ಸಾಗರ: ಕೇಸರಿ ಬಾವುಟ ಹಿಡಿದು ವಿದ್ಯಾರ್ಥಿನಿಯರ ನರ್ತನ!

By: ನಮ್ಮ ಪ್ರತಿನಿಧಿ
Subscribe to Oneindia Kannada

ಸಾಗರ, ಅಕ್ಟೋಬರ್ 08: ಇಲ್ಲಿನ ಪ್ರತಿಷ್ಠಿತ ಶ್ರೀಮತಿ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ನೃತ್ಯ ಮಾಡಿದ್ದಾರೆ.

ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳ ಪಾಲಿಗೆ ಪವಿತ್ರವಾದ ಕೇಸರಿ ಬಾವುಟ (ಭಗವಾಧ್ವಜ) ಹಿಡಿದು ಕಾಲೇಜಿನಲ್ಲಿ ಹಾಡೊಂದಕ್ಕೆ ನರ್ತಿಸಿದ್ದಾರೆ.

Indira Gandhi Government First Grade Womens College Sagara

ಶನಿವಾರದಂದು ಇಂದಿರಾಗಾಂಧಿ ಕಾಲೇಜಿನಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಜೈ ಭಜರಂಗ್ ಬೀಟ್ಸ್‌ಗೆ ವಿದ್ಯಾರ್ಥಿನಿಯರು ಬೋಲ್ಡ್ ಸ್ಟೆಪ್ ಹಾಕಿ ಶಕ್ತಿ ಪ್ರದರ್ಶನ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ಘಟಕಗಳ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿದ ಸಂದರ್ಭದಲ್ಲಿ ಭಗವಾಧ್ವಜ ಹಿಡಿದು ಕುಣಿದ ವಿದ್ಯಾರ್ಥಿನಿಯರು ಕುತ್ತಿಗೆಯಲ್ಲಿ ಕೇಸರಿ ಶಾಲುಗಳು ಮತ್ತು ಕೈಯಲ್ಲಿ ಭಗವಾಧ್ವಜ ಹಿಡಿದು ನಲಿದಾಡಿದರು.

ನೆರೆದಿದ್ದ ಪ್ರೇಕ್ಷಕರ ಪೈಕಿ ಕಾಲೇಜಿನ ವಿದ್ಯಾರ್ಥಿನಿಯರಲ್ಲದೆ, ಆಡಳಿತ ಮಂಡಳಿ ಸದಸ್ಯರು ಇದ್ದರು. ಕಾಲೇಜಿನ ಆವರಣದೊಳಗೆ ನಡೆದ ಶಿಸ್ತಿನ ಕಾರ್ಯಕ್ರಮದಲ್ಲಿ ಕೆಲವು ವಿದ್ಯಾರ್ಥಿನಿಯರು ಅಶಿಸ್ತು ತೋರಿರುವುದು ನಿಜಕ್ಕೂ ದುರಂತದ ಸಂಗತಿ ಎಂದು ವಿಡಿಯೋ ನೋಡಿದವರು ಹಲುಬಿದ್ದಾರೆ.

ಕಾಲೇಜಿನ ಆವರಣದೊಳಗೆ ಸಿ.ಸಿ ಕ್ಯಾಮರ ಇದ್ದು, ಇದೆಲ್ಲವೂ ಕಾಲೇಜಿನ ಪ್ರಿನ್ಸಿಪಾಲರ ಗಮನಕ್ಕೆ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ ಎಂದು ಇನ್ನೂ ಕೆಲವರು ಪ್ರಶ್ನಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indira Gandhi Government First Grade Womens College in Sagara, Shivamogga district in news. A video of students holding Bhagavath dwajam and dancing to a Rap song has gone viral.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ