ಧಗಧಗನೆ ಹೊತ್ತಿ ಉರಿದ ಟ್ರಾಕ್ಟರ್: ತಪ್ಪಿದ ಭಾರಿ ಅನಾಹುತ

Posted By: ಶಿವಮೊಗ್ಗ ಪ್ರತಿನಿಧಿ
Subscribe to Oneindia Kannada

ಶಿವಮೊಗ್ಗ, ಜನವರಿ 06: ಕರೆಂಟ್ ವೈರುಗಳು ಟ್ರಾಕ್ಟರ್ ಗೆ ತಗುಲಿ ಟ್ರ್ಯಾಕ್ಟರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಟ್ರ್ಯಾಕ್ಟರ್ ಜತೆಗೆ ಸಾವಿರಗಟ್ಟಲೆ ಬೆಲೆ ಬಾಳುವ ಹುಲ್ಲು ಕೂಡ ಸುಟ್ಟು ಭಸ್ಮವಾದ ಘಟನೆ ಶನಿವಾರ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಹೊಳೆ ಬಸ್​ ಸ್ಟಾಪ್​ ಹತ್ತಿರದ ಎನ್​ಸಿಸಿ ಕಚೇರಿ ಪಕ್ಕದ ರಸ್ತೆಯಲ್ಲಿ, ಘಟನೆ ನಡೆದಿದೆ. ಮಹಾವೀರ ಗೋಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದ ಹುಲ್ಲು ಬೆಂಕಿಗಾಹುತಿಯಾಗಿದೆ. ಬಿ.ಹೆಚ್.ರಸ್ತೆಯಿಂದ ಗೋಶಾಲೆಗೆ ತೆರಳುವ ರೋಡ್​​ನಲ್ಲಿ ಕರೆಂಟ್​ ವೈರ್​​ಗಳು ಕೆಳಗೆ ಜೋತು ಬಿದ್ದಿವೆ.

ಟ್ರಾಕ್ಟರ್ ರಸ್ತೆಗೆ ಎಂಟ್ರಿ ಕೊಡುತ್ತಿದ್ದಂತೆ, ಹುಲ್ಲಿಗೆ ವೈರ್ ತಗುಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕ್ಷಣಾರ್ಧದಲ್ಲೇ ತಪ್ಪಿತು ಭಾರೀ ಅನಾಹುತ: ಹುಲ್ಲಿಗೆ ಬೆಂಕಿ ಹೊತ್ತುಕೊಂಡಿದ್ದನ್ನು ಸ್ಥಳೀಯರು ತಿಳಿಸುತ್ತಿದ್ದಂತೆ, ಟ್ರಾಕ್ಟರ್ ಚಾಲಕ ಎಚ್ಚೆತ್ತುಕೊಂಡಿದ್ದಾನೆ. ಕೂಡಲೇ ಟ್ರಾಕ್ಟರ್​​ ಟ್ರಾಲಿ ಮತ್ತು ಎಂಜಿನ್ ಬೇರ್ಪಡಿಸಿದ್ದಾನೆ. ಇನ್ನು, ಟ್ರಾಕ್ಟರ್​ ನಿಲ್ಲಿಸಿದ ಜಾಗದ ಪಕ್ಕದಲ್ಲೇ ಅಂಗನವಾಡಿ ಕೇಂದ್ರವಿದೆ. ವಿಷಯ ಗೊತ್ತಾಗುತ್ತಿದ್ದಂತೆ ಪೋಷಕರು ಸ್ಥಳದಲ್ಲಿ ಜಮಾಯಿಸಿದರು.

Electricity wire causes burn tractor

ಬೆಂಕಿ ಹೊತ್ತುಕೊಂಡ ವಿಚಾರ ಗೊತ್ತಾಗುತ್ತಿದ್ದಂತೆ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿದರು. ಪುರಲೆಯ ಉಮೇಶ್​ ಅವರಿಗೆ ಸೇರಿದ ಟ್ರಾಕ್ಟರ್​ನಲ್ಲಿ, ಗೋಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದ, ಸುಮಾರು 20 ಸಾವಿರ ಮೌಲ್ಯದ ಹುಲ್ಲು ಸುಟ್ಟು ಭಸ್ಮವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A tractor which transporting grass, set fire immediately after electricity cables touched near Shivamogga bus stand on Saturday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ