ಕೈ ತಪ್ಪಿದ ಸಾಗರದ ಟಿಕೆಟ್, ಕಣ್ಣೀರಿಟ್ಟ ಬೇಳೂರು ಗೋಪಾಲಕೃಷ್ಣ!

Posted By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ಏಪ್ರಿಲ್ 17 : ಸಾಗರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಳೂರು ಗೋಪಾಲಕೃಷ್ಣ ಕಣ್ಣೀರು ಹಾಕಿದ್ದಾರೆ. 'ಟಿಕೆಟ್ ಕೈ ತಪ್ಪಿದಕ್ಕೆ ಅಳು ಬಂದಿಲ್ಲ ಸಾಗರದಲ್ಲಿ ಅಭಿಮಾನಿಗಳ ನಿರಾಶೆಗೆ ಕಣ್ಣೀರು ಬಂದಿದೆ' ಎಂದು ಬೇಳೂರು ಗೋಪಾಲಕೃಷ್ಣ ಸಮರ್ಥನೆ ನೀಡಿದರು.

ಮಂಗಳವಾರ ಸಾಗರದ ರಾಘವೇಶ್ವರ ಭವನದಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಅಭಿಮಾನಿಗಳ ಸಭೆ ನಡೆಸಿದರು. ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮಾತು ಆರಂಭಿಸಿದ ಬೇಳೂರು ಗೋಪಾಲಕೃಷ್ಣ ಅವರು ಸಭೆಯಲ್ಲಿ ಕಣ್ಣೀರಿಟ್ಟರು.

ಸಾಗರ ಕ್ಷೇತ್ರದ ಟಿಕೆಟ್ : ಬೇಳೂರು ಗೋಪಾಲಕೃಷ್ಣ ಸಂದರ್ಶನ

ಪ್ರಶ್ನೆಗಳ ಸುರಿಮಳೆ ಹಾಕುವ ಮೂಲಕ ಆರಂಭಿಸಿದ ಬೇಳೂರು ಗೋಪಾಲಕೃಷ್ಣ ಅವರು, 'ಯಡಿಯೂರಪ್ಪ ಮಗ ರಾಘವೇಂದ್ರ ಅವರು ಲೋಕಸಭೆಗೆ ಸ್ಪರ್ಧಿಸಿದಾಗ ನನ್ನ ರಾಜಕೀಯ ಗುರುಗಳಾದ ದಿ.ಎಸ್.ಬಂಗಾರಪ್ಪ ಮಾತನಾಡಿ ಬೇಳೂರು ನಿನ್ನ ನಡೆ ಏನು ಎಂದು ಕೇಳಿದ್ದರು. ನಾನು ಪಕ್ಷದ ನಿಷ್ಠಾವಂತ ಪಕ್ಷಕ್ಕಾಗಿ ನಡೆದುಕೊಳ್ಳುವೆ ಗುರುಗಳೆ ಎಂದು ಹೇಳಿದ್ದೆ' ಎಂದರು.

Beluru Gopalkrishna

'ಪಕ್ಷ ಸಾಗರದಲ್ಲಿ ಏನು ಇಲ್ಲದಾಗ ಬೆನ್ನಿಗೆ ಹಾಕಿಕೊಂಡು ಬೆಳೆಸಿದೆ. ಇದು ನನಗೆ ಕಷ್ಟವಾಯಿತಾ?' ಎಂದು ಭಾಷಣ ಆರಂಭಿಸಿದ ಬೇಳೂರು ಭಾಷಣದ ಮದ್ಯದಲ್ಲಿ ಅವರ ಕೂಲಿಂಗ್ ಗ್ಲಾಸ್ ಒಳಗೆ ಕಣ್ಣು ನೆನೆದಿತ್ತು. ಸೇರಿದ್ದ ಅಭಿಮಾನಿಗಳು ನಾವಿದ್ದೇವೆ ಅಳುವು ನಿಮಗಲ್ಲ ಅವರ ಬೆನ್ನಿಗೆ ಪೂರವಾಗಿ ಬೆನ್ನಿಗೆ ನಿಂತರು.

ಬಿಜೆಪಿ 2ನೇ ಪಟ್ಟಿ ಬಿಡುಗಡೆ : 82 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ

'ಅಭಿಮಾನಿಗಳ ಸಲಹೆ ಸೂಚನೆ ಏನಿದೆ? ಹಾಗೆ ನಡೆದುಕೊಳ್ಳಲಿದ್ದೇನೆ. ಈಗ ಬೆಂಗಳೂರಿಗೆ ಹೋಗಿ ಪಕ್ಷದ ವರಿಷ್ಠರಿಗೆ ತಿಳಿಸುತ್ತೇನೆ. ಆಗಲೂ ವರಿಷ್ಠರು ಕೇಳದಿದ್ದಾಗ ಪುನಃ ಅಭಿಮಾನಿಗಳ ಸಭೆ ನಡೆಸಿ ಪಕ್ಷೇತರ ಸ್ಪರ್ಧಿಸುವುದಾ? ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇನೆ' ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರಿಚಯ

'ಯಾವುದೇ ಕಾರಣಕ್ಕೂ ಪಕ್ಷ ಬದಲಾಯಿಸುವ ಮಾತೆ ಇಲ್ಲ. ಈ ಅಸಮಾಧಾನದಿಂದ ನನ್ನ ಅಭಿಮಾನಿಗಳು ಯಾರ ಮೇಲೂ ಹಲ್ಲೆಗೆ ಮುಂದಾಗ ಬಾರದು. ನಿನ್ನೆ ನಡೆದ ಘಟನೆ ನನಗೆ ನೋವುಂಟು ಮಾಡಿದೆ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Haratal Halappa BJP candidate for Sagar assembly constituency for Karnataka assembly elections 2018. Beluru Gopalkrishna lost ticket in constituency. On April 17, 2018 Beluru Gopalkrishna chaired meeting with supporters.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ