ದೇವೇಂದ್ರ ಫಡ್ನವೀಸ್ ಶಿವಮೊಗ್ಗ ಭೇಟಿ ದಿಢೀರ್ ರದ್ದು!

Posted By: Gururaj
Subscribe to Oneindia Kannada

ಶಿವಮೊಗ್ಗ, ಡಿಸೆಂಬರ್ 28 : ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕರ್ನಾಟಕ ಭೇಟಿ ಕೊನೆ ಕ್ಷಣದಲ್ಲಿ ರದ್ದಾಗಿದೆ. ಗುರುವಾರ ಸಂಜೆ ಅವರು ಶಿವಮೊಗ್ಗದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಬೇಕಿತ್ತು.

ಶಿಕಾರಿಪುರದಲ್ಲಿ ಪರಿವರ್ತನಾ ಯಾತ್ರೆ, ಸ್ಪರ್ಧೆ ಬಗ್ಗೆ ಬಿಎಸ್‌ವೈ ಮೌನ!

ಕರ್ನಾಟಕ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿವಮೊಗ್ಗ ತಲುಪಿದೆ. ಗುರುವಾರ ಮೂರು ಕಡೆ ಪರಿವರ್ತನಾ ಯಾತ್ರೆಯ ಸಮಾವೇಶ ಆಯೋಜನೆಗೊಂಡಿದೆ.

ಉತ್ತರ ಕರ್ನಾಟಕದಿಂದ ಬಿಎಸ್‌ವೈ ಸ್ಪರ್ಧೆ : ಯಾರು, ಏನು ಹೇಳಿದರು?

ಶಿವಮೊಗ್ಗ ನಗರದಲ್ಲಿ ಗುರುವಾರ ಸಂಜೆ 6 ಗಂಟೆಗ ಪರಿವರ್ತಯಾ ಯಾತ್ರೆಯ ಸಮಾವೇಶ ನಡೆಯಲಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಸಮಾವೇಶ ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ, ಕೊನೆ ಕ್ಷಣದಲ್ಲಿ ರಾಜ್ಯ ಭೇಟಿಯನ್ನು ಅವರು ರದ್ದುಗೊಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಯಡಿಯೂರಪ್ಪ ಅವರ ತವರು ಜಿಲ್ಲೆಯಾದರೂ ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 1 ಕ್ಷೇತ್ರದಲ್ಲಿ ಮಾತ್ರ ಜಯಗಳಿಸಿದೆ. ಈ ಬಾರಿ 150 ಸ್ಥಾನಗಳಲ್ಲಿ ಜಯಗಳಿಸುವ ಗುರಿ ಹೊಂದಿರುವ ಯಡಿಯೂರಪ್ಪ ಜಿಲ್ಲೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಜಯಗಳಿಸಲು ತಂತ್ರ ರೂಪಿಸಿದ್ದಾರೆ.

ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಭೇಟಿ ರದ್ದು

ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಭೇಟಿ ರದ್ದು

ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಬುಧವಾರ ಉತ್ತರ ಕರ್ನಾಟಕ ಬಂದ್ ನಡೆದಿದೆ. ವಿವಿಧ ಜಿಲ್ಲೆಗಳಲ್ಲಿ ರೈತ ಸಂಘಟನೆಗಳು ಇಂದೂ ಪ್ರತಿಭಟನೆ ನಡೆಸುತ್ತಿವೆ. ಮಹಾರಾಷ್ಟ್ರ ಸಹ ಮಹದಾಯಿ ವಿವಾದಕ್ಕೆ ಒಳ ಪಡುವ ರಾಜ್ಯ. ಆದ್ದರಿಂದ, ದೇವೇಂದ್ರ ಫಡ್ನವೀಸ್ ತಮ್ಮ ಭೇಟಿಯನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಿದ್ದಾರೆ.

ಡಿ.29ರಂದು ಮೂರು ಸಮಾವೇಶ

ಡಿ.29ರಂದು ಮೂರು ಸಮಾವೇಶ

ಬುಧವಾರ ಸಂಜೆ ಪರಿವರ್ತನಾ ಯಾತ್ರೆ ಶಿವಮೊಗ್ಗ ಜಿಲ್ಲೆ ಪ್ರವೇಶಿಸಿದೆ. ಬುಧವಾರ ಶಿಕಾರಿಪುರ ಮತ್ತು ಸೊರಬದಲ್ಲಿ ಸಮಾವೇಶ ನಡೆದಿದೆ. ಗುರುವಾರ ಸಾಗರ, ಶಿವಮೊಗ್ಗ ಗ್ರಾಮಾಂತರ, ಶಿವಮೊಗ್ಗ ನಗರದಲ್ಲಿ ಮೂರು ಸಮಾವೇಶಗಳು ಆಯೋಜನೆಯಾಗಿವೆ.

ವಿವಿಧ ಮುಖ್ಯಮಂತ್ರಿಗಳು ಭಾಗಿ

ವಿವಿಧ ಮುಖ್ಯಮಂತ್ರಿಗಳು ಭಾಗಿ

ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ವಿವಿಧ ಮುಖ್ಯಮಂತ್ರಿಗಳು ಪಾಲ್ಗೊಳ್ಳುವುದು ಇದೇ ಮೊದಲಲ್ಲ.

* ನವೆಂಬರ್ 20ರಂದು ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ನಡೆದ ಪರಿವರ್ತನಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

* ಡಿಸೆಂಬರ್ 21ರಂದು ಹುಬ್ಬಳ್ಳಿಯಲ್ಲಿ ನಡೆದ ಪರಿವರ್ತನಾಯಾತ್ರೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದರು.

* ಡಿಸೆಂಬರ್ 24ರಂದು ಹಾವೇರಿಯಲ್ಲಿ ನಡೆದ ಪರಿವರ್ತನಾಯಾತ್ರೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಭಾಷಣ ಮಾಡಿದ್ದರು.

ಬಿ.ಎಸ್.ಯಡಿಯೂರಪ್ಪ ತವರು

ಬಿ.ಎಸ್.ಯಡಿಯೂರಪ್ಪ ತವರು

ಕರ್ನಾಟಕ ಬಿಜೆಪಿ ಅಧ್ಯಕ್ಷ, 2018ರ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ತವರು ಕ್ಷೇತ್ರ ಶಿವಮೊಗ್ಗ. ಜಿಲ್ಲೆಗೆ ಬುಧವಾರ ಪರಿವರ್ತನಾ ಯಾತ್ರೆ ತಲುಪಿದೆ. ಶಿವಮೊಗ್ಗ ನಗರ ಕ್ಷೇತ್ರ ಕಾಂಗ್ರೆಸ್ ವಶದಲ್ಲಿದ್ದು ಕ್ಷೇತ್ರದ ಶಾಸಕರು ಬಿ.ಎನ್.ಪ್ರಸನ್ನ ಕುಮಾರ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Maharashtra Chief Minister Devendra Fadnavis Karnataka tour cancelled due to farmers protest demanding the implementation of the Mahadayi drinking water project. Devendra Fadnavis scheduled to visit Shivamogga on December 28 evening to participate in BJP Parivartan Yatra.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ