ಸಿಗಂದೂರಿಗೆ ಸೇತುವೆ : ದಶಕಗಳ ಕನಸು ನನಸು

Posted By: Gururaj
Subscribe to Oneindia Kannada

ಶಿವಮೊಗ್ಗ, ಡಿಸೆಂಬರ್ 22 : ಸಾಗರ ತಾಲೂಕಿನ ಸಿಗಂದೂರಿಗೆ ಹೋಗಲು ಸೇತುವೆ ಬೇಕು ಎಂಬ ದಶಕಗಳ ಕೂಗಿಗೆ ಸ್ಪಂದನೆ ಸಿಕ್ಕಿದೆ. 600 ಕೋಟಿ ವೆಚ್ಚದಲ್ಲಿ ಸೇತುವೆ ಮತ್ತು ರಸ್ತೆ ಅಭಿವೃದ್ಧಿ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಶರಾವತಿ ಹಿನ್ನೀರಿನ ಕಳಸವಳ್ಳಿ-ಅಂಬಾರಗೋಡ್ಲು ಪ್ರದೇಶದಲ್ಲಿ ಸೇತುವೆ ನಿರ್ಮಾಣವಾಗಲಿದೆ. ಸೇತುವೆ ನಿರ್ಮಾಣಕ್ಕಾಗಿ ಮಣ್ಣು ಪರೀಕ್ಷೆ ಸಹ ಆರಂಭವಾಗಿದೆ. ಈ ಯೋಜನೆ ಬಗ್ಗೆ ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆ ಹೊರಬೀಳಿದೆ.

ಸಾಗರ : ಟಿಕೆಟ್‌ ಗಲಾಟೆ, ರೈಲ್ವೆ ಸಿಬ್ಬಂದಿ ಮೇಲೆ ಹಲ್ಲೆ

Decades old dream bridge to Sigandur village come true soon

ಸಿಂಗದೂರು ಚೌಡೇಶ್ವರಿ ದೇವಾಲಯಕ್ಕೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ತೆರಳುವ ನೂರಾರು ಜನರು ಪ್ರತಿದಿನ ಲಾಂಚ್‌ನಲ್ಲಿ ಪ್ರಯಾಣ ಬೆಳೆಸುತ್ತಾರೆ. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಲಿದೆ. ಬಳಿಕ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದೆ.

ಸಿಗಂದೂರು ದೇವಸ್ಥಾನಕ್ಕೆ ನನ್ನ ತೀರ್ಥಯಾತ್ರೆ- ಶಾಮ್

ದೇವಾಲಯಕ್ಕೆ ಪ್ರತಿದಿನ ನೂರಾರು ಪ್ರವಾಸಿಗಳು ರಾಜ್ಯ, ಹೊರರಾಜ್ಯದಿಂದ ಆಗಮಿಸುತ್ತಾರೆ. ಆದರೆ, ನದಿಯನ್ನು ದಾಟಲು ವಾಹನಗಳ ಸಮೇತ ಲಾಂಚ್‌ ಅವಲಂಬಿಸುವುದು ಅನಿವಾರ್ಯವಾಗಿತ್ತು. ಸೇತುವೆ ಬೇಕು ಎಂಬುದು ಇಲ್ಲಿನ ಜನರ ದಶಕಗಳ ಬೇಡಿಕೆಯಾಗಿತ್ತು.

ಹೇಗಿರಲಿದೆ ಸೇತುವೆ? : 600 ಕೋಟಿ ವೆಚ್ಚದಲ್ಲಿ ಸೇತುವೆ ಮತ್ತು ಇದಕ್ಕೆ ಸಂಪರ್ಕಿಸುವ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಸೇತುವೆ ಉದ್ದ 2.1 ಕಿ.ಮೀ., 10 ಮೀಟರ್ ಅಗಲ ಹೊಂದಿರುತ್ತದೆ.

ಸಾಗರ ಕ್ಷೇತ್ರದ ಶಾಸಕ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಈ ಕುರಿತು ಹೇಳಿಕೆ ನೀಡಿದ್ದಾರೆ. 'ಸುಮಾರು 50 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದೆ. ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ' ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Decades old dream to come true soon. The Union Government has finally given a green signal to construct bridge across Sharavathi river backwater to connect Kalasavalli and Ambaragodlu villages in Sagara taluk, Shivamogga district. There has been a sharp increase in the flow of devotees to the goddess Chowdeshwari temple in Sigandur village on the island in recent times.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ