೊಗ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಮೇಶ್ ಕುಮಾರ್ ಅವರು ಪಾಲ್ಗೊಂಡು ಮಾತನಾಡಿದರು.

Karnataka to get 200 Generic Medical Stores : Ramesh Kumar

ಸಭೆಯ ಮುಖ್ಯಾಂಶಗಳು:
* ಜನರಿಕ್ ಔಷಧಾಲಯದಲ್ಲಿ ಎಲ್ಲಾ ಅಗತ್ಯ ಔಷಧ ಲಭ್ಯವಿರಬೇಕು ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುವುದು.
* ಔಷಧ ಕಂಪೆನಿಗಳು ಹಗಲು ದರೋಡೆಗೆ ನಡೆಸುತ್ತಿದ್ದವು. ಇದಕ್ಕೆ ನಿಯಂತ್ರಣ ಹಾಕಬೇಕೆಂಬ ಉದ್ದೇಶದಿಂದ ಸರ್ಕಾರ ಜನರಿಕ್ ಔಷಧ ಮಳಿಗೆಯನ್ನು ಪ್ರಾರಂಭ ಮಾಡಲಾಗಿದೆ.
* ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ಮಾಡಿದ ಔಷಧಗಳನ್ನೇ ಜನರಿಕ್ ಮಳಿಗೆಗಳಿಗೆ ಪೂರೈಸಲಾಗುತ್ತಿದೆ. ಖಾಸಗಿ ಔಷಧಾಲಯಗಳಿಗಿಂತ ಶೇ.70 ರಷ್ಟು ಬೆಲೆ ಕಡಿಮೆ ಇದೆ.
* ಜನರಿಕ್ ಔಷಧ ಮಳಿಗೆಯಲ್ಲಿ ಯಾವುದೇ ಬ್ರಾಂಡೆಡ್ ಕಂಪೆನಿಯ ಔಷಧಗಳನ್ನು ನೀಡುವಂತಿಲ್ಲ. ಕೇವಲ ಜನರಿಕ್ ಔಷಧಿಗಳನ್ನು ಮಾತ್ರ ವಿತರಿಸಬೇಕು.
* ಮಲೆನಾಡು ಪ್ರದೇಶದಲ್ಲಿ ಆಂಬುಲೆನ್ಸ್ ಕೊರತೆ ಇದೆ. ಇದರಿಂದಾಗಿ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಹೀಗಾಗಿ ಪ್ರತಿ 10-15 ಕಿ.ಮೀ.ಗೆ ಒಂದು ಆಂಬುಲೆನ್ಸ್ ಸೇವೆ ಒದಗಿಸಲು ರೂಪುರೇಷೆ ಸಿದ್ದಪಡಿಸಲಾಗುತ್ತಿದೆ. ಸದ್ಯದಲ್ಲೇ ಅದನ್ನು ಅನುಷ್ಟಾನಕ್ಕೆ ತರಲಾಗುತ್ತಿದೆ.

ಏನಿದು ಜನೌಷಧ? ಏನಿದರ ಮಹತ್ವ, ಎಲ್ಲೆಲ್ಲಿ ಸಿಗುತ್ತೆ?ಏನಿದು ಜನೌಷಧ? ಏನಿದರ ಮಹತ್ವ, ಎಲ್ಲೆಲ್ಲಿ ಸಿಗುತ್ತೆ?

* ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರತಿಬಂಧಕ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಈಗಾಗಲೇ ಸದನ ಸಮಿತಿ ರಚನೆಯಾಗಿದ್ದು, ವಾರದಲ್ಲಿ ಸಭೆ ನಡೆಸಿ ವಿಧಾನಸಭಾಧ್ಯಕ್ಷರಿಗೆ ವರದಿ ಸಲ್ಲಿಕೆ ಮಾಡಲಾಗುವುದು.
* ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್ ವೈದ್ಯರು ಲಭ್ಯರಾಗದಿದ್ದಲ್ಲಿ ಆಯುಷ್ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
* ಎಲ್ಲಾ ವರ್ಗದ ಜನರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಯೂನಿವರ್ಸಲ್ ಹೆಲ್ತ್ ಸ್ಕೀಂ ನವೆಂಬರ್ 01ರಿಂದ ಜಾರಿಗೊಳಿಸಲಾಗುವುದು.

English summary
Shivamogga:Karnataka minister of health and family welfare, Ramesh Kumar today said, State will get 200 Generic Medical shops, at least one ambulance per 10-15 KM will be made available specially for Malnad region
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X