ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಜೆಪಿ ಕೊನೆ ಸಭೆಯಲ್ಲಿ ಯಡಿಯೂರಪ್ಪ ಹೇಳಿದ್ದೇನು?

|
Google Oneindia Kannada News

ಶಿವಮೊಗ್ಗ, ಡಿ. 29 : ಬಿಜೆಪಿ ಸೇರುವ ಎಲ್ಲಾ ಗೊಂದಲಗಳಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ತವರು ಕ್ಷೇತ್ರ ಶಿಕಾರಿಪುರದಲ್ಲಿ ಭಾನುವಾರ ತೆರೆ ಎಳೆದಿದ್ದಾರೆ.ಇದು ನನ್ನ ಕೆಜೆಪಿಯ ಕೊನೆ ಸಭೆಯಾಗಿದ್ದು, ಶೀಘ್ರದಲ್ಲೇ ಬಿಜೆಪಿಗೆ ಮರಳಲಿದ್ದೇನೆ ಎಂದು ಅವರು ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿ ಸೇರುವ ಕುರಿತು ಮೊದಲ ಬಾರಿಗೆ ಯಡಿಯೂರಪ್ಪ ಬಹಿರಂಗವಾಗಿ ಮಾತನಾಡಿದ್ದಾರೆ.

ಭಾನುವಾರ ಬಿ.ಎಸ್.ಯಡಿಯೂರಪ್ಪ ಅವರ ಸ್ವ ಕ್ಷೇತ್ರ ಶಿಕಾರಿಪುರದಲ್ಲಿ ಕೆಜೆಪಿ ಕಾರ್ಯಕರ್ತರು ಸಮಾವೇಶ ಏರ್ಪಡಿಸಲಾಗಿತ್ತು. ಸಮಾವೇಶ ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಇದು ನನ್ನ ಕೊನೆಯ ಕೆಜೆಪಿ ಸಭೆಯಾಗಿದ್ದು, ಶೀಘ್ರದಲ್ಲೇ ಮಾತೃಪಕ್ಷ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದೇನೆ ಎಂದು ಹೇಳಿದರು. ತಮ್ಮ ಸ್ವ ಕ್ಷೇತ್ರದಲ್ಲಿಯೇ ಯಡಿಯೂರಪ್ಪ ಬಿಜೆಪಿಗೆ ವಾಪಸ್ ಆಗುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. [ಬಿಎಸ್ವೈ ಬಿಜೆಪಿಗೆ ಮರಳುವುದು ಖಚಿತ]

B.S.Yeddyurappa

ತಾವು ಬಿಜೆಪಿಗೆ ಮರಳುವುದು ಖಚಿತವಾಗಿದ್ದು, ಸಂಕ್ರಾತಿ ನಂತರ ಮಾತೃಪಕ್ಷ ಬಿಜೆಪಿಗೆ ಮರಳಲಿದ್ದೇನೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಪಡಿಸಿದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ತಾವು ಬೆಂಬಲ ನೀಡುತ್ತಿದ್ದು, ಅವರು ಪ್ರಧಾನಿಯಾಗಲಿ ಎಂಬ ಉದ್ದೇಶದಿಂದ ಬಿಜೆಪಿಗೆ ಮರಳುತ್ತಿದ್ದೇನೆ ಎಂದು ಯಡಿಯೂರಪ್ಪ ಹೇಳಿದರು.

ಮಾತೃಪಕ್ಷ ಬಿಜೆಪಿಯಿಂದ ನನಗೆ ಆಹ್ವಾನ ಬಂದಿದೆ. ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸುವ ಏಕೈಕ ಉದ್ದೇಶದಿಂದ ನಾನು ಬಿಜೆಪಿಗೆ ಮರಳುತ್ತಿದ್ದೇನೆ. ನನಗೆ ಯಾವುದೇ ಸ್ಥಾನಮಾನದ ಆಸೆ ಇಲ್ಲ ಎಂದು ಯಡಿಯೂರಪ್ಪ ತಿಳಿಸಿದರು. ಕೆಜೆಪಿ ಅಧ್ಯಕ್ಷರಾಗಿ ಇದು ನನ್ನ ಕೊನೆಯ ಸಭೆ. ಸಂಕ್ರಾತಿ ನಂತರ ಬಿಜೆಪಿಗೆ ಮರಳುವ ದಿನಾಂಕ ಪ್ರಕಟಿಸುತ್ತೇನೆ ಎಂದರು.

ಬಿಜೆಪಿಗೆ ನಾನು ಮರಳಬೇಕು ಎಂದು ಹಲವಾರು ರಾಜ್ಯ ನಾಯಕರು ಮತ್ತು ಜನರು ಅಭಿಪ್ರಾಯಪಡುತ್ತಿದ್ದಾರೆ. ಆದ್ದರಿಂದ ಮಾತೃಪಕ್ಷಕ್ಕೆ ಮರಳುತ್ತಿದ್ದೇನೆ. ಸಂಕ್ರಾತಿ ನಂತರ ಪಕ್ಷಕ್ಕೆ ಮರಳುವ ದಿನಾಂಕವನ್ನು ಘೋಷಿಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು. ಬಿಜೆಪಿ ನಾಯಕರೊಂದಿಗೆ ಸೇರಿ ಮುಂಬರುವ ಲೋಕಸಭೆ ಚುನಾವಣೆಯನ್ನು ಎದುರಿಸುತ್ತೇವೆ ಮತ್ತು ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಪ್ರಯತ್ನ ನಡೆಸುತ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ನಮ್ಮ ನಡುವಿನ ಜಗಳಗಳೇ ಕಾರಣವಾಯಿತು. ವಿಧಾನಸಭೆ ಚುನಾವಣೆಯ ಸಮಯದಲ್ಲಿಯೂ ತಾವು ಬಿಜೆಪಿಯಲ್ಲಿಯೇ ಇದ್ದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸುತ್ತೇವೆ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.

English summary
KJP president and former CM B.S.Yeddyurappa said he will join BJP soon. On Sunday, December 29 in Shikaripura he addressed KJP activists meeting and said, he will support Narendra Modi and he will join BJP soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X