ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರೀ ಮಳೆಗೆ ಮೈದುಂಬಿದ ತುಂಗೆ, ಗಾಜನೂರು ಡ್ಯಾಂನಿಂದ ನೀರು ಹೊರಕ್ಕೆ

By Gururaj
|
Google Oneindia Kannada News

ಶಿವಮೊಗ್ಗ, ಜೂನ್ 11 : ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ತುಂಗಾನದಿ ಭರ್ತಿಯಾಗಿದ್ದು, ಗಾಜನೂರು ಡ್ಯಾಂನಿಂದ 5 ಗೇಟ್‌ಗಳನ್ನು ತೆಗೆದು ಹೆಚ್ಚಿನ ನೀರನ್ನು ಹೊರಬಿಡಲಾಗುತ್ತಿದೆ.

ಶನಿವಾರ ಮತ್ತು ಭಾನುವಾರ ತುಂಗಾ ನದಿ ಪಾತ್ರದ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಭಾಗದಲ್ಲಿ ಭಾರೀ ಮಳೆಯಾಗಿದೆ. ಆದ್ದರಿಂದ, ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಆದ್ದರಿಂದ, ಭಾನುವಾರ ಗಾಜನೂರು ಡ್ಯಾಂನ 5 ಗೇಟ್‌ಗಳನ್ನು ತೆರೆಯಲಾಗಿದೆ.

ಕೊಡಗು: 24 ಗಂಟೆಗಳಲ್ಲಿ 104 ಮಿ.ಮೀ ಮಳೆ ದಾಖಲು ಕೊಡಗು: 24 ಗಂಟೆಗಳಲ್ಲಿ 104 ಮಿ.ಮೀ ಮಳೆ ದಾಖಲು

3.24 ಟಿಎಂಸಿ ನೀರನ್ನು ಮಾತ್ರ ಜಲಾಶಯದಲ್ಲಿ ಸಂಗ್ರಹಿಸಲು ಸಾಧ್ಯ. ಜಲಾಶಯಕ್ಕೆ ಸದ್ಯ9460 ಕ್ಯುಸೆಕ್ ಒಳ ಹರಿವಿದೆ. 5 ಗೇಟುಗಳ ಮೂಲಕ 9400 ಕ್ಯುಸೆಕ್ ನೀರನ್ನು ತುಂಗಾ ನದಿಗೆ ಬಿಡಲಾಗುತ್ತಿದೆ.

Heavy rain : Gajanur dam 5 gates opened to release excess water

ಜಲಾಶಯದ ಗೇಟ್ ತೆರೆದಿರುವುದರಿಂದ ನೂರಾರು ಪ್ರವಾಸಿಗರು ಜಲಾಶಯ ನೋಡಲು ಆಗಮಿಸುತ್ತಿದ್ದಾರೆ. ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಶಿವಮೊಗ್ಗದಲ್ಲಿಯೂ ತುಂಗೆಯನ್ನು ನೋಡಲು ಜನರು ಆಗಮಿಸುತ್ತಿದ್ದಾರೆ.

ಭಾರಿ ಮಳೆ: ಚಿಕ್ಕಮಗಳೂರಿನ ನಾಲ್ಕು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ ಭಾರಿ ಮಳೆ: ಚಿಕ್ಕಮಗಳೂರಿನ ನಾಲ್ಕು ತಾಲೂಕುಗಳ ಶಾಲಾ ಕಾಲೇಜುಗಳಿಗೆ ರಜೆ

Heavy rain : Gajanur dam 5 gates opened to release excess water

ತೀರ್ಥಹಳ್ಳಿ, ಮಂಡಗದ್ದೆ, ಆಗುಂಬೆ, ಕೊಪ್ಪ ಭಾಗದಲ್ಲಿ ಮಳೆಯ ಬಿದ್ದ ಬಳಿಕ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಜಲಾಶಯದಿಂದ ಇನ್ನೂ ಹೆಚ್ಚಿನ ನೀರನ್ನು ಹೊರಬಿಡುವ ನಿರೀಕ್ಷೆ ಇದ್ದು, ನದಿ ಪಾತ್ರದ ಜನರಿಗೆ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ.

English summary
Heavy rain in Chikkamagaluru, Sringeri, Thirthahalli. Inflow into Tunga river and Gajanur dam rising from past two days. In Shivamogga Gajanur dam 5 gates opened to release excess water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X