ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಹಾರ ಅರಸಿಕೊಂಡು ಬಂದ ಜಿಂಕೆ ಧರೆಯಿಂದ ಕೆಳಗೆ ಬಿದ್ದು ಸಾವು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜುಲೈ.02: ಮೇವನ್ನು ಅರಸಿಕೊಂಡು ಬಂದ ಜಿಂಕೆಯೊಂದು ಆಯತಪ್ಪಿ ಧರೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹೊಸನಗರ ತಾಲೂಕಿನ ಸುಳುಗೋಡು ಗ್ರಾಮದ ಬಳಿಯಿರುವ ಅರಣ್ಯದಲ್ಲಿ ನಡೆದಿದೆ.

ಅರಣ್ಯದಂಚಿನ ಧರೆಯ ಪಕ್ಕ ಮೇವನ್ನು ಅರಸಿಕೊಂಡು ಬಂದ ಜಿಂಕೆ ಆಯತಪ್ಪಿ ಸುಮಾರು 30 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ. ಬಿದ್ದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ಬಳಿಕ ಜಿಂಕೆಯ ಅಂತ್ಯ ಸಂಸ್ಕಾರ ನಡೆಸಿದರು.

ಕಾಡು ಬಿಟ್ಟು ಶಾಲೆಗೆ ಬಂದ ಜಿಂಕೆಗೆ ಕಾಂಪೌಂಡ್ ಹಾರುವಾಗ ಗಾಯಕಾಡು ಬಿಟ್ಟು ಶಾಲೆಗೆ ಬಂದ ಜಿಂಕೆಗೆ ಕಾಂಪೌಂಡ್ ಹಾರುವಾಗ ಗಾಯ

ಮಲೆನಾಡಿನಲ್ಲಿ ವನ್ಯ ಜೀವಿ ಸಂಕುಲಗಳ ಪ್ರಮಾಣ ಹೆಚ್ಚಿದ್ದು, ಅವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಹೆಚ್ಚಿನ ಗಮನ ನೀಡಬೇಕಾಗಿದೆ. ಈ ಭಾಗದ ಅರಣ್ಯ ಪ್ರದೇಶದಲ್ಲಿ ಆಗಾಗ ಇಂತಹ ಘಟನೆಗಳು ನಡೆಯುತ್ತಿದ್ದು, ಪ್ರಾಣಿಗಳ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ.

Deer falling from 30 feet height and died

ವಲಯ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಅಣ್ಣಯ್ಯ ಗೌಡ ಮಾತನಾಡಿ, ಜಿಂಕೆ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಬಿದ್ದಿದರಿಂದ ಭಯಪಟ್ಟು ಹೃದಯಾಘಾತ ಸಂಭವಿಸಿ ಮೃತಪಟ್ಟಿದೆ.
ವೈದ್ಯರ ಮರಣೋತ್ತರ ಪರೀಕ್ಷೆಯಿಂದ ಈ ವಿಚಾರ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

English summary
Deer falling from 30 feet height and died from heart attack. This incident occurs Sulugodu village forest in Hosnagar taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X