ಅತ್ಯಾಚಾರ ಕೇಸ್ : ಮಾಜಿ ಸಚಿವ ಹರತಾಳು ಹಾಲಪ್ಪಗೆ ಕ್ಲೀನ್ ಚಿಟ್

Posted By:
Subscribe to Oneindia Kannada

ಶಿವಮೊಗ್ಗ, ಆಗಸ್ಟ್ 17: ಒಂದು ದಿನ ಕೂಡಾ ಜೈಲು ವಾಸ ಅನುಭವಿಸದೆ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಹಾರಿ ಜಾಮೀನು ಪಡೆದು ಆರಾಮಾಗಿರುವ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಆಗಸ್ಟ್ 17ರಂದು ಶುಭ ಸುದ್ದಿ ಸಿಕ್ಕಿದೆ.

ಚಂದ್ರಾವತಿ ಬಟ್ಟೆ ಮೇಲೆ ಇತ್ತು ಹಾಲಪ್ಪ ವೀರ್ಯ : ಸಿಐಡಿ

ಶಿವಮೊಗ್ಗದ 2ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಏಳೆಂಟು ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ತೀರ್ಪು ಹೊರಬಂದಿದ್ದು, ಹಾಲಪ್ಪ ಅವರನ್ನು ದೋಷಮುಕ್ತಗೊಳಿಸಲಾಗಿದೆ.

2009 ರ ನವೆಂಬರ್ 26 ರಂದು ಸಂತ್ರಸ್ಥ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಅಂದು ಸಚಿವರಾಗಿದ್ದ ಹಾಲಪ್ಪ ರಾಜೀನಾಮೆ ನೀಡಿದ್ದರು. ಐ.ಪಿ.ಸಿ. ಸೆಕ್ಷನ್ 376, 342, 506, 341 ಹಾಗೂ 34 ರ ಅಡಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ನಡೆಸಿದ್ದರು.

District court gives clean chit to former minister Hartal Halappa

ಮಾಜಿ ಸಚಿವ ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣವನ್ನು ಸಹಮತದ ಸೆಕ್ಸ್ ಎಂದು ಸಿಐಡಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂಬ ಸುದ್ದಿಗೆ ಹೊಸ ತಿರುವು ಸಿಕ್ಕಿತ್ತು. ಹಾಲಪ್ಪ ನಡೆಸಿದ್ದು ಅತ್ಯಾಚಾರ ಎಂದು ಹೈದರಾಬಾದಿನ ಲ್ಯಾಬ್ ವರದಿ ನೀಡಿದ್ದು, ಎರಡೆರಡು ಬಾರಿ ಪರೀಕ್ಷೆ ನಡೆಸಿ ದೃಢಪಡಿಸಲಾಗಿದೆ ಎಂದು ಸಿಐಡಿ ಮೂಲಗಳು ಹೇಳಿದ್ದವು.

ಸಿಐಡಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ 2009ರ ನವೆಂಬರ್ 27ರಂದು ರಾತ್ರಿ ಹಾಲಪ್ಪ ತನ್ನ ಗೆಳೆಯ ವೆಂಕಟೇಶಮೂರ್ತಿಯ ಪತ್ನಿ ಚಂದ್ರಾವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬುದು ಉಲ್ಲೇಖಿಸಲಾಗಿದೆ. ಈ ಐಪಿಸಿ ಸೆಕ್ಷನ್ 376ರ ಅನ್ವಯ ಆರೋಪಪಟ್ಟಿಯನ್ನು ಬೆಂಗಳೂರು ಸಿಐಡಿ ಪತ್ತೆ ನಿರೀಕ್ಷಕ ಎಂ ಎಸ್ ಕೌಲಪುರೆ ಅವರು ಸಲ್ಲಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shihvamogga 2nd JMFC (district court ) gives clean chit to former minister Hartal Halappa in Chandravathi rape case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ