ಶಿವಮೊಗ್ಗದಲ್ಲಿ ಬೃಹತ್ ಪಾದಯಾತ್ರೆ ಆರಂಭಿಸಲಿದೆ ಜೆಡಿಎಸ್

Posted By: Gururaj
Subscribe to Oneindia Kannada

ಶಿವಮೊಗ್ಗ, ಅಕ್ಟೋಬರ್ 31 : ಕರ್ನಾಟಕ ಜೆಡಿಎಸ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದೆ. ಜಿಲ್ಲೆಯ ಮೂವರು ಶಾಸಕರ ನೇತೃತ್ವದಲ್ಲಿ ನವೆಂಬರ್ 5ರಿಂದ 8ರ ತನಕ ಪಾದಯಾತ್ರೆ ನಡೆಯಲಿದೆ.

ವಾಟ್ಸಪ್ ಮೂಲಕವೂ ಜನರನ್ನು ತಲುಪಲಿದ್ದಾರೆ ಎಚ್.ಡಿ.ಕುಮಾರಸ್ವಾಮಿ

ಸೊರಬ ಶಾಸಕ ಮಧು ಬಂಗಾರಪ್ಪ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ‍್ಯನಾಯ್ಕ, ಭದ್ರಾವತಿ ಶಾಸಕ ಅಪ್ಪಾಜಿ ಗೌಡ ನೇತೃತ್ವದಲ್ಲಿ ಕುಬಟೂರಿನಿಂದ ಶಿವಮೊಗ್ಗದ ತನಕ ಬೃಹತ್ ಪಾದಯಾತ್ರೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ.

ಸಿದ್ದರಾಮಯ್ಯ ತವರು ಕ್ಷೇತ್ರದಿಂದ ಎಚ್‌ಡಿಕೆ ರಾಜ್ಯ ಪ್ರವಾಸ ಆರಂಭ!

ಶಾಸಕ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. 'ಅನ್ನಭಾಗ್ಯದಿಂದ ಶೂ ಭಾಗ್ಯದ ತನಕ ಎಲ್ಲಾ ಭಾಗ್ಯವನ್ನು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಬೆಳೆಗಳಿಗೆ ನೀರಾವರಿ ಹಾಗೂ ಜಾನುವಾರುಗಳಿಗೆ ನೀರು ಕೊಡುವ ಭಾಗ್ಯ ಕರುಣಿಸುವಂತೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ' ಎಂದು ಹೇಳಿದರು.

'ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಈ ಭಾಗದಲ್ಲಿ ನೀರಾವರಿ ಯೋಜನೆ ಜಾರಿಗೊಳಿಸಲು ಏನೂ ಮಾಡಲಿಲ್ಲ. ಕುಮಾರ್ ಬಂಗಾರಪ್ಪ ಅವರು ನೀರಾವರಿ ಸಚಿವರಾಗಿದ್ದಾಗಲೂ ಗಮನ ಹರಿಸಲಿಲ್ಲ. ಸತತ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ರೈತರಿಗಾಗಿ ಪಕ್ಷ ಹೋರಾಟ ಹಮ್ಮಿಕೊಂಡಿದೆ ' ಎಂದು ಮಧು ಬಂಗಾರಪ್ಪ ತಿಳಿಸಿದರು. ಪಾದಯಾತ್ರೆಯ ವಿವರಗಳು ಚಿತ್ರಗಳಲ್ಲಿ....

ಸೊರಬ, ಶಿಕಾರಿಪುರದಿಂದ ಆರಂಭ

ಸೊರಬ, ಶಿಕಾರಿಪುರದಿಂದ ಆರಂಭ

ನವೆಂಬರ್ 5ರಂದು ಬೆಳಗ್ಗೆ 8 ಗಂಟೆಗೆ ಕುಬಟೂರಿನ ದ್ಯಾವಮ್ಮ ದೇವಸ್ಥಾನದಿಂದ ಮಧು ಬಂಗಾರಪ್ಪ, ಶಿಕಾರಿಪುರದ ಮಲ್ಲೇನಹಳ್ಳಿಯಿಂದ ಎಸ್.ಟಿ.ಬಳಿಗಾರ್ ನೇತೃತ್ವದಲ್ಲಿ ಪಾದಯಾತ್ರೆ ಆರಂಭ. ನವೆಂಬರ್ 6ರಂದು ಬೆಳಗ್ಗೆ 8 ಗಂಟೆಗೆ ಶಿಕಾರಿಪುರ ಮಾರ್ಗವಾಗಿ ಈಸೂರು, ನವೆಂಬರ್ 7ರಂದು ಈಸೂರಿನಿಂದ ಕುಂಸಿ ಮಾರ್ಗವಾಗಿ ಆಯನೂರಿಗೆ ಪಾದಯಾತ್ರೆ ತಲುಪಲಿದೆ.

ಶಿವಮೊಗ್ಗ ಗ್ರಾಮಾಂತರದಿಂದ ಮತ್ತೊಂದು ಪಾದಯಾತ್ರೆ

ಶಿವಮೊಗ್ಗ ಗ್ರಾಮಾಂತರದಿಂದ ಮತ್ತೊಂದು ಪಾದಯಾತ್ರೆ

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ನೀರಾವರಿ ಯೋಜನೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಸಕಿ ಶಾರದಾ ಪೂರ‍್ಯನಾಯ್ಕ ಅವರು ಪಾದಯಾತ್ರೆ ಆರಂಭಿಸಲಿದ್ದಾರೆ. ನವೆಂಬರ್ 7ರಂದು ಈ ಪಾದಯಾತ್ರೆ ಮಧು ಬಂಗಾರಪ್ಪ ಅವರು ನಡೆಸುತ್ತಿರುವ ಪಾದಯಾತ್ರೆಗೆ ಸೇರ್ಪಡೆಗೊಳ್ಳಲಿದೆ.

ಭದ್ರಾವತಿಯಿಂದ ಪಾದಯಾತ್ರೆ

ಭದ್ರಾವತಿಯಿಂದ ಪಾದಯಾತ್ರೆ

ಭದ್ರಾವತಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಶಾಸಕ ಅಪ್ಪಾಜಿ ಗೌಡ ನೇತೃತ್ವದಲ್ಲಿ ಭದ್ರಾವತಿಯಿಂದ ಪಾದಯಾತ್ರೆ ನಡೆಯಲಿದೆ. ನವೆಂಬರ್ 8ರಂದು ಈ ಪಾದಯಾತ್ರೆ ಶಿವಮೊಗ್ಗ ತಲುಪಲಿದೆ. ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ.

ವಿವಿಧ ಬೇಡಿಕೆಗಳು

ವಿವಿಧ ಬೇಡಿಕೆಗಳು

* ಸೊರಬ, ಶಿವಮೊಗ್ಗ ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವುದು
* ಅರಣ್ಯ ಭೂಮಿ ಸಾಗುವಳಿದಾರರಿಗೆ ಅರಣ್ಯ ಭೂಮಿ ಶೀಘ್ರವಾಗಿ ಮಂಜೂರು ಮಾಡುವುದು
* ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Janata Dal (Secular) Karnataka organized a padayatra in Shivamogga from November 5 to 8, 2017 demanding for complete irrigation projects.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ