ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಮಕ್ಕಳ ದಸರಾದಲ್ಲಿ ಬುಗರಿ, ಪಗಡೆಯಾಟ

By Mahesh
|
Google Oneindia Kannada News

ಶಿವಮೊಗ್ಗ, ಸೆ. 24: ನಗರದ ಪ್ರಮುಖ ವೃತ್ತ, ರಸ್ತೆಗಳು ಶನಿವಾರ ಎಂದಿಗಿಂತ ಭಿನ್ನವಾಗಿದ್ದವು. ಪ್ರತಿದಿನ ವಾಹನದಟ್ಟಣೆಯಿಂದ ತುಂಬಿ ಹೋಗುತ್ತಿದ್ದ ರಸ್ತೆಗಳು ಇಂದು ಮಾತ್ರ ಮಕ್ಕಳಿಂದ ತುಂಬಿದ್ದವು. ನಗರದ ಸಾವಿರಾರು ಮಕ್ಕಳು ಒಂದೆಡೆ ಸೇರಿ ನಲಿದಾಡಿದರು. ತಮಗಿಷ್ಟ ಬಂದಂತೆ ಸಂಭ್ರಮಿಸಿ ದಿನವನ್ನು ಸಂತೋಷವಾಗಿ ಕಳೆದರು.

ಗ್ಯಾಲರಿ: ಶಿವಮೊಗ್ಗ ದಸರಾ ವೈಭವ

ಹೌದು, ಶಿವಮೊಗ್ಗ ಮಹಾನಗರ ಪಾಲಿಕೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ದಸರಾ ಮಹೋತ್ಸವದಲ್ಲಿ ಮಕ್ಕಳ ದಸರಾ ಜಾತ್ರೆ ಕಳೆಗಟ್ಟಿತ್ತು. ಮಕ್ಕಳ ದಸರಾದಲ್ಲಿ ಚಿಣ್ಣರ ಸಂಭ್ರಮ ಹೇಳತೀರದಾಗಿತ್ತು.

ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳಲ್ಲಿ ದಸರಾ ಹಬ್ಬದ ಸಂಭ್ರಮ ಇಮ್ಮಡಿಸಿತ್ತು. ಹಬ್ಬಕ್ಕಿಂತ ಮೊದಲೇ ದಸರಾ ಮಕ್ಕಳ ಮನಸೂರೆಗೊಂಡಿತು.

ಶಿವಮೊಗ್ಗ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆಶಿವಮೊಗ್ಗ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ

ನಗರದ ಶಿವಪ್ಪನಾಯಕ ವೃತ್ತದ ಬಳಿ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳ ಸಮ್ಮುಖದಲ್ಲಿ ಮಕ್ಕಳ ದಸರಾ ಮೆರವಣಿಗೆಗೆ ಚಾಲನೆ ನೀಡಲಾಯಿತು.

ನಗರದ ಶಿವಪ್ಪ ನಾಯಕ ವೃತ್ತದಿಂದ ಹೊರಟ ಮಕ್ಕಳ ದಸರಾ ಉತ್ಸವದ ಮೆರವಣಿಗೆ ಕುವೆಂಪು ರಂಗಮಂದಿರವನ್ನು ತಲುಪಿತು. ರಂಗ ಮಂದಿರ ಆವರಣಕ್ಕೆ ಆಗಮಿಸಿದ ವಿದ್ಯಾರ್ಥಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಶಿವಮೊಗ್ಗ ದಸರಾ ಹಬ್ಬಕ್ಕೆ ಚಾಲನೆ ನೀಡಿದ ಸುಕ್ರಿ ಬೊಮ್ಮಗೌಡಶಿವಮೊಗ್ಗ ದಸರಾ ಹಬ್ಬಕ್ಕೆ ಚಾಲನೆ ನೀಡಿದ ಸುಕ್ರಿ ಬೊಮ್ಮಗೌಡ

ಕುವೆಂಪು ರಂಗಮಂದಿರದ ಆವರಣದಲ್ಲಿ ಮಕ್ಕಳ ದಸರಾ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಹಗ್ಗದ ಮೇಲಿನ ನಡಿಗೆ, ಎತ್ತಿನ ಗಾಡಿ ಸವಾರಿ, ಕುದುರೆ ಸವಾರಿ, ಶೂಟಿಂಗ್, ಶ್ವಾನ ಪ್ರದರ್ಶನ, ಜಾದು, ನೃತ್ಯ ಪ್ರದರ್ಶನ, ಸೂತ್ರ ಸಲಾಕಿ ಗೊಂಬೆಯಾಟ, ಮಕ್ಕಳ ಚಿತ್ರಸಂತೆ, ಅಗ್ನಿ ಅವಘಡ ಅಣುಕು ಪ್ರದರ್ಶನ ಮೊದಲಾದವು ಮಕ್ಕಳ ಮನಸೂರೆಗೊಂಡವು.

ಅರಿವು ಮೂಡಿಸುವ ಕಾರ್ಯಕ್ರಮ

ಅರಿವು ಮೂಡಿಸುವ ಕಾರ್ಯಕ್ರಮ

ಕೆಲವು ಕಾರ್ಯಕ್ರಮಗಳು ಮಕ್ಕಳಿಗೆ ಅರಿವು ಮೂಡಿಸುವಲ್ಲಿ ನೆರವಾಗುವುದರ ಜತೆಗೆ ರಂಜಿಸಿದವು. ಅಯ್ದ ಶಾಲೆಗಳ ಮಕ್ಕಳಿಂದ ಆಯೋಜಿಸಿದ್ದ ನೃತ್ಯ ಕಾರ್ಯಕ್ರಮ ಗಮನ ಸೆಳೆಯಿತು. ಅಲ್ಲದೆ ಎತ್ತಿನ ಗಾಡಿ, ಟಾಂಗಾ, ಕುದುರೆ ಸವಾರಿ, ಸಾಹಸ ಕ್ರೀಡೆಗಳು, ಗ್ರಾಮೀಣ ಕ್ರೀಡೆಗಳು ವಿನೋದದ ಆಟದಲ್ಲಿ ಪಾಲ್ಗೊಂಡ ಮಕ್ಕಳು ಸಂಭ್ರಮಿಸಿದರು.

ಅಮೋಘ ಕೃಷ್ಣ ಮಾತನಾಡಿ

ಅಮೋಘ ಕೃಷ್ಣ ಮಾತನಾಡಿ

ವಿವಿಧ ಶಾಲೆಗಳ ಹೆಚ್ಚಿನ ಸಂಖ್ಯೆಯ ಮಕ್ಕಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡ್ರಾಮಾ ಜೂನಿಯರ್ ಖ್ಯಾತಿಯ ಕಲಾವಿದ ಅಮೋಘ ಕೃಷ್ಣ ಮಾತನಾಡಿ, ಪಠ್ಯ ಚಟುವಟಿಕೆಗಳ ಜತೆಗೆ ಸಹಪಠ್ಯ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ಸದಭಿರುಚಿಯ ಯಾವುದೇ ರೀತಿಯ ಸಹಪಠ್ಯ ಚಟುವಟಿಕೆಗಳಿಂದ, ಪಡೆಯುವ ಶಿಕ್ಷಣಕ್ಕೆ ಹೊಸ ಆಯಾಮವನ್ನೇ ನೀಡಲಿದೆ ಎಂದರು.

ನಾನಾ ರೀತಿಯ ಚಟುವಟಿಕೆಗಳು

ನಾನಾ ರೀತಿಯ ಚಟುವಟಿಕೆಗಳು

ಸಂಗೀತ, ಸಾಹಿತ್ಯ, ನೃತ್ಯ, ನಾಟಕ, ಕ್ರೀಡೆ ಹೀಗೆ ನಾನಾ ರೀತಿಯ ಚಟುವಟಿಕೆಗಳು ವಿದ್ಯಾರ್ಥಿಯ ಸರ್ವಾಂಗೀಣ ಪ್ರಗತಿಗೆ ಸಹಕಾರಿಯಾಗಿದೆ. ನಿಶ್ಚಿತವಾದ ಗುರಿ ಹಾಗೂ ಆ ಗುರಿ ಸಾಧನೆಯ ಪರಿಶ್ರಮ ಇದ್ದರೆ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಸಲು ಸಾಧ್ಯ. ಡ್ರಾಮಾ ಜ್ಯೂನಿಯರ್ ತನ್ನ ಸಾಂಸ್ಕೃತಿಕ ಬದುಕಿನ ಮಹತ್ವದ ತಿರುವು ಎಂದ ಅಮೋಘ ಕೃಷ್ಣ

ಶಾಲೆಯ ಹೊರಗಿನ ಪಠ್ಯ

ಶಾಲೆಯ ಹೊರಗಿನ ಪಠ್ಯ

ಇದು ಒಂದು ರೀತಿಯಲ್ಲಿ ಶಾಲೆಯ ಹೊರಗಿನ ಪಠ್ಯ, ವೈವಿಧ್ಯಮಯ ಪಾತ್ರಗಳ ಮೂಲಕ ಬಹುದೊಡ್ಡ ಪಾಠ ಕಲಿತ್ತಿದ್ದೇನೆ. ಮಕ್ಕಳಲ್ಲಿನ ಪ್ರತಿಭೆಗೆ ಇದೊಂದು ಸೂಕ್ತ ವೇದಿಕೆ ಎಂದರು.

ಈ ಬಾರಿಯ ಎಸ್‌ಎಸ್‌ಎಲ್‌ಸಿ ಟಾಪರ್ ಸುಭಾಷಿಣಿ ಮಕ್ಕಳ ದಸರಾಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಕರು, ಪೋಷಕರು ಮಕ್ಕಳ ಬಗ್ಗೆ ಅವರದೇ ಆದ ಕನಸುಗಳನ್ನು ಕಟ್ಟಿಕೊಂಡಿದ್ದಾರೆ.
ರಾಮಕೃಷ್ಣ ವಿದ್ಯಾಸಂಸ್ಥೆ

ರಾಮಕೃಷ್ಣ ವಿದ್ಯಾಸಂಸ್ಥೆ

ಇದನ್ನು ಸಾಧನೆಯ ಮೂಲಕ ಈಡೇರಿಸಬೇಕಾದ ಜವಾಬ್ದಾರಿ ಮಕ್ಕಳ ಮೇಲಿದೆ. ತಾವು ಕಲಿತ ರಾಮಕೃಷ್ಣ ವಿದ್ಯಾಸಂಸ್ಥೆಯ ವಾತಾವರಣದಿಂದಾಗಿ ಕನ್ನಡ ಮಾತೃಭಾಷೆ ಅಲ್ಲದಿದ್ದರೂ, ಕನ್ನಡವೂ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಪೂರ್ಣಾಂಕ ಪಡೆಯಲು ಸಾಧ್ಯವಾದದ್ದು ಶಾಲೆಯ ಶಿಕ್ಷಕರು, ಪ್ರಾಂಶುಪಾಲರು ನೀಡಿದ ಸಹಕಾರ ಕಾರಣ ಎಂದು ಸ್ಮರಿಸಿದರು.

ಮೇಯರ್ ಏಳುಮಲೈ ಅಧ್ಯಕ್ಷತೆ

ಮೇಯರ್ ಏಳುಮಲೈ ಅಧ್ಯಕ್ಷತೆ

ಪಾಲಿಕೆ ಮೇಯರ್ ಏಳುಮಲೈ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಯುಕ್ತ ಮುಲ್ಲೈ ಮುಹಿಲಿನ್ ಹಾಗೂ ಪಾಲಿಕೆಯ ಎಲ್ಲಾ ಸದಸ್ಯರು ಅಕಾರಿಗಳು ಉಪಸ್ಥಿತರಿದ್ದರು. ಸಹನಾ ಚೇತನ್ ನಿರೂಪಿಸಿದರು. ಮಕ್ಕಳ ದಸರಾ ಕಾರ್ಯಕ್ರಮದ ಅಧ್ಯಕ್ಷೆ ಸುರೇಖ ಮುರಳೀಧರ್ ಸ್ವಾಗತಿಸಿದರು. ಗೌರಿ ಶ್ರೀನಾಥ್‌ರಿಂದ ವಂದಿಸಿದರು.

English summary
Children Dasara featured folk games and Magic show and many more fun activities. Dasara, the ten-day long cultural extravaganza, will be held in the city under the aegis of Shivamogga City Corporation from September 21 to 30, said Mayor Elumalai Babu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X