ಅಡಿಕೆ ಧಾರಣೆ ಪಾತಾಳಕ್ಕೆ, ಕಂಗೆಟ್ಟ ಬೆಳೆಗಾರ

Written By:
Subscribe to Oneindia Kannada

ಶಿರಸಿ, ಶಿವಮೊಗ್ಗ, ಜೂನ್ 10: ಅಡಿಕೆ ಧಾರಣೆ ಕಳೆದ ಮೂರು ತಿಂಗಳಿನಿಂದ ಇಳಿಕೆಯ ಹಾದಿಯಲ್ಲಿ ಸಾಗಿದ್ದು ಇದೀಗ 3 ವರ್ಷಗಳ ಕನಿಷ್ಠ ಮಟ್ಟಕ್ಕೆ ಬಂತು ತಲುಪಿದೆ.

ಶಿರಸಿ, ಶಿವಮೊಗ್ಗ, ಸಿದ್ದಾಪುರ, ಯಲ್ಲಾಪುರ, ಸಾಗರ, ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ನಿರಂತರವಾಗಿ ಕುಸಿಯುತ್ತಿದೆ. ರಾಶಿ (ಶಿರಸಿ ಮಾರುಕಟ್ಟೆ) ಕ್ವಿಂಟಾಲಿಗೆ 21 ಸಾವಿರ ರು., ಬೆಟ್ಟೆ 19 ಸಾವಿರ ರು., ಚಾಲಿ 23 ಸಾವಿರ ರು. ಗೆ ಬಂದು ತಲುಪಿದೆ.[ಚೀನಾಕ್ಕೆ ಅಡಿಕೆ ರಫ್ತು ಮಾಡಲಿದೆ ಕ್ಯಾಂಪ್ಕೋ]

sirsi

ವ್ಯಾಪಾರಿಗಳು ಅಡಿಕೆ ಕೊಳ್ಳಲು ಹಿಂದೇಟು ಹಾಕುತ್ತಿರುವುದು ದರ ಇಳಿಕೆಗೆ ಮೂಲ ಕಾರಣ. ಜತೆಗೆ ಗುಟ್ಕಾ ನಿಷೇಧವೆಂಬ ಗುಮ್ಮ ಇನ್ನು ದೂರವಾಗಿಲ್ಲ.[ಅಡಿಕೆ ಮಾನ ಕಾಪಾಡಲು ಮುಂದಾದ ಕೇಂದ್ರ ಸರ್ಕಾರ]

ಎರಡು ವರ್ಷಗಳ ಹಿಂದೆ ಕ್ವಿಂಟಲ್‌ಗೆ 60-80 ಸಾವಿರ ರು. ಬೆಲೆ ಕಂಡಿದ್ದ ಬೆಳೆಗಾರರು ಈ ವರ್ಷವೂ ಧಾರಣೆ ಏರಬಹುದು ಎಂಬ ನಿರೀಕ್ಷೆಯಲ್ಲಿ ಇದ್ದರು. ವರ್ಷದ ಆರಂಭದಲ್ಲಿ ಕ್ವಿಂಟಾಲ್ ಗೆ 30 ಸಾವಿರ ಇದ್ದಾಗ ಏರಿಕೆಯ ನಿರೀಕ್ಷೆಯಲ್ಲಿ ಅಡಿಕೆ ದಾಸ್ತಾನು ಮಾಡಲಾಗಿತ್ತು. ಆದರೆ ಇದೀಗ ಬೆಳೆಗಾರ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.

ದುಬಾರಿ ಗೊಬ್ಬರ, ಕಾರ್ಮಿಕರ ಅಲಭ್ಯತೆ, ಅಡಿಕೆ ಔಷಧಿ ಸಿಂಪಡಣೆ, ಸಂಸ್ಕರಣೆಯ ಪರದಾಟ ಎಲ್ಲವೂ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗೆ ಮುಂದುವರಿದರೆ ತೋಟದ ಕೆಲಸವನ್ನು ಅರ್ಧಕ್ಕೆ ಬಿಟ್ಟು ನಗರ ಸೇರಬೇಕಾಗುತ್ತದೆ ಎಂದು ಶಿರಸಿಯ ಬೆಳೆಗಾರ ವೆಂಕಟ್ರಮಣ ಹೆಗಡೆ ಆತಂಕ ವ್ಯಕ್ತಪಡಿಸುತ್ತಾರೆ.[ಅರೇಕಾ ಟೀ ಮಾರುಕಟ್ಟೆಗೆ, ನೀವು ಸ್ವಾದ ನೀಡಿದ್ರಾ!]

ಈ ಬಾರಿ ಮುಂಗಾರು ಆರಂಭವಾಗಿದ್ದು ಅಡಿಕೆಗೇನಾದರೂ ಕೊಳೆ ರೋಗ ಅಂಟಿಕೊಂಡಲ್ಲಿ ಬೆಳೆಗಾರ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳಬೇಕಾತ್ತದೆ.

ಅಡಿಕೆ ಧಾರಣೆ ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Shivamogga/Sirsi: The price of arecanut has declined by around 10 per cent, in a span of three months, dashing farmers’ hopes. The price of ‘rashi’ 'saraku’ and other variety was continuously falling down. The price touches under Rs. 20 thousand for 100 kilo gram.
Please Wait while comments are loading...