ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಒತ್ತಾಯದಿಂದ ಬಂದ್ ಮಾಡಿಸದಂತೆ ಪೊಲೀಸರಿಂದ ಎಚ್ಚರ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

Recommended Video

ಕರ್ನಾಟಕ ಬಂದ್ ಹಿನ್ನೆಲೆ ಶಿವಮೊಗ್ಗದ ಪೊಲೀಸರು ಪ್ರತಿಭಟನಾಕಾರರಿಗೆ ಕೊಟ್ಟಿದ್ದಾರೆ ವಾರ್ನಿಂಗ್ | Oneindia Kannada

ಶಿವಮೊಗ್ಗ, ಮೇ.28 : ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ, ಬಿಜೆಪಿ ಕರೆ ನೀಡಿರುವ ಬಂದ್ ಗೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿವಮೊಗ್ಗದಲ್ಲೂ ಬಂದ್ ನೀರಸವಾಗಿದೆ. ಈ ಮಧ್ಯೆ, ಬಿಜೆಪಿ ಕಾರ್ಯಕರ್ತರು ಬೀದಿಗಿಳಿದಿದ್ದಾರೆ.

ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

In Pics : ರೈತರ ಸಾಲಮನ್ನಾಗೆ ಆಗ್ರಹಿಸಿ ಬಿಜೆಪಿಯಿಂದ ಕರ್ನಾಟಕ ಬಂದ್

ಶಿವಮೂರ್ತಿ ಸರ್ಕಲ್ ನಿಂದ ಮೆರವಣಿಗೆ ಆರಂಭಿಸಿದ ಬಿಜೆಪಿ ಕೆಲ ಕಾರ್ಯಕರ್ತರು, ಮಹಾವೀರ ಜೈನ್ ಸರ್ಕಲ್ ನಲ್ಲಿ ಅಂಗಡಿ ಮುಚ್ಚುವಂತೆ ಒತ್ತಾಯಿಸಿದರು. ಬಸ್ ಓಡಿಸದಂತೆ ನಗರ ಸಾರಿಗೆ ಬಸ್ ಚಾಲಕನಿಗೆ ಎಚ್ಚರಿಸಿದರು.

In shivamogga police have warned the protesters dont force to bandh

ಈ ಮಧ್ಯೆ, ಒತ್ತಾಯವಾಗಿ ಬಂದ್ ಮಾಡಿಸದಂತೆ ಪೊಲೀಸರು ಮೈಕ್ ಮೂಲಕ ಪ್ರತಿಭಟನಾಕಾರರಿಗೆ ಎಚ್ಚರಿಸುತ್ತಿದ್ದಾರೆ. ನಗರದಲ್ಲಿ ಅಂಗಡಿ ಮುಂಗಟ್ಟು ತೆರೆಯಲಾಗುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಎಂದಿನಂತೆ ಇದೆ.

ಬಂದ್‌ಗೆ ನೀರಸ ಪ್ರತಿಕ್ರಿಯೆ: ಮೈಸೂರಲ್ಲಿ ಸಂಸದ ಪ್ರತಾಪ್ ಸಿಂಹ ವಶಕ್ಕೆಬಂದ್‌ಗೆ ನೀರಸ ಪ್ರತಿಕ್ರಿಯೆ: ಮೈಸೂರಲ್ಲಿ ಸಂಸದ ಪ್ರತಾಪ್ ಸಿಂಹ ವಶಕ್ಕೆ

ಬೆಳಗ್ಗೆಯಿಂದ ಕೆಎಸ್ಆರ್ ಟಿಸಿ ಬಸ್ ಗಳು ದೂರದೂರುಗಳಿಗೆ ಸಂಚರಿಸುತ್ತಿವೆ. ಭದ್ರಾವತಿ - ಶಿವಮೊಗ್ಗ ನಡುವಿನ ಕೆಎಸ್ಆರ್ ಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ನಗರ ಸಂಚಾರ ಬಸ್ ಗಳು ಕೂಡ ಇತರೆ ದಿನಗಳಂತೆಯೇ ಸಂಚರಿಸುತ್ತಿವೆ. ಆಟೋ, ಟ್ರಾಕ್ಸ್ ಸೇವೆಗಳು ಸಾಮಾನ್ಯ ದಿನದಂತೆಯೇ ಇವೆ.

In shivamogga police have warned the protesters dont force to bandh

ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇನ್ನು, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿಲ್ಲ.

English summary
Statewide there is a Boring response to the BJP bandh. In the meantime, at shivamogga police have warned the protesters dont force to bandh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X