ಶಿವಮೊಗ್ಗ, ಜನವರಿ 08: ಮಂಗನ ಕೈಲಿ ಮಾಣಿಕ್ಯ ಕೊಟ್ಟಂತೆ, ಹುಚ್ಚನ ಕೈಯಲ್ಲಿ ಆಡಳಿತ ನೀಡಿದಂತಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ, ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಜ್ಞಾನ ಇಲ್ಲದ ಮುಖ್ಯಮಂತ್ರಿಯನ್ನ ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಸಾಧನ ಸಮಾವೇಶದಲ್ಲಿ ಬರೀ ವಿರೋಧ ಪಕ್ಷವನ್ನು ಟೀಕೆ ಮಾಡುವುದಕ್ಕೆ ಬಳಸಿಕೊಳ್ಳಲಾಗುತ್ತಿದೆ.ಸಾಧನಾ ಸಮಾವೇಶದಲ್ಲಿ ಸರ್ಕಾರಿ ಅದಿಕಾರಿಗಳನ್ನು ಬಳಸಿಕೊಂಡು ಚುನಾವಣೆ ಪ್ರಚಾರ ಮಾಡಲಾಗುತ್ತಿದೆ ಎಂದು ದೂರಿದರು.
'ಮಹದಾಯಿ ಬಿಕ್ಕಟ್ಟು ಪರಿಹಾರ ಕಾಣದಿರುವುದಕ್ಕೆ ಕಾಂಗ್ರೆಸ್ ಕಾರಣ'
ತೆರಿಗೆ ಹಣದಲ್ಲಿ ಸಾಧನಾ ಸಮಾವೇಶದಲ್ಲಿ ಮಾಡಿ ಪಕ್ಷದ ಪ್ರಚಾರ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಕೊಲೆಗಡುಕರ ಸ್ವರ್ಗವಾಗಿದೆ. ಇದಕ್ಕೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರದೇ ನೇತೃತ್ವವಹಿಸಿದ್ದಾರೆ. ಹಿಂದೂ ಮುಸ್ಲಿಂ ಬೆಂಕಿ ಹಚ್ಚುವುದನ್ನ ಯಾರು ಕೂಡ ಸಹಿಸುವುದಿಲ್ಲ.
ಅಂತೆಯೇ ವೀರಶೈವ- ಲಿಂಗಾಯತರಿಗೂ ಬೆಂಕಿ ಹಚ್ಚಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ಹಣವನ್ನ ಸಾಧನಾ ಸಮಾವೇಶದಲ್ಲಿ ಬಳಸಬೇಡಿ, ಕಾಂಗ್ರೆಸ್ ಪಕ್ಷದ ಪ್ರಚಾರಕ್ಕೆ ಸಾಧನ ಸಮಾವೇಶ ವೇದಿಕೆ ಬಳಸಬೇಡಿ, ಯಾರಪ್ಪನ ದುಡ್ಡೋ ಸಿದ್ದಪ್ಪ ನ ಜಾತ್ರೆ ಅಂದಂತೆ ಆಗುತ್ತದೆ.
ಹಿಂದೂ ಮುಸ್ಲಿಂ ಜನಕ್ಕೆ ಬಿಜೆಪಿಯವರು ಒಂದೇ ರೀತಿ ಕಾಣುತ್ತಾರೆ. ಹಿಂದೂ ಮುಖಂಡರ ಹತ್ಯೆಯಾದಾಗ ಸಿಎಂ ಯಾರ ಮನೆಗೂ ಹೋಗಿಲ್ಲ. ಸಾವಿನಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಹಿಂದೂ ಹೆಣಗಳ ಮೇಲೆ ರಾಜಕೀಯ ಮಾಡುತ್ತಿದೆ ಎಂದು ದೂರಿಸರು.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!