'ಚಂದಕ್ಕಿಂತ ಚೆಂದ ನೀನೇ ಸುಂದರ' ಹಾಡು ಬರೆದ ಇಟಗಿ ಈರಣ್ಣ ಇನ್ನಿಲ್ಲ

Posted By:
Subscribe to Oneindia Kannada

ಶಿವಮೊಗ್ಗ, ಮಾರ್ಚ್. 13 : ಕನ್ನಡ ಶಾಯರಿಗಳ ಖ್ಯಾತ ಸಾಹಿತಿ ಪ್ರೊ. ಇಟಗಿ ಈರಣ್ಣ (68) ಅವರು ಶಿವಮೊಗ್ಗದ ತಮ್ಮ ನಿವಾಸದಲ್ಲಿ ಭಾನುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಇವರು, 6 ವರ್ಷಗಳ ಹಿಂದೆ ನಿವೃತ್ತಿರಾಗಿ ಶಿವಮೊಗ್ಗದಲ್ಲಿ ನೆಲೆಸಿದ್ದರು. [ಈರಣ್ಣ ಅಂದ್ರೆ ನೆನಪಾಗೋದೇ 'ಚೆಂದಕ್ಕಿಂತ ಚೆಂದ' ಹಾಡು: ದೇಸಾಯಿ ನೆನಪು]

ಈರಣ್ಣ ಅವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಶಿವಮೊಗ್ಗದಮಂಡ್ಲಿಯ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಂಟುಂಬದ ಸದಸ್ಯರು ತಿಳಿಸಿದ್ದಾರೆ.[ಮನಸು ಬೆಚ್ಚಗಾಗಿಸುವ ಕನ್ನಡ ಶಾಯರಿಗಳು]

Famous kannada shayari writer prof Itagi Eranna passes away

ಕನ್ನಡದಲ್ಲಿ ಶಾಯರಿ ಬರೆಯಲಾರಂಭಿಸಿದ ಸಾಹಿತಿ ಎಂದೇ ಖ್ಯಾತಿಗಳಿಸಿರುವ ಈರಣ್ಣ ಅವರ ಶಾಯರಿಗಳನ್ನು ಕನ್ನಡದ ಸ್ಪರ್ಶ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

ವಿಪರ್ಯಾಸವೆಂದರೆ, ಈರಣ್ಣ ಅವರು, ಇತ್ತೀಚೆಗಷ್ಟೇ ಅವರ ತಾಯಿಯನ್ನು ಕಳೆದುಕೊಂಡಿದ್ದರು.

ಅಲ್ಲದೆ, ಇವರು ಸ್ಪರ್ಶ ಚಿತ್ರದಲ್ಲಿ ಮೂಡಿಬಂದ 'ಚೆಂದಕಿಂತ ಚೆಂದ' ಹಾಡನ್ನು ಸಹ ಬರೆದಿದ್ದಾರೆ. ಇಟಗಿ ಈರಣ್ಣ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಹಿರೇ ಹಡಗಲಿ ಗ್ರಾಮದವರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Famous kannada shayari writer prof Itagi Eranna passed away. He was 68. He passed away his house at Shimoga, March 13.
Please Wait while comments are loading...