ಶಿವಮೊಗ್ಗ : ಯುವತಿಗೆ ಲೈಂಗಿಕ ಕಿರುಕುಳ, ಯೋಧನ ಬಂಧನ

Posted By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ನವೆಂಬರ್ 20 : ಸಿನಿಮಾ ನೋಡುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಸಿಆರ್‌ಪಿಎಫ್ ಯೋಧನಿಗೆ ಸಾರ್ವಜನಿಕರು ಥಳಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜಯನಗರದ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಲಾಗಿದೆ.

ಯೋಧನನ್ನು ವಿದ್ಯಾನಗರದ ನಿವಾಸಿ ರವಿಕುಮಾರ್ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಶಿವಮೊಗ್ಗ ನಗರದ ಮಲ್ಲಿಕಾರ್ಜುನ ಚಿತ್ರಮಂದಿರಕ್ಕೆ ರವಿಕುಮಾರ್ ಮದ್ಯ ಸೇವನೆ ಮಾಡಿಕೊಂಡು ಭರ್ಜರಿ ಸಿನಿಮಾ ನೋಡಲು ಬಂದಿದ್ದ.

ಸಿಆರ್‌ಪಿಎಫ್‌ ಯೋಧರ ಕಾರ್ಯಕ್ಕೆ ಸಲಾಂ ಎನ್ನಿ

Herrasment : CRPF jawan arrested in Shivamogga

ಈ ಸಮಯದಲ್ಲಿ ರವಿಕುಮಾರ್ ಪಕ್ಕದಲ್ಲಿ ಕುಳಿತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ರವಿಕುಮಾರ್ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ನಂತರ ಚಿತ್ರಮಂದಿರದಲ್ಲಿದ್ದ ಜನರು ಆತನನ್ನು ಹೊರಗೆ ಎಳೆದುಕೊಂಡು ಹೋಗಿ ಥಳಿಸಿದ್ದಾರೆ.

'ನಮ್ಮ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಕ್ಕೆ, ನಿಮ್ಮ ಸೈನಿಕರನ್ನು ಕೊಂದ್ವಿ'

ನಂತರ ಜಯನಗರ ಪೊಲೀಸರಿಗೆ ಆರೋಪಿಯನ್ನು ಹಸ್ತಾಂತರ ಮಾಡಿದ್ದಾರೆ. ಸ್ಟೇಷನ್ ಮೆಟ್ಟಿಲು ಹತ್ತುತ್ತಿದ್ದಂತೆ ತಾನು ಸಿಆರ್‌ಪಿಎಫ್ ಯೋಧ ಎಂದು ಆತ ಪರಿಚಯ ಹೇಳಿಕೊಂಡಿದ್ದಾನೆ.

ತಾನು ತಪ್ಪು ಮಾಡಿರುವುದಾಗಿ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಸಿಆರ್‌ಪಿಎಫ್‌ಲ್ಲಿದ್ದ ರವಿಕುಮಾರ್ ಕೆಲವು ದಿನಗಳ ಹಿಂದೆ ರಜೆ ಮೇಲೆ ತವರಿಗೆ ಆಗಮಿಸಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A CRPF jawan Ravikumar has been arrested by Jayanagar police on charges of sexually harassing a women at a cinema hall in Shivamogga. He was beaten up before being handed over to police by people.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ