ತ್ಯಾವರೆಕೊಪ್ಪದಿಂದ ಗುಜರಾತ್‌ಗೆ ಹೊರಟ 6 ಚಿರತೆಗಳು

Posted By: Gururaj
Subscribe to Oneindia Kannada

ಶಿವಮೊಗ್ಗ, ಅಕ್ಟೋಬರ್ 29 : ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ 12 ಚಿರತೆಗಳು ಗುಜರಾತ್ ಮತ್ತು ಬೆಂಗಳೂರಿಗೆ ಹೊರಟು ನಿಂತಿವೆ. ಈಗಾಗಲೇ ಸಕ್ರೆಬೈಲು ಆನೆ ಬಿಡಾರದ 5 ಆನೆಗಳನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ.

ಸಿಂಹಧಾಮದಲ್ಲಿ 6 ಮರಿಗಳು ಸೇರಿದಂತೆ 26 ಚಿರತೆಗಳಿವೆ. ಇವುಗಳಲ್ಲಿ 6 ಚಿರತೆಯನ್ನು ಅಹಮದಾಬಾದ್‌ನ ಕಮಲಾ ನೆಹರೂ ಜೈವಿಕ ಉದ್ಯಾನ ಮತ್ತು ಅಷ್ಟೇ ಸಂಖ್ಯೆಯ ಚಿರತೆಗಳನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಕಳುಹಿಸಲಾಗುತ್ತಿದೆ.

ಸಕ್ರೆಬೈಲಿನಿಂದ ಉತ್ತರ ಪ್ರದೇಶಕ್ಕೆ ಹೊರಟು ನಿಂತ ಆನೆಗಳು!

Karnataka can hand over 6 leopard to Gujarat

ಸಿಂಹಧಾಮದಿಂದ 18 ಚಿರತೆಗಳನ್ನು ಬೇರೆ ಕಡೆಗೆ ಹಸ್ತಾಂತರ ಮಾಡಲಾಗುತ್ತಿದೆ. ಆದರೆ, ಮೈಸೂರು ಸಮೀಪದ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳದ ಕಾರಣ ಅಹಮದಾಬಾದ್‌ ಮತ್ತು ಬೆಂಗಳೂರಿಗೆ ಚಿರತೆಗಳನ್ನು ಹಸ್ತಾಂತರ ಮಾಡಲಾಗುತ್ತಿದೆ.

ಚಿತ್ರಗಳು : ಸಕ್ರೆಬೈಲಿನಲ್ಲಿ ಆನೆಗಳ ತುಂಟಾಟ, ಆಟೋಟ

ಆನೆಗಳು ಉತ್ತರ ಪ್ರದೇಶಕ್ಕೆ : ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ 22 ಆನೆಗಳಿವೆ. ಇವುಗಳಲ್ಲಿ 5 ಆನೆಗಳನ್ನು ಉತ್ತರ ಪ್ರದೇಶಕ್ಕೆ ಕೊಡುಗೆಯಾಗಿ ನೀಡಲಾಗುತ್ತದೆ. ಉತ್ತರ ಪ್ರದೇಶದ ದುದ್ವಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಸಫಾರಿಗಾಗಿ ಈ ಆನೆಗಳನ್ನು ಕಳುಹಿಸಲಾಗುತ್ತಿದೆ.

ಮೈಸೂರು : 2 ಗಂಟೆಗಳ ಬಳಿಕ ಕೊನೆಗೂ ಬಲೆಗೆ ಬಿದ್ದ ಚಿರತೆ

ಪಾರ್ವತಿ, ಕಿರಣ (4), ಭಾಸ್ಕರ (5), ಅಮೃತಾ (13), ರಾಘವೇಂದ್ರ (30) ಆನೆಗಳನ್ನು ಕಳುಹಿಸಿ ಕೊಡಲಾಗುತ್ತದೆ. ಈ ಐದು ಆನೆಗಳಿಗೆ ಹೊಂದಿಕೊಳ್ಳಲು ಉತ್ತರ ಪ್ರದೇಶದ ಮಾವುತರು ಸಕ್ರೆಬೈಲಿಗೆ ಬಂದಿದ್ದು, ತರಬೇತಿ ಪಡೆಯುತ್ತಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಆನೆಗಳು ಉತ್ತರ ಪ್ರದೇಶಕ್ಕೆ ಹೊರಡಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
6 leopard of Tyavarekoppa Lion and Tiger Safari Shivamogga will shift to Gujarat and 6 will be shift to Bannerghatta National Park, Bengaluru soon.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ