ವೃದ್ಧರ ಮೇಲೆ ಮಾಜಿ ಶಾಸಕ ಶಿವರಾಮೇಗೌಡ ರೌಡಿಸಂ?

Posted By:
Subscribe to Oneindia Kannada


ಶಿವಮೊಗ್ಗ, ನವೆಂಬರ್ 11 : ನಿಶ್ಚಿತಾರ್ಥ ಕಾರ್ಯಕ್ರಮವೊಂದರಲ್ಲಿ ನಾಗಮಂಗಲದ ಮಾಜಿ ಶಾಸಕ ಶಿವರಾಮೇಗೌಡ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ತುಣುಕೊಂದು ಸದ್ಯಕ್ಕೆ ಎಲ್ಲೆಡೆ ಹರಿದಾಡುತ್ತಿದೆ. ಹಲ್ಲೆಗೊಳಗಾದ ವೃದ್ಧರ ಮಗ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಎಲ್.ಆರ್.ಶಿವರಾಮೇಗೌಡ ಆರೋಪ ನಿರಾಕರಿಸಿದ್ದಾರೆ.

ಈ ಪ್ರಕರಣದ ಸಂಬಂಧ ನಾಗಮಂಗಲದ ಮಾಜಿ ಶಾಸಕ ಶಿವರಾಮೇಗೌಡ ಸೇರಿದಂತೆ ಇಬ್ಬರ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ. ಭದ್ರಾವತಿಯ ನಿಂಗಪ್ಪ ಎಂಬುವವರು ದೂರು ದಾಖಲಿಸಿದ್ದಾರೆ. ಶಿವಮೊಗ್ಗ ನಗರದ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಬೆಟ್ಟೇಗೌಡ ಅವರ ಪುತ್ರಿ ಹಾಗೂ ನಾಗರಾಜ್ ಅವರ ಪುತ್ರನಿಗೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಈ ವೇಳೆ ಮಾಜಿ ಶಾಸಕ ಶಿವರಾಮೇಗೌಡ ಕೂಡ ಉಪಸ್ಥಿತರಿದ್ದರು.[ವಿಡಿಯೋ: ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಶಾಸಕ]

former legislator shivarame goweda assaulting to old man

ನಿಂಗಯ್ಯ ಹಾಗೂ ಬೆಟ್ಟೇಗೌಡ ಮಧ್ಯೆ ಹಣಕಾಸಿನ ವ್ಯವಹಾರವಿದ್ದು, ನಿಂಗಯ್ಯ ಅವರು ನಿಶ್ಚತಾರ್ಥ ನಡೆಯುವ ಸ್ಥಳಕ್ಕೆ ಬಂದು ಹಣ ವಾಪಸ್ ನೀಡುವಂತೆ ಹೇಳಿದ್ದಾರೆ. ಈ ಸಮಯದಲ್ಲಿ ಇಬ್ಬರು ಮಧ್ಯೆ ಹೊಡೆದಾಟ ನಡೆದಿದ್ದು, ಮಾಜಿ ಶಾಸಕ ಶಿವರಾಮೇಗೌಡ ಕೂಡ ಸೇರಿ ಹಲ್ಲೆ ನಡೆಸಿದರು ಎಂದು ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿವರಾಮೇಗೌಡ, ನಿಂಗಯ್ಯ ಮತ್ತು ಬೆಟ್ಟೇಗೌಡರ ಮಧ್ಯೆ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋಗಿದ್ದೆ, ನಾನಿಲ್ಲದಿದ್ದಿದ್ದರೆ ಅಲ್ಲಿ ಕೊಲೆಯೇ ನಡೆದು ಹೋಗುತ್ತಿತ್ತು, ಅವರಿಗೆ ಸಹಾಯ ಮಾಡಿದ ನನ್ನನ್ನೇ ಈಗ ದೂರುತ್ತಿದ್ದಾರೆ ಎಂದು ತಿಳಿಸಿದ್ದಾರೆ.[ರಮ್ಯಾ ಸೋಲಿಗೆ ಯಾರು ಕಾರಣ ಗೊತ್ತೆ?]

ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರನ್ನು ಹಲ್ಲೆಗೊಳಗಾದ ನಿಂಗಪ್ಪ ಅವರ ಮಗ ಆನಂದ್ ಅವಾಚ್ಯ ಶಬ್ದಗಳಿಂದ ಬಯ್ದಿದ್ದು, ಅವರಿಂದಲೇ ಈ ಎಲ್ಲ ಗಲಾಟೆ ನಡೆಯಿತು. ಅವರು ನನ್ನ ತಂದೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಗಾಯಾಳು ನಿಂಗಪ್ಪ ಅವರೇ ಈ ಬಗ್ಗೆ ಮಾತನಾಡಿದ್ದು, ನನ್ನನ್ನು ರೂಮಿನೊಳಗೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದರು ಎಂದು ಹೇಳಿದ್ದಾರೆ.

ಸದ್ಯಕ್ಕೆ ಗಾಯಾಳು ನಿಂಗಪ್ಪ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈಗ ಎಲ್ಲೆಡೆ ಹರಿದಾಡುತ್ತಿರುವ ವಿಡಿಯೋ ತುಣುಕಿನಲ್ಲಿ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರು ನಿಂಗಪ್ಪರನ್ನು ಬಲವಂತವಾಗಿ ರೂಮಿನೊಳಗೆ ನೂಕುತ್ತಿರುವ ದೃಶ್ಯ ಕಂಡುಬರುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former legislator Shivarame goweda assaulting to old man in shimoga. this issue releted CCTV footage captured on camera everywhere while haridaduttide.
Please Wait while comments are loading...