ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ

Posted By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ಡಿಸೆಂಬರ್ 20 : ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಚಿನ್ನಾಭರಣವನ್ನು ಪೊಲೀಸರ ನೆರವಿನಿಂದ ವಾರಸುದಾರರಿಗೆ ತಲುಪಿಸುವ ಮೂಲಕ ಮಹಿಳೆಯೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ.

ಆಟೋದಲ್ಲಿ ಪ್ರಯಾಣಿಸುತ್ತಿದ್ದ ಸಮೀನಾ ಬಾನು 55 ಗ್ರಾಂ ತೂಕದ ಚಿನ್ನದ ಸರವನ್ನು ಆಟೋದಲ್ಲಿ ಮರೆತು ಹೋಗಿದ್ದಾರೆ. ಅದೇ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಆಶಾ ಸರವನ್ನು ಗಮನಿಸಿ ತೆಗೆದುಕೊಂಡು ಹೋಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಲುಪಿಸಿದ್ದಾರೆ.

Honest woman returns Gold jewellery after seeing in auto

ಎಸ್ಪಿಯವರ ಸೂಚನೆಯಂತೆ ತುಂಗಾ ನಗರ ಠಾಣೆ ಪೊಲೀಸರು ಸರ ಕಳೆದುಕೊಂಡಿದ್ದ ಸಮೀನಾಬಾನು ಅವರನ್ನು ಪತ್ತೆ ಹಚ್ಚಿ ಆಶಾ ಅವರ ಮೂಲಕ ಸರವನ್ನು ತಲುಪಿಸಿದ್ದಾರೆ. ಆಶಾ ಅವರ ಪ್ರಾಮಾಣಿಕತೆಗೆ ಮತ್ತು ಪೊಲೀಸ್ ಸಹಕಾರಕ್ಕೆ ಸಮೀನಾಬಾನು ಕೃತಜ್ಞತೆ ಸಲ್ಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Honest woman from shivamogga returns Gold jewellery after seeing in auto: A women called Asha handed over 55 gram gold jewellery to Sameena banu through police. she found that in auto. this was happened in shivamogga.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ