ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಕಾರಿಪುರ : ನಮ್ಮ ಕಷ್ಟ ಬಗೆಹರಿಸಿ ಎಂಬುದು ತೋಚಿಬಾಯಿ ಮನವಿ

|
Google Oneindia Kannada News

Recommended Video

Public Opinion On Karnataka Election : ನಮ್ಮ ಕಷ್ಟ ಬಗೆಹರಿಸಿ ಎಂಬುದು ತೋಚಿಬಾಯಿ ಮನವಿ | Oneindia Kannada

ಶಿವಮೊಗ್ಗ, ಮೇ 07 : 'ಇರೋದಕ್ಕೆ ಮನೆ ಇಲ್ಲ. ಕುಡಿಯುವುದಕ್ಕೆ ನೀರಿಲ್ಲ. ಅಧಿಕಾರಿಗಳ ಬಳಿ ಹೇಳಿದ್ರೆ ದಾಖಲೆ ಕೊಡಿ ಅನ್ನುತ್ತಾರೆ. ನನ್ನ ಬಳಿ ಕೊಡಲು ಯಾವ ದಾಖಲೆಯೂ ಇಲ್ಲ, ನಾವು ಓದು-ಬರ ಬಾರದವರು. ನನ್ನ ಕಷ್ಟ ಯಾರಾದರೂ ಬಗೆಹರಿಸಿದರೆ ಸಾಕು' ಎನ್ನುತ್ತಾರೆ ತೋಚಿಬಾಯಿ.

ತೋಚಿಬಾಯಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಗೊಗ್ಗ ಗ್ರಾಮದ ನಿವಾಸಿ. ಸುಮಾರು 25 ವರ್ಷಗಳಿಂದ ಗ್ರಾಮದಲ್ಲಿದ್ದಾರೆ. ಆದರೆ, ಇರಲು ಸರಿಯಾದ ಮನೆ ಇಲ್ಲ, ಕುಡಿಯುವ ನೀರು ತಲು ಸುಮಾರು 1.5 ಕಿ.ಮೀ. ಹೋಗಬೇಕು.

ಶಿಕಾರಿಪುರದ ಕ್ಷೇತ್ರ ಪರಿಚಯ ಓದಿಶಿಕಾರಿಪುರದ ಕ್ಷೇತ್ರ ಪರಿಚಯ ಓದಿ

ಶಿಕಾರಿಪುರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ. ಶಿಕಾರಿಪುರ ಪಟ್ಟಣದಿಂದ ಸುಮಾರು 14 ಕಿ.ಮೀ.ದೂರದಲ್ಲಿರುವ ಗೊಗ್ಗ ಗ್ರಾಮದಲ್ಲಿ ಸುಮಾರು 25 ಮನೆಗಳಿವೆ. ಆದರೆ, ನೀರಿನ ವ್ಯವಸ್ಥೆ ಇಲ್ಲ.

Karnataka elections : Drinking water crisis in Shikaripura

ಕುಡಿಯುವ ನೀರು ತರಲು ಜನರು 1.5 ಕಿ.ಮೀ.ಸಾಗಬೇಕು. ಆದರೆ, ಅಲ್ಲಿ ಹೋದರೂ ನೀರು ಸಿಗುತ್ತದೆ ಎಂಬುದು ಖಾತರಿ ಇಲ್ಲ. ಏಕೆಂದರೆ ನೀರು ಬರಲು ಸಮಯವಿಲ್ಲ. ಒಮ್ಮೆ ಬೆಳಗ್ಗೆ, ಒಮ್ಮೆ ಸಂಜೆ, ರಾತ್ರಿ ಹೀಗೆ ಯಾವಾಗ ಬೇಕಾದರೂ ನೀರು ಬರುತ್ತದೆ.

Karnataka elections : Drinking water crisis in Shikaripura

ಒನ್ ಇಂಡಿಯಾ ಕನ್ನಡದೊಂದಿಗೆ ತೋಚಿಬಾಯಿ ತಮ್ಮ ಕಷ್ಟವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ.

English summary
Shivamogga district Shikaripura assembly constituency Gogga village facing drinking water crisis. According to villagers they have to walk 1 km to get water. Here is ground report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X