ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಚುನಾವಣೆ ಪ್ರಚಾರ ಎಸ್.ಬಂಗಾರಪ್ಪ ಸುತ್ತ ಗಿರಕಿ ಹೊಡೆಯುತ್ತಿದೆ

|
Google Oneindia Kannada News

Recommended Video

Shimoga Lok Sabha By-elections 2018 : ಉಪಚುನಾವಣೆ ವೇಳೆ ಎಸ್ ಬಂಗಾರಪ್ಪ ಹೆಸರು ಜೋರಾಗಿ ಕೇಳಿ ಬರ್ತಿರೋದ್ಯಾಕೆ?

ಶಿವಮೊಗ್ಗ, ಅಕ್ಟೋಬರ್ 26 : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ದಿ.ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಸುತ್ತ ಗಿರಕಿ ಹೊಡೆಯುತ್ತಿದೆ. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ.

ವರ್ಣರಂಜಿತ ವ್ಯಕ್ತಿತ್ವದ ಚಾಣಾಕ್ಷ ರಾಜಕಾರಣಿ ಎಸ್.ಬಂಗಾರಪ್ಪ. ಅವರು ನಿಧನರಾಗಿ 8 ವರ್ಷಗಳು ಕಳೆಯುತ್ತಾ ಬಂದಿದೆ. ಆದರೆ, ಜಿಲ್ಲೆಯಲ್ಲಿ ಚುನಾವಣೆಗಳು ಬಂದಾಗ ಬಂಗಾರಪ್ಪ ಅವರ ವಿಚಾರ ಚರ್ಚೆಗೆ ಬರುತ್ತದೆ.

ಮಧು ಬಂಗಾರಪ್ಪಗೆ ಹಲವು ಪ್ರಶ್ನೆ ಕೇಳಿದ ಕುಮಾರ್ ಬಂಗಾರಪ್ಪಮಧು ಬಂಗಾರಪ್ಪಗೆ ಹಲವು ಪ್ರಶ್ನೆ ಕೇಳಿದ ಕುಮಾರ್ ಬಂಗಾರಪ್ಪ

ಬಂಗಾರಪ್ಪ ಅವರು ಸಚಿವರಾಗಿ, ಮುಖ್ಯಮಂತ್ರಿಯಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ಅವುಗಳ ಫಲಾನುಭವಿಗಳು ಇಂದೂ ಜಿಲ್ಲೆಯಲ್ಲಿದ್ದಾರೆ. ಆದ್ದರಿಂದ, ಬೇರೆ-ಬೇರೆ ಪಕ್ಷಗಳ ನಾಯಕರು ಬಂಗಾರಪ್ಪ ಅವರ ಹೆಸರು ಹೇಳಿ ಮತಗಳಿಕೆ ಮಾಡಲು ಪ್ರಯತ್ನ ನಡೆಸುತ್ತಾರೆ.

ಶಿವಮೊಗ್ಗ ಉಪ ಚುನಾವಣೆ : ನಾಯಕರ ಏಟು, ತಿರುಗೇಟುಗಳುಶಿವಮೊಗ್ಗ ಉಪ ಚುನಾವಣೆ : ನಾಯಕರ ಏಟು, ತಿರುಗೇಟುಗಳು

ಜಿಲ್ಲೆಯಲ್ಲಿ ಬಂಗಾರಪ್ಪ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈಡಿಗ ಸಮುದಾಯದ ಮತವೂ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟ ಪ್ರಭಾವ ಬೀರುತ್ತದೆ. ಆದ್ದರಿಂದ, ಎಸ್.ಬಂಗಾರಪ್ಪ ಅವರು ಕುರಿತು ಇಂದಿಗೂ ಚರ್ಚೆಗಳು ನಡೆಯುತ್ತಿವೆ...

ಶಿವಮೊಗ್ಗ ಉಪ ಚುನಾವಣೆ : ಆಣೆ-ಪ್ರಮಾಣ ರಾಜಕೀಯ ಆರಂಭಶಿವಮೊಗ್ಗ ಉಪ ಚುನಾವಣೆ : ಆಣೆ-ಪ್ರಮಾಣ ರಾಜಕೀಯ ಆರಂಭ

ಬಂಗಾರಪ್ಪ ಪುತ್ರನ ಸ್ಪರ್ಧೆ

ಬಂಗಾರಪ್ಪ ಪುತ್ರನ ಸ್ಪರ್ಧೆ

ದಿ.ಎಸ್.ಬಂಗಾರಪ್ಪ ಪುತ್ರ, ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ. ಬಂಗಾರಪ್ಪ ಅವರ ಮತ್ತೊಬ್ಬ ಪುತ್ರ ಕುಮಾರ್ ಬಂಗಾರಪ್ಪ ಹಾಲಿ ಸೊರಬ ಕ್ಷೇತ್ರದ ಬಿಜೆಪಿ ಶಾಸಕರು. ಆದ್ದರಿಂದ, ಪ್ರಚಾರದ ಸಂದರ್ಭದಲ್ಲಿ ಬಂಗಾರಪ್ಪ ಅವರ ಹೆಸರು ಕೇಳಿಬರುತ್ತಿದೆ.

ಕುಮಾರ್ ಬಂಗಾರಪ್ಪ ಆರೋಪ

ಕುಮಾರ್ ಬಂಗಾರಪ್ಪ ಆರೋಪ

ಸೊರಬದಲ್ಲಿ ಚುನಾವಣಾ ಪ್ರಚಾರ ಉದ್ದೇಶಿಸಿ ಮಾತನಾಡಿದ್ದ ಕುಮಾರ್ ಬಂಗಾರಪ್ಪ ಅವರು, 'ಬಂಗಾರಪ್ಪ ಅವರನ್ನು ಕಾಂಗ್ರೆಸ್ ಬಳಸಿಕೊಂಡಿದೆಯೇ ಹೊರತು ಅವರಿಗೆ ಏನೂ ಮಾಡಲಿಲ್ಲ. ಈಗ ಮಧು ಬಂಗಾರಪ್ಪ ಅವರನ್ನೂ ಅದೇ ಸ್ಥಿತಿಗೆ ತಳ್ಳುತ್ತಿದ್ದಾರೆ' ಎಂದು ಆರೋಪ ಮಾಡಿದ್ದರು.

ದೇವೇಗೌಡರಿಂದ ನೆನಪು

ದೇವೇಗೌಡರಿಂದ ನೆನಪು

ಶಿವಮೊಗ್ಗದಲ್ಲಿ ಪ್ರಚಾರ ನಡೆಸಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸಹ ಬಂಗಾರಪ್ಪ ನೆನಪು ಮಾಡಿಕೊಂಡಿದ್ದರು. '2004ರಲ್ಲಿ ಬಂಗಾರಪ್ಪ ಅವರು ಬಿಜೆಪಿಗೆ ಬಂದ ಕಾರಣ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಿತು. ನಂತರ ಬಂಗಾರಪ್ಪ ಅವರನ್ನು ಕೆಟ್ಟದಾಗಿ ನಡೆಸಿಕೊಂಡರು. ಆದ್ದರಿಂದ, ಅವರು ಪಕ್ಷ ತೊರೆದರು. ಬಿಜೆಪಿಗೆ ಬಂಗಾರಪ್ಪ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ' ಎಂದು ಹೇಳಿದ್ದರು.

ಬಂಗಾರಪ್ಪ ಅವರಿಂದ ರಾಜಕೀಯಕ್ಕೆ ಬಂದರು

ಬಂಗಾರಪ್ಪ ಅವರಿಂದ ರಾಜಕೀಯಕ್ಕೆ ಬಂದರು

ಸಾಗರ ಕ್ಷೇತ್ರದ ಮಾಜಿ ಶಾಸಕ ಮತ್ತು ಕಾಂಗ್ರೆಸ್ ನಾಯಕ ಬೇಳೂರು ಗೋಪಾಲಕೃಷ್ಣ ಅವರು, 'ಕುಮಾರ್ ಬಂಗಾರಪ್ಪ ಮತ್ತು ಹರತಾಳು ಹಾಲಪ್ಪ ಅವರು ರಾಜಕೀಯಕ್ಕೆ ಬಂದಿದ್ದೆ ಬಂಗಾರಪ್ಪ ಅವರಿಂದ. ಮಾತನಾಡಲು ಕಲಿತಿದ್ದು ಅವರಿಂದ. ರಾತ್ರೋರಾತ್ರಿ ಬಂಗಾರಪ್ಪ ಅವರನ್ನು ಮನೆಯಿಂದ ಹೊರ ಹಾಕಿದ ಭೂಪ ಕುಮಾರ್ ಬಂಗಾರಪ್ಪ' ಎಂದು ಟೀಕಿಸಿದ್ದಾರೆ.

ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ

ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ

ಮಧು ಬಂಗಾರಪ್ಪ ವಿರುದ್ದ ವಾಗ್ದಾಳಿ ನಡೆಸಿದ ಕುಮಾರ್ ಬಂಗಾರಪ್ಪ ಅವರು, 'ಬಂಗಾರಪ್ಪ ಅವರು ಈಡಿಗ ಸಮಾಜದ ಬಳಕೆಗಾಗಿ ಮೀಸಲಾಗಿಟ್ಟಿದ್ದ 87 ಎಕರೆ ಜಾಗವನ್ನು ಸ್ವಂತದ ಆಸ್ತಿ ಎಂಬಂತೆ ಮಧು ಬಂಗಾರಪ್ಪ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಮಾಜದ ಬಗ್ಗೆ ಅವರಿಗೆ ಕನಿಷ್ಠ ಕಾಳಜಿ ಇದ್ದರೆ ಆ ಜಾಗವನ್ನು ಸಮಾಜಕ್ಕೆ ಬಿಟ್ಟುಕೊಡಲಿ' ಎಂದು ಸವಾಲು ಹಾಕಿದ್ದರು.

English summary
Several leaders remembering Former Karnataka chief minister late S.Bangarappa during the Lok Sabha by election campaign. S.Bangarappa son Madhu Bangarappa JD(S)-Congress alliance candidate for election scheduled on November 3, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X